ಕನ್ನಡಪ್ರಭ ವಾರ್ತೆ ಕಾರವಾರ
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಶಾಲೆಯ ಪ್ರಥಮ ಬ್ಯಾಚಿನ ವಿದ್ಯಾರ್ಥಿಗಳಾಗಿದ್ದ ನಿವೃತ್ತ ಗೆಜೆಟೆಡ್ ಅಧಿಕಾರಿ ಕೃಷ್ಣಾನಂದ ಸಾಳುಂಕೆ, ನಮ್ಮ ಊರು ನಮ್ಮ ಹೆಮ್ಮೆ, ಇಲ್ಲಿ ಹಳೆಯ ವಿದ್ಯಾರ್ಥಿಗಳು ಸೇರಿ ವಿಶಿಷ್ಠವಾದ ವೇದಿಕೆ ಕಲ್ಪಿಸಿ ನಮ್ಮನ್ನು ಆಹ್ವಾನಿಸಿ ಗೌರವ ನೀಡಿದ್ದು ಖುಷಿ ನೀಡಿದೆ ಎಂದರು.
ಶಾಲೆಯ ಪ್ರಥಮ ತಂಡದ ವಿದ್ಯಾರ್ಥಿ, ದಾಂಡೇಲಿ ನಗರಸಭೆಯ ಮಾಜಿ ಅಧ್ಯಕ್ಷ ನಾಗೇಶ ಸಾಳುಂಕೆ, ಶಿವಾಜಿ ವಿದ್ಯಾ ಮಂದಿರಕ್ಕೆ ತನ್ನದೇಯಾದ ಇತಿಹಾಸವಿದೆ. ಅದು ಹೀಗೆಯೇ ಮುಂದುವರಿಯಲಿ. ಪ್ರಸಕ್ತ ವರ್ಷ ಶಾಲೆಯ ಮೆಟ್ರಿಕ್ ಫಲಿತಾಂಶ ಶೇಕಡಾ ನೂರು ದಾಖಲಿಸಿದೆ. ಇದು ನಿರಂತರವಾಗಿರಲಿ ಹಾಗೂ ವಿದ್ಯಾರ್ಥಿಗಳು ಓದುವ ದಿಶೆಯಲ್ಲಿ ಮನವನ್ನು ನಿಗ್ರಹಿಸಿಕೊಳ್ಳಬೇಕು, ಏಕಾಗ್ರತೆ ಇರುವ ಮನಸ್ಸು ಸಾಧನೆಯ ಮೆಟ್ಟಿಲನ್ನು ಬೇಗ ಮುಟ್ಟುತ್ತದೆ ಮತ್ತು ಸತತ ಅಧ್ಯಯನವು ಅವಕಾಶ ಕಲ್ಪಿಸಿದರೆ, ಪರಿಶ್ರಮ ಪ್ರತಿಫಲ ಒದಗಿಸುತ್ತದೆ ಎಂದು ಹೇಳಿದರು.ಹಳೆಯ ವಿದ್ಯಾರ್ಥಿ, ನಿವೃತ್ತ ಯೋಧ ಶಾಂತರಾಮ ಸಾಳುಂಕೆ, ಶಾಲೆಯ ನಿವೃತ್ತ ನೌಕರ ಶಶಿಕಾಂತ ಸಾಳುಂಕೆ ಮಾತನಾಡಿದರು.
ಸಂಸ್ಥೆಯ ಉಪಾಧ್ಯಕ್ಷ ಗಿರೀಶ್ ದೇಸಾಯಿ ಉಪಸ್ಥಿತರಿದ್ದರು. ಇದೇ ಸಂದರ್ಭ ಶಾಲೆಯ ನಿವೃತ್ತ ಮುಖ್ಯಾಧ್ಯಾಪಕರಾದ ಸುಮನ್ ನಾಯ್ಕ ಹಾಗೂ ಪ್ರಸ್ತುತ ಮುಖ್ಯ ಗುರು ಡಾ. ಗಣೇಶ ಬಿಷ್ಟಣ್ಣನವರ, ನಿವೃತ್ತ ಶಾಲಾ ಸಿಬ್ಬಂದಿ ಶಶಿಕಾಂತ ಸಾಳುಂಕೆ, ಜೊತೆಗೆ ಶಾಲೆಯ ಪ್ರಥಮ ಹಳೆಯ ವಿದ್ಯಾರ್ಥಿಗಳಾದ ಪ್ರೇಮಾನಂದ ಸಾಳುಂಕೆ, ಮೋಹನ ಸಾಳುಂಕೆ, ಕೃಷ್ಣಾನಂದ ಸಾಳುಂಕೆ ಹಾಗೂ ನಾಗೇಶ ಸಾಳುಂಕೆಯರಿಗೆ ಮತ್ತು 1974ರಲ್ಲಿ ಶಾಲೆಯಿಂದ ರಾಜ್ಯ ಮಟ್ಟಕ್ಕೆ ಸಾಗಿದ್ದ ಕಬಡ್ಡಿ ಆಟಗಾರರನ್ನು ಮತ್ತು ಪ್ರಸಕ್ತ ವರ್ಷ ಎಸ್ಎಸ್ಎಲ್‌ಸಿಯಲ್ಲಿ ಶಾಲೆಗೆ ಪ್ರಥಮ ಬಂದ ಅಶ್ವಿತಾ ದೇಸಾಯಿಯವರನ್ನು 1991ರ ಮೆಟ್ರಿಕ್ ತಂಡ ಗೌರವಿಸಿತು.