ಅತ್ತಿಹಳ್ಳಿಯಲ್ಲಿ ದೇವರ ಅದ್ಧೂರಿ ಜಾತ್ರಾ ಮಹೋತ್ಸವ

KannadaprabhaNewsNetwork |  
Published : Mar 03, 2026, 01:30 AM IST
2ಎಚ್ಎಸ್ಎನ್19 : ನುಗ್ಗೇಹಳ್ಳಿ ಹೋಬಳಿಯ  ಅತ್ತಿಹಳ್ಳಿ ಗ್ರಾಮದಲ್ಲಿ  ಶ್ರೀ ಕಂಬದ ನರಸಿಂಹ ಸ್ವಾಮಿ  ಶ್ರೀ ದೊಡ್ಡಮ್ಮ ದೇವಿ ಚಿಕ್ಕಮ್ಮ ದೇವಿ  ಮತ್ತು ಶ್ರೀ ಭೈರವೇಶ್ವರ  ದೇವರುಗಳ ಅದ್ದೂರಿ ಜಾತ್ರಾ ಮಹೋತ್ಸವ ಅಂಗವಾಗಿ ಗ್ರಾಮಸ್ಥರಿಂದ ರಂಗ ಕುಣಿತ  ನಡೆಯಿತು. | Kannada Prabha

ಸಾರಾಂಶ

ಪ್ರತಿವರ್ಷದಂತೆ ಈ ವರ್ಷವೂ ಜಾತ್ರಾ ಮಹೋತ್ಸವದ ಅಂಗವಾಗಿ ಸಂಪ್ರದಾಯದಂತೆ ಫೆಬ್ರವರಿ 21ರ ಶನಿವಾರದಿಂದ 28ರವರೆಗೆ 7 ದಿನಗಳು ಗ್ರಾಮಸ್ಥರಿಂದ ರಂಗ ಕುಣಿತ ಪ್ರತಿನಿತ್ಯ ನಡೆಯಿತು. ಮಾರ್ಚ್ 1ರಂದು ಬೆಳಿಗ್ಗೆ ಗ್ರಾಮದ ಕಾಲಭೈರವೇಶ್ವರ ದೇವಾಲಯದ ಮುಂಭಾಗ ಶ್ರೀ ಕಂಬದ ನರಸಿಂಹಸ್ವಾಮಿ ಶ್ರೀ ದೊಡ್ಡಮ್ಮ ಚಿಕ್ಕಮ್ಮ ದೇವಿ ದೇವರುಗಳ ಉತ್ಸವದೊಂದಿಗೆ ರಂಗ ಕುಣಿತ ನಡೆಸಿ ರಂಗ ಕುಣಿತಕ್ಕೆಂದು ತರಲಾಗಿದ್ದ ಕಂಬಗಳಿಗೆ ವಿಶೇಷ ಪೂಜೆ ಸಲ್ಲಿಸಿ ನಂತರ ಗ್ರಾಮದ ಕೆರೆಗೆ ಶಾಸ್ತ್ರೋಕ್ತವಾಗಿ ಪೂಜಾ ಸಲ್ಲಿಸಿ ನೀರಿಗೆ ಬಿಡಲಾಯಿತು.

