ಬಸವನಬಾಗೇವಾಡಿಯಲ್ಲಿ ಅದ್ಧೂರಿ ರಂಗಪಂಚಮಿ

KannadaprabhaNewsNetwork |  
Published : Mar 09, 2026, 03:00 AM IST
9ಬಿಎಸ್ವಿ04- ಬಸವನಬಾಗೇವಾಡಿಯಲ್ಲಿ ಬಹುವರ್ಷದಿಂದ ಕಳೆಗುಂದಿದ್ದ ರಂಗಪಂಚಮಿ ಹಬ್ಬದ ಆಚರಣೆಗೆ ಭಾನುವಾರ ಸಿದ್ದಲಿಂಗ ಸ್ವಾಮೀಜಿ, ಈರಣ್ಣ ಪಟ್ಟಣಶೆಟ್ಟಿ ಇತರರು ರಿಬ್ಬನ್ ಕತ್ತರಿಸುವ ಮೂಲಕ ಚಾಲನೆ ನೀಡಿದರು. | Kannada Prabha

ಸಾರಾಂಶ

ಪಟ್ಟಣದಲ್ಲಿ ಬಹುವರ್ಷದಿಂದ ಕಳೆಗುಂದಿದ್ದ ಹೋಳಿ ಹಬ್ಬದ ರಂಗಪಂಚಮಿ ಹಬ್ಬದ 2ನೇ ವರ್ಷದ ಆಚರಣೆ ಬಸವೇಶ್ವರ ಸೇವಾ ಸಮಿತಿಯ ನೇತೃತ್ವದಲ್ಲಿ ಬಸವೇಶ್ವರ ವೃತ್ತದಲ್ಲಿ, ರಾಷ್ಟ್ರೀಯ ಬಸವಸೈನ್ಯದಿಂದ ಬಸವ ಜನ್ಮ ಸ್ಮಾರಕ ಮುಂಭಾಗ, ರೈತ ಮುಖಂಡ ಕಲ್ಲು ಸೊನ್ನದ ನೇತೃತ್ವದಲ್ಲಿ ಡಾ.ಅಂಬೇಡ್ಕರ್‌ ವೃತ್ತದ ಸಮೀಪ ಹಮ್ಮಿಕೊಂಡಿದ್ದ ಸಾರ್ವಜನಿಕ ರಂಗಪಂಚಮಿ ಭಾನುವಾರ ಅದ್ಧೂರಿಯಾಗಿ ಜರಗುವ ಮೂಲಕ ಬಣ್ಣದಾಟಕ್ಕೆ ತೆರೆ ಬಿದ್ದಿತ್ತು.

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ

ಪಟ್ಟಣದಲ್ಲಿ ಬಹುವರ್ಷದಿಂದ ಕಳೆಗುಂದಿದ್ದ ಹೋಳಿ ಹಬ್ಬದ ರಂಗಪಂಚಮಿ ಹಬ್ಬದ 2ನೇ ವರ್ಷದ ಆಚರಣೆ ಬಸವೇಶ್ವರ ಸೇವಾ ಸಮಿತಿಯ ನೇತೃತ್ವದಲ್ಲಿ ಬಸವೇಶ್ವರ ವೃತ್ತದಲ್ಲಿ, ರಾಷ್ಟ್ರೀಯ ಬಸವಸೈನ್ಯದಿಂದ ಬಸವ ಜನ್ಮ ಸ್ಮಾರಕ ಮುಂಭಾಗ, ರೈತ ಮುಖಂಡ ಕಲ್ಲು ಸೊನ್ನದ ನೇತೃತ್ವದಲ್ಲಿ ಡಾ.ಅಂಬೇಡ್ಕರ್‌ ವೃತ್ತದ ಸಮೀಪ ಹಮ್ಮಿಕೊಂಡಿದ್ದ ಸಾರ್ವಜನಿಕ ರಂಗಪಂಚಮಿ ಭಾನುವಾರ ಅದ್ಧೂರಿಯಾಗಿ ಜರಗುವ ಮೂಲಕ ಬಣ್ಣದಾಟಕ್ಕೆ ತೆರೆ ಬಿದ್ದಿತ್ತು.

