ಕನ್ನಡಪ್ರಭ ವಾರ್ತೆ ಮುದಗಲ್
ಭಾವೈಕ್ಯತೆಗೆ ಹೆಸರಾದ ಮುದಗಲ್ ಮೊಹರಂ ಹಬ್ಬವು ಶ್ರದ್ಧಾ- ಭಕ್ತಿಯಿಂದ ಭಾನುವಾರ ಅದ್ಧೂರಿಯಾಗಿ ತೆರೆ ಕಂಡಿತು.ಕಳೆದ 10 ದಿನಗಳಿಂದಲೂ ಪಟ್ಟಣದ ವೆಂಕಟರಾಯನಪೇಟೆ, ಕಿಲ್ಲಾದ ಹುಸೇನಿ ಆಲಂ ದರ್ಗಾ, ಮೇಗಳಪೇಟೆ, ಬೇಗಂಪೂರ ಪೇಟೆಗಳಲ್ಲಿ ಪ್ರತಿಷ್ಠಾಪಿಸಲಾಗಿದ್ದ ಆಲಂಗಳು ರವಿವಾರ ಸಂಜೆ ಪಟ್ಟಣದ ಕೋಟೆ ಮುಂಭಾಗದ ಆವರಣದಲ್ಲಿ ಸೇರಿ ಪರಸ್ಪರ ಭೇಟಿ ಕಾರ್ಯಕ್ರಮವು ನೆರವೇರಿತು. ಹಸನ್ ಹುಸೇನ್ ಆಲಂಗಳ ಭೇಟಿ ಕಾರ್ಯಕ್ರಮವು ನೆಟ್ಟಿಗರ ಗಮನ ಸೆಳೆಯಿತು. ಐತಿಹಾಸಿಕ ಕೋಟೆ ಮುಂಭಾಗದಲ್ಲಿ ಆಲಂಗಳು ಬಂದು ಸೇರುತ್ತಿದ್ದಂತೆ ಬಾನೆತ್ತರಕ್ಕೆ ಬಗೆಬಗೆಯ ಸಿಡಿಮದ್ದುಗಳನ್ನು ಸಿಡಿಸಿ ಸಂಭ್ರಮಿಸಲಾಯಿತು. ಯುವಕರು ಆಲಂಗಳ ಸವಾರಿ ಆರಂಭವಾಗುತ್ತಿದ್ದಂತೆ ದೈವ ಸ್ಮರಣೆ ಮತ್ತು ಜಯಘೋಷಣೆಗಳನ್ನು ಕೂಗುತ್ತಾ ಸಾಗಿದರು. ಆಲಂಗಳ ಪರಸ್ಪರ ಬೇಟಿ ಆಗುತಿದ್ದಂತಯೇ ಸಿಡಿಮದ್ದನ್ನು ಆಕಾಶದೆತ್ತರಕ್ಕೆ ಸಿಡಿಮದ್ದಿನ ನೋಡುಗರನ್ನು ಆಕರ್ಷಿಸುವಂತಿತ್ತು.
ಬಂದೋಬಸ್ತ್ : ಮೊಹರಂ ಹಬ್ಬದ ಆಚರಣೆಗೆ ಪಟ್ಟಣ, ಅಂತರರಾಜ್ಯ ಹಾಗೂ ಅನ್ಯ ರಾಜ್ಯಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದ ಹಿನ್ನೆಲೆಯಲ್ಲಿ ಸೂಕ್ತ ಬಂದೋಬಸ್ತ್‌ಗಾಗಿ 2 ಕೆ.ಎಸ್.ಆರ್.ಪಿ. ತುಕಡಿ, 2 ಡಿ.ವೈ.ಎ.ಪಿ. 10 ಸಿ.ಪಿ.ಐ, 20 ಪಿ.ಎಸ್.ಐ, 34 ಎ.ಎಸ್.ಐ, 84 ಹೆಡ್ ಕಾನ್ಸಟೇಬಲ್, 130 ಪೊಲೀಸ್ ಪೇದೆ, 46 ಮಹಿಳಾ ಪೊಲೀಸ್ ಪೇದೆಗಳು ಸೇರಿದಂತೆ 112 ಹೋಂ ಗಾರ್ಡ್‌ಗಳನ್ನು ನಿಯೋಜಿಸಲಾಗಿತ್ತು. ಆಲಂಗಳು ಭೇಟಿ ಕೊಡುವ ಸಂದರ್ಭದಲ್ಲಿ ಟ್ರಾಫಿಕ್ ತೊಂದರೆಯಾಗದಂತೆ ಮುಂಜಾಗ್ರತವಾಗಿ ಬೆಳಗಾಂ ರಾಯಚೂರು ರಾಜ್ಯ ಹೆದ್ದಾರಿ ರಸ್ತೆಯನ್ನು ಕೆಲವು ಘಂಟೆಗಳ ಕಾಲ ಸಂಪರ್ಕವನ್ನು ಕಡಿತಗೊಳಿಸಲಾಗಿತ್ತು.