ಕನ್ನಡಪ್ರಭ ವಾರ್ತೆ ನುಗ್ಗೇಹಳ್ಳಿ ಹೋಬಳಿಯ ಅತ್ತಿಹಳ್ಳಿ ಗ್ರಾಮದಲ್ಲಿ ಶ್ರೀ ಕಂಬದ ನರಸಿಂಹ ಸ್ವಾಮಿ ಶ್ರೀ ದೊಡ್ಡಮ್ಮ, ದೇವಿ ಚಿಕ್ಕಮ್ಮ ದೇವಿ ಮತ್ತು ಶ್ರೀ ಭೈರವೇಶ್ವರ ದೇವರ ಅದ್ಧೂರಿ ಜಾತ್ರಾ ಮಹೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ನೆರವೇರಿತು.ಪ್ರತಿವರ್ಷದಂತೆ ಈ ವರ್ಷವೂ ಜಾತ್ರಾ ಮಹೋತ್ಸವದ ಅಂಗವಾಗಿ ಸಂಪ್ರದಾಯದಂತೆ ಫೆಬ್ರವರಿ 21ರ ಶನಿವಾರದಿಂದ 28ರವರೆಗೆ 7 ದಿನಗಳು ಗ್ರಾಮಸ್ಥರಿಂದ ರಂಗ ಕುಣಿತ ಪ್ರತಿನಿತ್ಯ ನಡೆಯಿತು. ಮಾರ್ಚ್ 1ರಂದು ಬೆಳಿಗ್ಗೆ ಗ್ರಾಮದ ಕಾಲಭೈರವೇಶ್ವರ ದೇವಾಲಯದ ಮುಂಭಾಗ ಶ್ರೀ ಕಂಬದ ನರಸಿಂಹಸ್ವಾಮಿ ಶ್ರೀ ದೊಡ್ಡಮ್ಮ ಚಿಕ್ಕಮ್ಮ ದೇವಿ ದೇವರುಗಳ ಉತ್ಸವದೊಂದಿಗೆ ರಂಗ ಕುಣಿತ ನಡೆಸಿ ರಂಗ ಕುಣಿತಕ್ಕೆಂದು ತರಲಾಗಿದ್ದ ಕಂಬಗಳಿಗೆ ವಿಶೇಷ ಪೂಜೆ ಸಲ್ಲಿಸಿ ನಂತರ ಗ್ರಾಮದ ಕೆರೆಗೆ ಶಾಸ್ತ್ರೋಕ್ತವಾಗಿ ಪೂಜಾ ಸಲ್ಲಿಸಿ ನೀರಿಗೆ ಬಿಡಲಾಯಿತು.ಜಾತ್ರಾ ಮಹೋತ್ಸವದ ಅಂಗವಾಗಿ ಗ್ರಾಮದ ರಾಜಬೀದಿಗಳಲ್ಲಿ ದೇವರ ಉತ್ಸವದೊಂದಿಗೆ ಶ್ರೀ ಕಂಬದ ನರಸಿಂಹ ಸ್ವಾಮಿ ದೇವಾಲಯದಲ್ಲಿ ಶನಿವಾರ ಬೆಳಿಗ್ಗೆ ಹಾಗೂ ಸಂಜೆ ವಿಶೇಷ ಪೂಜೆ ಅಭಿಷೇಕ ಸೇರಿದಂತೆ ಹೂವಿನ ಅಲಂಕಾರ ಏರ್ಪಡಿಸಲಾಗಿತ್ತು. ಶನಿವಾರ ಮತ್ತು ಭಾನುವಾರ ಬೆಳಿಗ್ಗೆ ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು.ರಂಗ ಕುಣಿತಕ್ಕೆ ಹೆಜ್ಜೆ ಹಾಕಿದ ಗ್ರಾಮಸ್ಥರು:ಸಂಪ್ರದಾಯವನ್ನು ಉಳಿಸಿ ಬೆಳೆಸುವ ಸಲುವಾಗಿ ನೂರಾರು ವರ್ಷಗಳಿಂದ ಗ್ರಾಮದಲ್ಲಿ ರಂಗ ಕುಣಿತ ಹಬ್ಬವನ್ನು ಆಚರಿಸುತ್ತಾ ಬರಲಾಗುತ್ತಿದೆ. ಕಳೆದ 7 ದಿನಗಳು ಬಹಳ ಶ್ರದ್ಧಾಭಕ್ತಿಯಿಂದ ಗ್ರಾಮಸ್ಥರು ರಂಗ ಕುಣಿತದಲ್ಲಿ ಪಾಲ್ಗೊಂಡರು. ಚಿಕ್ಕಮಕ್ಕಳು ಸೇರಿದಂತೆ ವಯೋವೃದ್ಧರೂ ಕೂಡ ರಂಗ ಕುಣಿತದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.ಶಾಸಕ ಸಿ ಎನ್ ಬಾಲಕೃಷ್ಣರವರು ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಆಗಮಿಸಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ರಂಗ ಕುಣಿತಕ್ಕೆ ಶುಭಕೋರಿದರು.ಅತ್ತಿಹಳ್ಳಿ ಸೇರಿದಂತೆ ಸುತ್ತಮುತ್ತಲ ಅನೇಕ ಗ್ರಾಮಗ ಗ್ರಾಮಸ್ಥರು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆನೆ ಧಾಮ ಸ್ಥಾಪನೆಗೆ ಶಾಸಕ ಸುರೇಶ್ ಆಗ್ರಹ
ಕೌಶಲ್ಯಾಧಾರಿತ ಶಿಕ್ಷಣ ಮಕ್ಕಳಿಗೆ ಅಗತ್ಯ: ಪಿ.ಎಂ.ನರೇಂದ್ರಸ್ವಾಮಿ