ಚಂದೂಪುರ ಗ್ರಾಮದಲ್ಲಿ ಸಂವಿಧಾನ ಜಾಗೃತಿ ಜಾಥಾಗೆ ಅದ್ಧೂರಿ ಸ್ವಾಗತ

KannadaprabhaNewsNetwork |  
Published : Feb 20, 2024, 01:49 AM IST
19ಕೆಎಂಎನ್ ಡಿ19 | Kannada Prabha

ಸಾರಾಂಶ

ಎಸ್.ಐ.ಹೊನ್ನಲಗೆರೆ, ತೊರೆಬೊಮ್ಮನಹಳ್ಳಿ, ಮೆಣಸಗೆರೆ ಗ್ರಾಪಂನ ಎಲ್ಲ ಗ್ರಾಮಗಳಿಗೂ ತೆರಳಿ ಭಾರತದ ಸಂವಿಧಾನದ ಬಗ್ಗೆ ಅರಿವು ಮೂಡಿಸಿತು. ಈ ವೇಳೆ ಚಂದೂಪುರ ಸರ್ಕಾರಿ ಪ್ರೌಢಶಾಲೆ, ಡಿ.ಕೆ.ಗೌಡ ಪ್ರೌಢಶಾಲೆ, ಶಾಂತಿನಿಕೇತನ, ಮಡೇನಹಳ್ಳಿ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು ರಥವನ್ನು ಕುಂಭಮೇಳದೊಂದಿಗೆ ಅದ್ಧೂರಿಯಾಗಿ ಸ್ವಾಗತಿಸಿದರು. ಪಂಚಾಯ್ತಿಗಳಲ್ಲಿ ಭಾರತ ಸಂವಿಧಾನದ ಬಗ್ಗೆ ಪ್ರತಿಜ್ಞಾವಿಧಿ ಬೋಧನೆ ಮಾಡಲಾಯಿತು. ಸಂಜೆ ವೇಳೆಗೆ ಭಾರತೀನಗರ ಗ್ರಾಪಂಗೆ ಆಗಮಿಸಿತು.

ಕನ್ನಡಪ್ರಭ ವಾರ್ತೆ ಭಾರತೀನಗರ

ಮದ್ದೂರು ತಾಲೂಕಿನ ಗಡಿಭಾಗ ಚಂದೂಪುರ ಗ್ರಾಮದಲ್ಲಿ ಸಂವಿಧಾನ ಜಾಗೃತಿ ಜಾಥಾವನ್ನು ಅದ್ಧೂರಿಯಾಗಿ ಸ್ವಾಗತಿಸಲಾಯಿತು.

ತಹಸೀಲ್ದಾರ್ ಸೋಮಶೇಖರ್ ರಥಯಾತ್ರೆ ಸ್ವಾಗತಿಸಿದರು. ತಾಲೂಕು ಆಡಳಿತ, ತಾಲೂಕು ಪಂಚಾಯ್ತಿ, ಶಿಕ್ಷಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಕೂಡ ಹಾಜರಿದ್ದು ರಥವನ್ನು ಗಡಿಯಲ್ಲಿ ಸ್ವಾಗತಿ ಸಂಚಾರಕ್ಕೆ ಬೀಳ್ಕೊಟ್ಟರು.

ನಂತರ ಎಸ್.ಐ.ಹೊನ್ನಲಗೆರೆ, ತೊರೆಬೊಮ್ಮನಹಳ್ಳಿ, ಮೆಣಸಗೆರೆ ಗ್ರಾಪಂನ ಎಲ್ಲ ಗ್ರಾಮಗಳಿಗೂ ತೆರಳಿ ಭಾರತದ ಸಂವಿಧಾನದ ಬಗ್ಗೆ ಅರಿವು ಮೂಡಿಸಿತು. ಈ ವೇಳೆ ಚಂದೂಪುರ ಸರ್ಕಾರಿ ಪ್ರೌಢಶಾಲೆ, ಡಿ.ಕೆ.ಗೌಡ ಪ್ರೌಢಶಾಲೆ, ಶಾಂತಿನಿಕೇತನ, ಮಡೇನಹಳ್ಳಿ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು ರಥವನ್ನು ಕುಂಭಮೇಳದೊಂದಿಗೆ ಅದ್ಧೂರಿಯಾಗಿ ಸ್ವಾಗತಿಸಿದರು.