ಗಣ್ಯರ ದಂಡು: ಐತಿಹಾಸಿಕ ಮುದಗಲ್ ಮೊಹರಂ ಹಬ್ಬದ ಆಚರಣೆ ವೀಕ್ಷಣೆಗೆ ಅಧಿಕಾರಿಗಳ ದಂಡು ಹಾಗೂ ಅತಿಥಿಗಳು ಆಗಮಿಸಿದ್ದರು. ಪುರಸಭೆ ವತಿಯಿಂದ ಕೋಟೆ ಮುಂಭಾಗದ ಆವರಣದಲ್ಲಿ ಸಿದ್ಧ ಪಡಿಸಲಾಗಿದ್ದ ಅದ್ಧೂರಿ ವೇದಿಕೆಯಲ್ಲಿ ಲಿಂಗಸಗೂರು ಶಾಸಕ ಮಾನಪ್ಪ ವಜ್ಜಲ್, ಮಾಜಿ ಸಚಿವ ಅಮರೇಗೌಡ ಪಾಟೀಲ್ ಬಯ್ಯಾಪೂರ, ಕೊಪ್ಪಳ ರಾಯಚೂರು ವಿಧಾನ ಪರಿಷತ್ ಸದಸ್ಯ ಶರಣಗೌಡ ಪಾಟೀಲ್ ಬಯ್ಯಾಪೂರ, ರಾಜ್ಯ ಸರ್ಕಾರದ ಆರ್.ಡಿ.ಪಿ.ಆರ್. ಅಪರ ಕಾರ್ಯದರ್ಶಿ ಚಂದ್ರಶೇಖರ ದಫೇದಾರ, ಜಿಲ್ಲಾ ವಖ್ಫ ಅಧ್ಯಕ್ಷ ಫರೀದ್ ಖಾನ್, ತಹಸೀಲ್ದಾರ ಸತ್ಯಮ್ಮ, ಮಾಜಿ ಶಾಸಕ ಡಿ.ಎಸ್. ಹೂಲಗೇರಿ, ಜಿಲ್ಲಾ ಗ್ಯಾರಂಟಿ ಅಧ್ಯಕ್ಷ ಪಾಮಯ್ಯ ಮುರಾರಿ, ಲಿಂಗಸಗೂರು ನಗರಾಭಿವೃಧ್ಧಿ ಪ್ರಾಧಿಕಾರದ ಅಧ್ಯಕ್ಷ ಭೂಪನಗೌಡ ಕರಡಕಲ್, ಪುರಸಭೆ ಅಧ್ಯಕ್ಷೆ ಮಹಾದೇವಮ್ಮ ಗುತ್ತೇದಾರ, ಉಪಾಧ್ಯಕ್ಷ ಅಜ್ಮೀರ್ ಬೆಳ್ಳಿಕಟ್, ಪುರಸಭೆ ಮುಖ್ಯಾಧಿಕಾರಿ ಪ್ರವೀಣ ಭೋಗಾರ, ಬಿಜೆಪಿ ಜಿಲ್ಲಾಧ್ಯಕ್ಷ ವೀರನಗೌಡ ಲೆಕ್ಕಹಾಳ, ಮುಖಂಡರಾದ ಆರ್. ರುದ್ರಯ್ಯ, ಕೆ.ನಾಗಭೂಷಣ, ಶಿವಶಂಕರಗೌಡ ಉಪ್ಪಾರನಂದಿಹಾಳ, ದಾವೂದ್, ಮಾಹಾಂತೇಶ ಪಾಟೀಲ್.ತಮ್ಮಣ್ಣಗುತ್ತೆದಾರ.ಕರಿಯಪ್ಪ ಯಾದವ್ , ಹುಸೇನಿ ಆಲಂ ದರ್ಗಾ ಸಮಿತಿ ಅಧ್ಯಕ್ಷ ಅಮೀರಬೇಗ್ ಉಸ್ತಾದ್, ಕಾರ್ಯದರ್ಶಿ ಸಾಧಿಕ್ ಅಲಿ ಸೇರಿದಂತೆ ಪುರಸಭೆ ಸದಸ್ಯರುಗಳು ಹಾಗೂ ರಾಜಕೀಯ ಮುತ್ಸದ್ದಿಗಳು ಹಾಜರಿದ್ದರು.