ಮಿಶ್ರಿಕೋಟಿ ಗ್ರಾಮದೇವಿಯರ ಜಾತ್ರೆಗೆ ಅದ್ಧೂರಿ ಚಾಲನೆ

KannadaprabhaNewsNetwork |  
Published : Mar 03, 2026, 01:45 AM IST
ಗ್ರಾಮದೇವಿಯರ ಮೆರವಣಿಗೆ ವೇಳೆ ಭಂಡಾರದಲ್ಲಿ ಮಿಂದೆದ್ದ ಜನಸ್ತೋಮ. | Kannada Prabha

ಸಾರಾಂಶ

ದೇವಿಯರನ್ನು ಕಿಲೆ ಓಣಿ ಗ್ರಾಮದೇವಿ ದೇವಸ್ಥಾನದಿಂದ ಭವ್ಯ ಮೆರವಣಿಗೆ ಮೂಲಕ ತಂದು ಮಿಶ್ರಿಕೋಟಿ ಹೊಸ ಬಸ್ ನಿಲ್ದಾಣ ಪಕ್ಕದ ಚೌತಮನೆ ಕಟ್ಟೆಯಲ್ಲಿ ಪ್ರತಿಷ್ಠಾಪಿಸಲಾಯಿತು.

ಕಲಘಟಗಿ:

ತಾಲೂಕಿನ ಮಿಶ್ರಿಕೋಟಿ ಗ್ರಾಮದಲ್ಲಿ 9 ದಿನ ನಡೆಯುವ ಗ್ರಾಮದೇವಿಯರ ಜಾತ್ರೆಗೆ ಭಾನುವಾರ ಅದ್ಧೂರಿ ಚಾಲನೆ ದೊರೆತಿದ್ದು ಸೋಮವಾರ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.ದೇವಿಯರನ್ನು ಕಿಲೆ ಓಣಿ ಗ್ರಾಮದೇವಿ ದೇವಸ್ಥಾನದಿಂದ ಭವ್ಯ ಮೆರವಣಿಗೆ ಮೂಲಕ ತಂದು ಮಿಶ್ರಿಕೋಟಿ ಹೊಸ ಬಸ್ ನಿಲ್ದಾಣ ಪಕ್ಕದ ಚೌತಮನೆ ಕಟ್ಟೆಯಲ್ಲಿ ಪ್ರತಿಷ್ಠಾಪಿಸಲಾಯಿತು. ಮೆರವಗೆಣಿಯಲ್ಲಿ ಭಂಡಾರ (ಹೋನ್ನಾಟ) ಸಹಿತ ಡೊಳ್ಳು ಕುಣಿತ, ಕರಡಿ ಮಜಲು, ಜಗ್ಗಲಗಿ, ಜಾಂಜು, ಮಕ್ಕಳು ಹಾಗೂ ಮಹಿಳೆಯರಿಂದ ಕೋಲಾಟ ಮೆರಗು ನೀಡಿದವು.ಈ ವೇಳೆ ಭಕ್ತರಿಂದ ಉದೋ ಉದೋ ಮಂಗಳ ಘೋಷ ಮೆರವಣಿಗೆಯ ಉದ್ದಕ್ಕೂ ಹರ್ಷ ತಂದಿತು. ಐದು ವರ್ಷಕೊಮ್ಮೆ ಜರುಗುವ ಜಾತ್ರೆಗೆ ಹಿಂದಿನ ಪದ್ಧತಿಯಂತೆ ದೇವಿಯರಿಗೆ ಭಕ್ತಿಯಿಂದ ಸೇವೆ ಸಲ್ಲಿಸಿದರು. ಕಿಲೆ ಓಣಿ, ಸುಣಗಾರ ಓಣಿ, ನದಾಫ್ ಓಣಿ, ಪೋಲಿಸ್ ಚೌಕ್, ಹಳೇ ಬಸ್ ನಿಲ್ದಾಣ, ಪ್ಯಾಟಿ ಬಸವೇಶ್ವರ ದೇವಸ್ಥಾನ ಎದುರಿನಿಂದ, ಮಧ್ಯಾಹ್ನ ಓಣಿ, ಚಲವಾದಿ ಓಣಿ ಹಾಗೂ ಜಾಡಗೇರಿ ಓಣಿಯ ರಾಜಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ದಾರಿಯುದ್ದಕ್ಕೂ ಮಹಿಳೆಯರು ಮನೆ ಎದುರಿನಲ್ಲಿ ಬಣ್ಣ ಬಣ್ಣದ ರಂಗೋಲಿ ಬಿಡಿಸಿ ಪಲ್ಲಕ್ಕಿ ಹೊತ್ತವರ ಕಾಲಿಗೆ ತುಂಬಿದ ಕೊಡದಿಂದ ನೀರು ಹಾಕಿ ನಮಸ್ಕರಿಸಿದರು. ಗ್ರಾಮದೇವಿಯರ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಮಿಶ್ರಿಕೋಟಿ ಹಾಗೂ ಚವರಗುಡ್ಡ ಗುರು-ಹಿರಿಯರು ಸುತ್ತಮುತ್ತಲಿನ ಗ್ರಾಮಸ್ಥರು ಭಾಗಿಯಾಗಿ ದೇವಿಯರ ಆಶೀರ್ವಾದ ಪಡೆದುಕೊಂಡರು.

ಸೋಮವಾರದಿಂದ ಧಾರ್ಮಿಕ ಕಾರ್ಯಕ್ರಮ ಆರಂಭವಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ ದೇವಿಯರ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ. ನಿತ್ಯವೂ ಬಗೆಬಗೆಯ ಊಟದ ವ್ಯವಸ್ಥೆ ಹಾಗೂ ಉತ್ಸವದ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಾತ್ರಾ ಉತ್ಸವ ಸಮಿತಿ ತಿಳಿಸಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕರ್ನಾಟಕ ವಿಶ್ವವಿದ್ಯಾಲಯ ಶೈಕ್ಷಣಿಕ ಶಿಸ್ತು ಪುನರ್‌ ಸ್ಥಾಪನೆಗೆ ಕಸರತ್ತು!
ಇಂದು ಕೇತುಗ್ರಸ್ತ ಚಂದ್ರಗ್ರಹಣ