ಅಯೋಧ್ಯೆಯ ಮಂತ್ರಾಕ್ಷತೆಯ ಕಲಶದ ಭವ್ಯ ಮೆರವಣಿಗೆ

KannadaprabhaNewsNetwork |  
Published : Dec 21, 2023, 01:15 AM IST
20 ಜಿಕೆಕೆ-1-1 | Kannada Prabha

ಸಾರಾಂಶ

ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ಹಾಗೂ ವಿಶ್ವಹಿಂದು ಪರಿಷತ್ ಗೋಕಾಕ ಸಹಯೋಗದೊಂದಿಗ ಅಯೋಧ್ಯೆಯಲ್ಲಿ ಜ.22ರಂದು ನಡೆಯಲಿರುವ ಶ್ರೀರಾಮ ಪ್ರಾಣ ಪ್ರತಿಷ್ಠಾಪನೆ ಅಂಗವಾಗಿ ಅಯೋಧ್ಯೆಯಿಂದ ಆಗಮಿಸಿದ ಮಂತ್ರಾಕ್ಷತೆಯ ಕಲಶದ ಭವ್ಯ ಮೆರವಣಿಗೆ ಕಾರ್ಯಕ್ರಮಕ್ಕೆ ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಗೋಕಾಕ

ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ಹಾಗೂ ವಿಶ್ವಹಿಂದು ಪರಿಷತ್ ಗೋಕಾಕ ಸಹಯೋಗದೊಂದಿಗ ಅಯೋಧ್ಯೆಯಲ್ಲಿ ಜ.22ರಂದು ನಡೆಯಲಿರುವ ಶ್ರೀರಾಮ ಪ್ರಾಣ ಪ್ರತಿಷ್ಠಾಪನೆ ಅಂಗವಾಗಿ ಅಯೋಧ್ಯೆಯಿಂದ ಆಗಮಿಸಿದ ಮಂತ್ರಾಕ್ಷತೆಯ ಕಲಶದ ಭವ್ಯ ಮೆರವಣಿಗೆ ಕಾರ್ಯಕ್ರಮಕ್ಕೆ ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಚಾಲನೆ ನೀಡಿದರು.

ನಗರದ ನಾಯಕ ಗಲ್ಲಿಯ ಮಹರ್ಷಿ ವಾಲ್ಮೀಕಿ ದೇವಸ್ಥಾನದಲ್ಲಿ ಬುಧವಾರ ಮಂತ್ರಾಕ್ಷತೆಯ ಕಲಶಗಳಿಗೆ ವಿಶೇಷ ಪೂಜೆ ನೆರವೇರಿಸಿ ವಿವಿಧ ವಾದ್ಯಮೇಳ, ಸುಮಂಗಲಿಯರು ಆರತಿ ಮತ್ತು ಕುಂಭಗಳೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಶೋಭಾಯಾತ್ರೆಯ ಮೂಲಕ ರವಿವಾರ ಪೇಠದ(ಕಡಲಗಿಕರ ಆಸ್ಪತ್ರೆ ಹತ್ತಿರ) ಶ್ರೀ ರಾಮ ಮಂದಿರಕ್ಕೆ ತರಲಾಯಿತು. ಶೋಭಾಯಾತ್ರೆಯೂದ್ದಕ್ಕೂ ಹನುಮ ಮಾಲಾಧಾರಿಗಳ ರಾಮನಾಮ ಪಠಣ, ರಾಮ ಭಜನೆ ಗಮನ ಸೆಳೆಯಿತು.

ಈ ಸಂದರ್ಭದಲ್ಲಿ ಗುಬ್ಬಲಗುಡ್ಡದ ಮಲ್ಲಿಕಾರ್ಜುನ ಮಹಾಸ್ವಾಮಿಗಳು, ಕಪರಟ್ಟಿಯ ಬಸವರಾಜ ಸ್ವಾಮೀಜಿ, ಯುವ ಧುರೀಣ ಸರ್ವೋತ್ತಮ ಜಾರಕಿಹೊಳಿ, ವಿಶ್ವಹಿಂದು ಪರಿಷತ ವಿಭಾಗ ಪ್ರಮುಖ ನಾರಾಯಣ ಮಠಾಧಿಕಾರಿ, ಶ್ರೀರಾಮ ಪ್ರತಿಷ್ಠಾನ ಅಭಿಯಾನದ ಜಿಲ್ಲಾ ಸಂಯೋಜಕ ನಂಜುಂಡ ಜುಗಳಿ, ವಿಶ್ವಹಿಂದು ಪರಿಷತ ಜಿಲ್ಲಾ ಉಪಾಧ್ಯಕ್ಷ ಕೃಷ್ಣಾ ಕುರಬಗಟ್ಟಿ, ನಗರ ಅಧ್ಯಕ್ಷ ಆನಂದ ಪಾಟೀಲ, ಉಪಾಧ್ಯಕ್ಷ ಸಂಜು ಚಿಪ್ಪಲಕಟ್ಟಿ, ಆರ್‌ಎಸ್‌ಎಸ್ ಪ್ರಮುಖರಾದ ಎಂ.ವೈ.ಹಾರುಗೇರಿ, ಎಂ.ಡಿ.ಚುನಮರಿ, ವಿಕಾಸ ನಾಯಿಕ, ಸದಾಶಿವ ಗುದಗೋಳ, ಬಿಜೆಪಿ ನಗರಾಧ್ಯಕ್ಷ ಭೀಮಶಿ ಭರಮನ್ನವರ, ಬಿಜೆಪಿ ಪಕ್ಷದ ಪದಾಧಿಕಾರಿಗಳಾದ ಬಸವರಾಜ ಹಿರೇಮಠ, ಲಕ್ಕಪ್ಪ ತಹಸೀಲ್ದಾರ್‌, ಸುರೇಶ ಪತ್ತಾರ, ಮಂಜು ಪ್ರಭುನಟ್ಟಿ, ರವಿ ಮಡ್ಡೆಪ್ಪಗೋಳ, ಮುಖಂಡರಾದ ಟಿ.ಆರ್.ಕಾಗಲ, ಎಂ.ಎಲ್.ತೋಳಿನವರ, ನಾಗಪ್ಪ ಶೇಖರಗೋಳ, ಸದಾನಂದ ಕಲಾಲ, ನಿಂಗಪ್ಪ ಕುರಬೇಟ, ಶಿವಪ್ಪ ಗುಡ್ಡಾಕಾಯು, ಬಸವರಾಜ ಆರೇನ್ನವರ, ದುರ್ಗಪ್ಪ ಶಾಸ್ತ್ರಿಗೊಲ್ಲರ, ಜ್ಯೋತಿಭಾ ಸುಭಂಜಿ, ಬಾಬು ಮುಳಗುಂದ, ಜಯಾನಂದ ಹುಣಚ್ಯಾಳ, ಪ್ರಕಾಶ ವರ್ಜಿ, ರಘು ಸುಭಂಜಿ, ಅಂಕುಶ ರೇಣಕೆ ಸೇರಿದಂತೆ ನಾಲ್ಕು ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು.

PREV

Recommended Stories

ಮದ್ಯಪಾನ ಮಾಡಿ ಅಪಘಾತಕ್ಕೀಡಾದರೆ ವಿಮೆ ಬೇಡ : ಕೇಂದ್ರ, ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌
ಖರ್ಗೆ ಕುಟುಂಬದ ವಿರುದ್ಧ ಕೋರ್ಟ್‌ಗೆ ಖಾಸಗಿ ದೂರು