ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಶನಿವಾರ ನಗರದ ಅಲ್ಲಮಪ್ರಭು ಮೈದಾನ (ಪ್ರೀಡಂ ಪಾರ್ಕ್) ದಲ್ಲಿ ತಹಶೀಲ್ದಾರ್ ಗಿರೀಶ್ ಅಂಬು ಕಡಿಯುವ ಮೂಲಕ ಸಮಾರೋಪಗೊಳಿಸಿದರು. ಪರಸ್ಪರ ಬನ್ನಿ ಹಂಚಿಕೊಳ್ಳುವ ಮೂಲಕ ಜನರು ಶುಭಾಶಯ ವಿನಿಮಯ ಮಾಡಿಕೊಂಡರು. ಮದ್ದುಗಳು ಹಾಗೂ ಬಾಣ ಬಿರುಸುಗಳ ಚಿತ್ತಾರ ನೆರೆದಿದ್ದ ಜನರನ್ನು ಮಂತ್ರಮುಗ್ಧರನ್ನಾಗಿಸಿತು.
ಮೆರವಣಿಗೆಗೂ ಮುನ್ನ ಶಿವಪ್ಪ ನಾಯಕ ಅರಮನೆ ಆವರಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ನಂದಿಧ್ವಜಕ್ಕೆ ಪೂಜೆ ಸಲ್ಲಿಸಿದರು. ಈ ಸಂದರ್ಭ ಶಾಸ ಎಸ್.ಎನ್.ಚನ್ನಬಸಪ್ಪ, ವಿಧಾನ ಪರಿಷತ್ ಸದಸ್ಯರಾದ ಡಿ.ಎಸ್.ಅರುಣ್, ಬಲ್ಕಿಶ್ ಬಾನು, ಡಾ. ಧನಂಜಯ ಸರ್ಜಿ ಸೇರಿದಂತೆ ಹಲವರು ಇದ್ದರು.ಚಾಮುಂಡೇಶ್ವರಿ ವಿಗ್ರಹವನ್ನು ಹೊತ್ತ ‘ಸಾಗರ’ ಆನೆಯು ರಾಜ ಗಾಂಭೀರ್ಯದಿಂದ ಮುನ್ನಡೆಯುತ್ತಾ ನೋಡುಗರ ಮನ ಸೆಳೆಯುತ್ತಿತ್ತು. ಜತೆಗೆ ‘ಬಾಬಣ್ಣ’ ಮತ್ತು ‘ಬಹದ್ದೂರ್’ ಆನೆಗಳು ಸಾಥ್ ನೀಡಿದವು. ಮೆರವಣಿಗೆಯಲ್ಲಿ ಮಂಗಳ ವಾದ್ಯ, ಸಮಾಳ ವಾದ್ಯ, ನಂದಿ ಧ್ವಜ ಕುಣಿತ, ವೀರಗಾಸೆ, ಚಂಡೆ ಮದ್ದಳೆ, ಗೊಂಬೆಗಳ ಕುಣಿತ, ರಾಜ್ಯ ಪ್ರಶಸ್ತಿ ವಿಜೇತ ಶೆಟ್ಟಿ ಗೊಂಬೆ ಬಳಗದಿಂದ ಕೀಲು ಕುದುರೆ, ದೊಡ್ಡ ಗೊಂಬೆಗಳ ಕುಣಿತ, ಹುಲಿ ವೇಷ ಕುಣಿತ, ರೋಡ್ ಆರ್ಕೇಸ್ಟ್ರಾ ಸೇರಿದಂತೆ ವಿವಿಧ ಕಲಾ ತಂಡಗಳು ಮೆರಗು ನೀಡಿದವು.
ಬಿಗಿ ಬಂದೋಬಸ್ತ್: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್‌ಕುಮಾರ್ ಮಾರ್ಗದರ್ಶನದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಹಾಕಲಾಗಿತ್ತು.
