ಪರಶಿವಮೂರ್ತಿ ದೋಟಿಹಾಳ
ರೇಷನ್ ಕಾರ್ಡ್‌ನಲ್ಲಿ ಇರುವ ಕುಟುಂಬದ ಮುಖ್ಯಸ್ಥರ ಬದಲಾವಣೆ ಬಯಸಿದ ಅರ್ಜಿಗಳನ್ನು ಸಿಡಿಪಿಒ ಕಚೇರಿಯಲ್ಲಿ ಅಗತ್ಯ ದಾಖಲೆಯೊಂದಿಗೆ ಸಲ್ಲಿಸಬೇಕಿದೆ. ಆಧಾರ್ ಕಾರ್ಡ್, ಬ್ಯಾಂಕ್ ಪಾಸ್‌ಬುಕ್ ಹಾಗೂ ರೇಷನ್ ಕಾರ್ಡ್‌ನೊಂದಿಗೆ ಫಲಾನುಭವಿಗಳ ಹೆಸರು ಬದಲಾವಣೆ ಮಾಡಿಕೊಳ್ಳಬಹುದು. ಹೀಗೆ ಅರ್ಜಿ ಸಲ್ಲಿಸಲು ಬಂದವರಿಂದ ಕಚೇರಿ ಸಿಬ್ಬಂದಿ ಹಣ ಪಡೆಯುತ್ತಿದ್ದಾರೆ ಎಂದು ಅರ್ಜಿ ಸಲ್ಲಿಸಲು ಹೋದವರು ಹೇಳಿದ್ದಾರೆ.
ಗ್ಯಾರಂಟಿ ಸಮಿತಿ ನಿಷ್ಕ್ರಿಯ: ಗ್ಯಾರಂಟಿ ಯೋಜನೆ ಸಮರ್ಪಕ ಅನುಷ್ಠಾನಕ್ಕಾಗಿ ತಾಲೂಕಿನಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ರಚಿಸಲಾಗಿದೆ. ಅಧ್ಯಕ್ಷರು, ಸದಸ್ಯರು ಇದ್ದಾರೆ. ಈ ಸಮಿತಿಯವರು ಕಾಲಕಾಲಕ್ಕೆ ಸಿಡಿಪಿಒ ಕಚೇರಿಗೆ ಭೇಟಿ ನೀಡಿ, ಗೃಹಲಕ್ಷ್ಮೀ ಯೋಜನೆಯ ಕುರಿತು ಮಾಹಿತಿ ಪಡೆದುಕೊಂಡಿದ್ದರೆ ಇಂತಹ ಸಂದರ್ಭ ಬರುತ್ತಿರಲಿಲ್ಲ. ಗ್ಯಾರಂಟಿ ಸಮಿತಿ ನಿಷ್ಕ್ರಿಯಗೊಂಡಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.ಗ್ಯಾರಂಟಿ ಸದಸ್ಯರ ಆರೋಪ: ಕಳೆದ ಮೂರು ತಿಂಗಳಿಂದ ಗ್ಯಾರಂಟಿ ಯೋಜನೆಗಳ ಸಲುವಾಗಿ ಯಾವ ಸಭೆಯನ್ನೂ ಮಾಡಿಲ್ಲ. ಗ್ಯಾರಂಟಿ ಸಮಿತಿ ಅಧ್ಯಕ್ಷರು ಸ್ಪಂದಿಸುತ್ತಿಲ್ಲ. ಜನರಿಗೆ ಸೇವೆ ಕೊಡುವ ಸಲುವಾಗಿ ಸಮಿತಿ ಸದಸ್ಯರಾಗಿದ್ದೇವೆ. ಆದರೆ ಜನರಿಗೆ ಉತ್ತಮ ಸೇವೆ ಕೊಡಲಾಗುತ್ತಿಲ್ಲ ಎಂದು ಗ್ಯಾರಂಟಿ ಸಮಿತಿ ಸದಸ್ಯರೊಬ್ಬರು ''''''''ಕನ್ನಡಪ್ರಭ'''''''' ಎದುರು ಖುದ್ದು ಆರೋಪಿಸಿದರು.
ಮಾಹಿತಿ ಪಡೆದು ಕ್ರಮ: ಕುಷ್ಟಗಿ ಸಿಡಿಪಿಒ ಕಚೇರಿ ಸರ್ಕಾರದ್ದು. ಅರ್ಜಿಯನ್ನು ಉಚಿತವಾಗಿ ಸಲ್ಲಿಸಬೇಕಿದೆ. ಜನರು ಹಣ ಕೊಡಬಾರದು ಹಾಗೂ ಇಲಾಖೆ ಸಿಬ್ಬಂದಿ ಹಣ ಕೇಳಬಾರದು. ಈ ಕುರಿತು ಮಾಹಿತಿ ಪಡೆದುಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕುಷ್ಟಗಿ ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕಾಧ್ಯಕ್ಷ ಫಾರುಕ್ ಡಾಲಾಯತ್ ಹೇಳಿದರು.ಸಿಡಿಪಿಒ ಕಚೇರಿಯಲ್ಲಿ ಗೃಹಲಕ್ಷ್ಮೀ ಯೋಜನೆ ಅರ್ಜಿ ಸಲ್ಲಿಸಲು ಹಣ ಪಡೆದುಕೊಳ್ಳುತ್ತಿರುವ ಕುರಿತು ನನ್ನ ಗಮನಕ್ಕಿಲ್ಲ. ಸಿಬ್ಬಂದಿಯನ್ನು ವಿಚಾರಿಸಿ ಕ್ರಮ ಕೈಗೊಳ್ಳುತ್ತೇನೆ ಎಂದು ಕುಷ್ಟಗಿ ಸಿಡಿಪಿಒ ಯಲ್ಲಮ್ಮ ಹಂಡಿ ಹೇಳಿದರು.
ಕುಷ್ಟಗಿಯ ಸಿಡಿಪಿಒ ಕಚೇರಿಯಲ್ಲಿ ಗೃಹಲಕ್ಷ್ಮೀ ಯೋಜನೆಯ ಅರ್ಜಿ ಸಲ್ಲಿಸುವುದಕ್ಕಾಗಿ ₹100 ಪಡೆಯುತ್ತಿದ್ದಾರೆ. ಅದಕ್ಕೆ ಕಡಿವಾಣ ಹಾಕಬೇಕು. ಬಡವರಿಗೆ ಅನ್ಯಾಯವಾಗುವುದನ್ನು ತಡೆಯಬೇಕು ಎಂದು ಫಲಾನುಭವಿಯ ಕುಟುಂಬಸ್ಥರು ಹೇಳಿದರು.