ರಂಗಪಂಚಮಿಯಲ್ಲಿ ಮಕ್ಕಳು, ಯುವಕರು, ಹಿರಿಯರು ಪಾಲ್ಗೊಳ್ಳುವ ಮೂಲಕ ರಂಗಪಂಚಮಿಯ ಬಣ್ಣದಾಟದ ರಂಗ ಹೆಚ್ಚಿಸಿದರು. ರಂಗಪಂಚಮಿಯ ಶಾಂತಿಯುತವಾಗಿ ಜರುಗಿತು. ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಸಾರ್ವಜನಿಕ ರಂಗಪಂಚಮಿ ಆಚರಣೆಯಂಗವಾಗಿ ಹನ್ನೊಂದು ಗಂಟೆ ಸುಮಾರಿಗೆ ಸಿದ್ದಲಿಂಗ ಸ್ವಾಮೀಜಿ ಸಾನ್ನಿಧ್ಯದಲ್ಲಿ ಬಸವೇಶ್ವರ ಸೇವಾ ಸಮಿತಿ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತ ಬಸವರಾಜ ಹಾರಿವಾಳ ಪೂಜೆ ಸಲ್ಲಿಸಿದ ನಂತರ ಬಸವೇಶ್ವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ನಂತರ ಬಸವೇಶ್ವರ ದೇವಸ್ಥಾನ ಮೂಲಜೀರ್ಣೋದ್ಧಾರಕ ಮಲ್ಲಪ್ಪ ಸಿಂಹಾಸನ ಮಾಮಲೇದಾರ ಅವರ ಪ್ರತಿಮೆ ಆವರಣದಲ್ಲಿ ಹಾಕಲಾಗಿದ್ದ ರೈನ್ ಡ್ಯಾನ್ಸ್ ವೇದಿಕೆಯಲ್ಲಿ ರಿಬ್ಬನ್ ಕತ್ತರಿಸಿದ ನಂತರ ಬಣ್ಣವನ್ನು ಸಿಂಪಡಿಸುವ ಮೂಲಕ ಅದ್ಧೂರಿ ರಂಗಪಂಚಮಿಗೆ ಚಾಲನೆ ನೀಡಿದರು. ನಂತರ ರಂಗಪಂಚಮಿಯ ಬಣ್ಣದೋಕುಳಿಯ ಮೆರವಣಿಗೆ ಆರಂಭಗೊಂಡಿತ್ತು. ಮೆರವಣಿಗೆಯಲ್ಲಿ ಟ್ರ್ಯಾಕ್ಟರ್‌ದಲ್ಲಿಟ್ಟಿದ್ದ ಬ್ಯಾರಲ್‌ಗಳಲ್ಲಿದ್ದ ಬಣ್ಣವನ್ನು ಮೆರವಣಿಗೆಯುದ್ದಕ್ಕೂ ನೆರೆದ ಜನರ ಮೇಲೆ ಬಣ್ಣ ಎರಚುವದು ಕಂಡುಬಂದಿತ್ತು. ಬಹುದಿನಗಳ ನಂತರ ಆರಂಭಗೊಂಡ ರಂಗಪಂಚಮಿಯ ಹಬ್ಬದಲ್ಲಿ ಪಟ್ಟಣದ ಬಹುತೇಕ ಎಲ್ಲ ಹಿರಿಯರು, ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರಿಂದ ರಂಗಪಂಚಮಿಗೆ ವಿಶೇಷ ಕಳೆ ಬಂದಿತ್ತು. ರಂಗಪಂಚಮಿಯಲ್ಲಿ ಭಾಗವಹಿಸಿದ್ದ ಜನರು ಪರಸ್ಪರ ಬಣ್ಣ ಹಚ್ಚಿ ಸಂಭ್ರಮಪಟ್ಟರು. ಹಲಗೆ ನಾದಕ್ಕೆ, ಕಿವಿಗಡಚಿಕ್ಕುವ ಡಿಜೆ ಸೌಂಡ್‌ಗೆ ಮೆರವಣಿಗೆಯುದ್ದಕ್ಕೂ ಜನರು ಕುಣಿದು ಕುಪ್ಪಳಿಸಿದರು. ಜನರು ಸಂಭ್ರಮದಿಂದ ಪರಸ್ಪರ ಬಣ್ಣ ಎರಚಾಡಿದರು. ಬಸವೇಶ್ವರ ವೃತ್ತದಿಂದ ಆರಂಭವಾದ ಮೆರವಣಿಗೆಯು ಅಗಸಿ, ಮಹಾರಾಜರ ಮಠ, ಬಸವಜನ್ಮ ಸ್ಮಾರಕ ರಸ್ತೆ, ವಿಜಯಪುರ ರಸ್ತೆ ಮಾರ್ಗವಾಗಿ ಪುನಃ ಮೆರವಣಿಗೆಯು ಮಧ್ಯಾಹ್ನ ಸುಮಾರು 2 ಗಂಟೆಗೆ ಬಸವೇಶ್ವರ ವೃತ್ತಕ್ಕೆ ಬಂದ ನಂತರ ಸಿಂಹಾಸನ ಮಾಮಲೇದಾರ ಅವರ ಪ್ರತಿಮೆ ಆವರಣದಲ್ಲಿ ಹಾಕಲಾಗಿದ್ದ ರೇನ್ ಡ್ಯಾನ್ಸ್ ವೇದಿಕೆಯಲ್ಲಿ ವಿವಿಧ ಡಿಜೆ ಹಾಡುಗಳಿಗೆ ಎಲ್ಲ ಮುಖಂಡರು, ಜನರು ಕುಣಿದು ಕುಪ್ಪಳಿಸಿದರು. ಸ್ಥಳೀಯ ಪೊಲೀಸ್ ಠಾಣೆಯ ಪಿಐ ಗುರುಶಾಂತ ದಾಶ್ಯಾಳ ಅವರ ನೇತೃತ್ವದಲ್ಲಿ ಸೂಕ್ತ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಬಂದೋಬಸ್ತಿನಲ್ಲಿದ್ದ ಪಿಐ ಗುರುಶಾಂತ ದಾಶ್ಯಾಳ ಅವರಿಗೂ ಬಣ್ಣ ಹಚ್ಚಿ ಸಂಭ್ರಮ ಪಡುವದು ಕಂಡುಬಂದಿತ್ತು. ಮುಸ್ಲಿಂ ಬಾಂಧವರಾದ ಶಬ್ಬೀರ ನದಾಫ ಸೇರಿದಂತೆ ಒಂದಿಬ್ಬರು ಬಣ್ಣದಾಟದಲ್ಲಿ ಭಾಗವಹಿಸುವ ಮೂಲಕ ಸೌಹಾರ್ದತೆಯನ್ನು ಮೆರೆದರು. ಪಟ್ಟಣದ ಬಸವ ಜನ್ಮ ಸ್ಮಾರಕದ ಮುಂಭಾಗ ರಾಷ್ಟ್ರೀಯ ಬಸವಸೈನ್ಯವು ವ್ಯವಸ್ಥೆ ಮಾಡಿದ್ದ ರೇನ್ ಡ್ಯಾನ್ಸ್‌ನಲ್ಲಿ ಯುವಜನಾಂಗವಂತೂ ಮಸ್ತ್ ಹಾಡುಗಳಿಗೆ ಬಣ್ಣದಾಟದೊಂದಿಗೆ ಕುಣಿದು ಕುಪ್ಪಳಿಸಿ ಸಂಭ್ರಮ ಪಟ್ಟರು. ರೇನ್ ಡ್ಯಾನ್ಸ್ ಮಧ್ಯಾನ್ಹ 3 ಗಂಟೆಯವರೆಗೂ ಜರುಗಿತು.