ಗಮನ ಸೆಳೆದ ಬೊಂಬೆಗಳ ಪ್ರದರ್ಶನ
ನವರಾತ್ರಿಯ ದಸರಾ ಸಂದರ್ಭದಲ್ಲಿ ಆಯೋಜಿಸಿದ್ದ ಮನೆ ಮನೆಗಳಲ್ಲೂ ಗೊಂಬೆಗಳ ಪ್ರದರ್ಶನ ಗಮನ ಸೆಳೆಯಿತು.ಶಿವಮೊಗ್ಗದ ಕುವೆಂಪು ನಗರದಲ್ಲಿರುವ ತಾಯಿ ಮಗಳ ಜೋಡಿಯ ಗೊಂಬೆಗಳ ಪ್ರದರ್ಶನದಲ್ಲಿ ಸುಮಾರು 300 ವರ್ಷಗಳ ಹಳೆಯ ಗೊಂಬೆಗಳ ಪ್ರದರ್ಶನಕ್ಕೆ ಇಡಲಾಯಿತು.
ಅಷ್ಟಲಕ್ಷ್ಮಿಯರು ನವದುರ್ಗಿಯರು ಕೈಲಾಸಪರ್ವತ ದಶಾವತಾರ, ಮೈಸೂರು ಅರಮನೆಯ ದಸರಾ ದರ್ಬಾರ್ ಶ್ರೀನಿವಾಸ ಕಲ್ಯಾಣ ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನ ಮಹಿಷನ ಪ್ರತಿಮೆ ಹಾಗೂ ಚಾಮುಂಡೇಶ್ವರಿ ಬೆಟ್ಟ, ಸತಿ ಅನುಸೂಯೆ ಪೂರಿ ಜಗನ್ನಾಥ ದೇವಾಲಯ ಕೃಷ್ಣಾವತಾರ ದೊಡ್ಡದಾದ ದುರ್ಗಾ ಮಾತಾ ಪ್ರತಿಮೆ ಕನಕನ ಕಿಂಡಿ ಯಕ್ಷ ಸಂಭ್ರಮ ಹಾಗೂ ಅಶೋಕವನದಲ್ಲಿ ಸೀತೆ ಅಷ್ಟೇ ಅಲ್ಲದೆ ಆಧುನಿಕ ಜೀವನ ಶೈಲಿ ಹಳ್ಳಿ ಹಾಗೂ ಪಟ್ಟಣ ಕ್ರಿಕೆಟ್ ಮ್ಯಾಚ್ ಟೀಮ್ ಮಾರುಕಟ್ಟೆ ಮುಂತಾದ ವೈವಿದ್ಯತೆಯನ್ನು ಕಾಣಬಹುದಾಗಿತ್ತು.
ಶಾಸಕ ಚನ್ನಬಸಪ್ಪ ರಿಂದ ಭರ್ಜರಿ ಸ್ಟೆಪ್ಪೌರ ಕಾರ್ಮಿಕರ ದಸರಾ ಕಾರ್ಯಕ್ರಮದಲ್ಲಿ ಶಾಸಕ ಎಸ್.ಎನ್.ಚನ್ನಬಸಪ್ಪ ಅವರು ಭರ್ಜರಿ ಸ್ಟೆಪ್ ಹಾಕಿದರು. ಲಯಬದ್ಧವಾಗಿ ಹುಲಿ ಕುಣಿತದ ಸ್ಟೆಪ್ಸ್ ಗಳನ್ನು ಹಾಕಿದರು. ಶಾಸಕ ಹುಲಿಕುಣಿತ ದ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗಿದೆ.
ದೇವಾನುದೇವತೆಗಳ ಮೆರವಣಿಗೆ
ಅಂಬಾರಿ ಹೊತ್ತ ಆನೆಗಳ ಜೊತೆಗೆ ನಗರದ ವಿವಿಧೆಡೆ ದೇವಾನುದೇವತೆಗಳು ಮೆರವಣಿಗೆಯಲ್ಲಿ ಭಾಗವಹಿಸಿವೆ. ವಿವಿದ ದೇಗುಲಗಳಿಂದ ಅಗಮಿಸಿರುವ ಉತ್ಸವ ಮೂರ್ತಿಗಳು ಮೆರವಣಿಗೆಯಲ್ಲಿವೆ. ನೂರಕ್ಕೂ ಹೆಚ್ಚು ದೇವರುಗಳು ಮೆರವಣಿಗೆಯಲ್ಲಿ ಸಾಗಿದವು.ಮೆರವಣಿಗೆಯಲ್ಲಿ ತಹಶೀಲ್ದಾರ್ ನಡಿಗೆ