ರನ್ನ ರಥಯಾತ್ರೆಗೆ ಭವ್ಯ ಸ್ವಾಗತ

KannadaprabhaNewsNetwork |  
Published : Feb 21, 2025, 12:49 AM IST
ಚಿತ್ರದುರ್ಗ ಎರಡನೇ ಪುಟದ ಟಿಂಟ್ ಬಾಟಂ  | Kannada Prabha

ಸಾರಾಂಶ

ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿ ನಡೆವ ರನ್ನ ವೈಭವ-2025ರ ಅಂಗವಾಗಿ ನಗರಕ್ಕೆ ಆಗಮಿಸಿದ ರನ್ನ ರಥಯಾತ್ರೆಗೆ ಜಾನಪದ ಕಲಾಮೇಳಗಳೊಂದಿಗೆ ತುಮಕೂರಿನಿಂದ ಶಿರಾ, ಹಿರಿಯೂರು ಮಾರ್ಗವಾಗಿ ನಗರಕ್ಕೆ ಆಗಮಿಸಿದ ರಥಯಾತ್ರೆಯನ್ನು ಮದಕರಿ ವೃತ್ತದಲ್ಲಿ ಸ್ವಾಗತಿಸಲಾಯಿತು.

ಚಿತ್ರದುರ್ಗ: ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿ ನಡೆವ ರನ್ನ ವೈಭವ-2025ರ ಅಂಗವಾಗಿ ನಗರಕ್ಕೆ ಆಗಮಿಸಿದ ರನ್ನ ರಥಯಾತ್ರೆಗೆ ಜಾನಪದ ಕಲಾಮೇಳಗಳೊಂದಿಗೆ ತುಮಕೂರಿನಿಂದ ಶಿರಾ, ಹಿರಿಯೂರು ಮಾರ್ಗವಾಗಿ ನಗರಕ್ಕೆ ಆಗಮಿಸಿದ ರಥಯಾತ್ರೆಯನ್ನು ಮದಕರಿ ವೃತ್ತದಲ್ಲಿ ಸ್ವಾಗತಿಸಲಾಯಿತು. ಮದಕರಿ ವೃತ್ತದಿಂದ ಮೆರವಣಿಗೆ ಮೂಲಕ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದ ಮಾರ್ಗವಾಗಿ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಮೀಪದ ಒನಕೆ ಓಬವ್ವ ವೃತ್ತಕ್ಕೆ ಆಗಮಿಸಿತು. ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ರನ್ನನ ಮೂರ್ತಿಗೆ ಪುಷ್ಪನಮನ ಸಲ್ಲಿಸಿದರು. ರನ್ನ ರಥ ಸಮಿತಿಯ ಸದಸ್ಯರಿಂದ ರನ್ನನ ಗದೆಯನ್ನು ಹಸ್ತಾಂತರ ಮಾಡಿಕೊಂಡ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ರನ್ನ ರಥಕ್ಕೆ ಚಾಲನೆ ನೀಡಿದರು. ನಂತರ ರಥಯಾತ್ರೆಯು ಚಿತ್ರದುರ್ಗ ನಗರದಿಂದ ಕೂಡ್ಲಿಗಿ ಮಾರ್ಗವಾಗಿ ಹೊಸಪೇಟೆಗೆ ತೆರಳಿತು. ಡಾ.ಬಿ.ಎಂ.ಗುರುನಾಥ, ಕೆ.ಎಂ.ಶಿವಸ್ವಾಮಿ, ಮಾಲತೇಶ್ ಮುದ್ದಜ್ಜಿ, ಮಲ್ಲಿಕಾರ್ಜುನ್, ರಾಜಪ್ಪ, ಡಾ.ಬಿ.ಟಿ.ಲೋಲಾಕ್ಷಮ್ಮ, ಉಮೇಶಯ್ಯ, ಟಿ.ಎಚ್.ಬಸವರಾಜಪ್ಪ, ಕೆಪಿಎಂ ಗಣೇಶಯ್ಯ ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಪಿಎಲ್‌ ಮಾನದಂಡ ಬದಲಿಗೆ ಮುಂದಾದ ರಾಜ್ಯ
ಸರ್ಕಾರಿ ಶಾಲೆಗೆ ಶೀಘ್ರ 11000 ಶಿಕ್ಷಕರ ನೇಮಕ : ಮಧು