ರಂಗಪಂಚಮಿಯ ಬಣ್ಣದಾಟದಲ್ಲಿ ಮುಖಂಡರಾದ ಎಸ್.ಎಸ್.ಝಳಕಿ, ಎಚ್.ಎಸ್.ಬಿರಾದಾರ, ಅನಿಲ ಅಗರವಾಲ,ಬಸವರಾಜ ಗೊಳಸಂಗಿ, ಎಂ.ಜಿ.ಆದಿಗೊಂಡ, ವಿನುತ ಕಲ್ಲೂರ, ಶೇಖರ ಗೊಳಸಂಗಿ, ಶಂಕರಗೌಡ ಬಿರಾದಾರ, ರವಿ ರಾಠೋಡ,ಸಂಗಯ್ಯ ಕಾಳಹಸ್ತೇಶ್ವರಮಠ, ಡಾ.ಬಸವರಾಜ ಕೋಟಿ, ರವಿಗೌಡ ಚಿಕ್ಕೊಂಡ, ಉಮೇಶ ಕವಲಗಿ, ಸಿ.ಎಸ್.ಪಾಟೀಲ, ಸುರೇಶಗೌಡ ಪಾಟೀಲ, ಸದಾನಂದ ಯಳಮೇಲಿ, ವ್ಹಿ.ಬಿ.ಮರ್ತುರ, ವಿವೇಕಾನಂದ ಕಲ್ಯಾಣಶೆಟ್ಟಿ, ಅಶೋಕ ಕಲ್ಲೂರ, ಆರ್‌.ಜಿ.ಅಳ್ಳಗಿ, ಜಟ್ಟಿಂಗರಾಯ ಮಾಲಗಾರ, ರಮೇಶ ಯಳಮೇಲಿ, ಅಮರ ಗಾಯಕವಾಡ, ಮಲ್ಲಿಕಾರ್ಜುನ ಅವಟಿ, ಸಿದ್ದಣ್ಣ ಕಲ್ಲೂರ, ಅಶೋಕ ಕಲ್ಲೂರ, ಬಸವರಾಜ ಚೌರಿ, ಶಂಕರ ಕ್ಷೀರಸಾಗರ, ಮುದಕಣ್ಣ ಹೊರ್ತಿ, ಶ್ರೀಶೈಲ ಶಿರಗುಪ್ಪಿ, ಎಸ್.ಬಿ.ಮನಗೂಳಿ,ಸಿದ್ರಾಮಪ್ಪ ಉಪ್ಪಿನ, ಸಂಜೀವ ಬಿರಾದಾರ,ಬಸವರಾಜ ಅಳ್ಳಗಿ, ಪ್ರಭಾಕರ ಖೇಡದ, ಕಾಶೀನಾಥ ಅವಟಿ ಸೇರಿದಂತೆ ಅಪಾರ ಸಂಖ್ಯೆಯ ಜನರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸ್ತ್ರೀ ಶಕ್ತಿ, ಸ್ವಸಹಾಯ ಸಂಘಗಳಲ್ಲಿ ಕ್ರಿಯಾಶೀಲರಾಗಿ
ಪ್ರಥಮ ಬಾರಿ ಹವ್ಯಕ ಭಾಷೆಗೆ ಸ್ಥಾನಮಾನ: ಎಂ.ಜಿ.ಹೆಗಡೆ