ಪಂಚಾಯ್ತಿಗಳಲ್ಲಿ ಭಾರತ ಸಂವಿಧಾನದ ಬಗ್ಗೆ ಪ್ರತಿಜ್ಞಾವಿಧಿ ಬೋಧನೆ ಮಾಡಲಾಯಿತು. ಸಂಜೆ ವೇಳೆಗೆ ಭಾರತೀನಗರ ಗ್ರಾಪಂಗೆ ಆಗಮಿಸಿತು.

ಈ ವೇಳೆ ದಲಿತ ಮಹಾಸಭಾದ ಜಿಲ್ಲಾಧ್ಯಕ್ಷ ಎಚ್.ಎಸ್.ನಾಗರಾಜು, ಬಿಇಒ ಸಿ.ಎಚ್.ಕಾಳೀರಯ್ಯ, ಸಿಡಿಪಿಒ ನಾರಾಯಣ್, ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿದೇರ್ಶಕಿ ಕೆ.ಎಂ.ರೇಖಾ, ರೇಷ್ಮೆ ಸಹಾಯಕ ನಿರ್ದೇಶಕ ಸುರೇಶ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಮಹೇಶ್, ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಸಹಾಯಕ ನಿರ್ದೇಶಕ ಮಂಜುನಾಥ್, ನಿವೃತ್ತ ಕಾರ್ಯಪಾಲಕ ಅಭಿಯಂತರ ಬಸವರಾಜೇಗೌಡ, ಪಿಡಿಒ ಕುಮಾರ್, ಕೆ.ಎಂ.ರವಿ, ದಲಿತ ಮುಖಂಡರಾದ ಕಬ್ಬಾಳಯ್ಯ, ಕಾಡುಕೊತ್ತನಹಳ್ಳಿ ಕೆಂಪರಾಜು, ಕರಡಕೆರೆ ಯೋಗೇಶ್, ಗುಡಿಗೆರೆ ಬಸವರಾಜು, ರಾಘವೇಂದ್ರ, ಚಿದಂಬರ, ಎಸ್.ಐ.ಹೊನ್ನಲಗೆರೆ ಅಂಬೇಡ್ಕರ್ ಯುವಕರ ಸಂಘದ ಪದಾಧಿಕಾರಿಗಳು, ಗ್ರಾಮ ಆಡಳಿತಾಧಿಕಾರಿ ರೂಪ, ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ತಾಲೂಕು ಆಡಳಿತ, ಕಂದಾಯ ಇಲಖೆ ಅಧಿಕಾರಿಗಳು, ಪೊಲೀಸ್ ಇಲಾಖೆ, ಶಾಲಾ-ಕಾಲೇಜಿನ ಶಿಕ್ಷಕರು, ಉಪನ್ಯಾಸಕರು ಉಪಸ್ಥಿತರಿದ್ದರು.

ರಥಯಾತ್ರೆಯನ್ನು ಸ್ವಾಗತಿಸಲು ಶಾಸಕ ಕೆ.ಎಂ.ಉದಯ್ ಹೊರತು ಪಡಿಸಿದರೆ ಇನ್ನುಳಿದ ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ, ದಿನೇಶ್‌ಗೂಳಿಗೌಡರನ್ನು ಆಹ್ವಾನಿಸದೆ ಇರುವುದಕ್ಕೆ ಅಭಿಮಾನಿಗಳು ತಾಲೂಕು ಆಡಳಿತದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!