ಕಲಬುರಗಿ: ಕನ್ನಡ ಜ್ಯೋತಿ ರಥ ಯಾತ್ರೆಗೆ ಅದ್ಧೂರಿ ಸ್ವಾಗತ

KannadaprabhaNewsNetwork |  
Published : Jan 16, 2024, 01:47 AM IST
ಕರ್ನಾಟಕ ಸಂಭ್ರಮ ೫೦ರ ಜ್ಯೋತಿ ರಥ ಯಾತ್ರೆ ಚಿತ್ತಾಪುರಕ್ಕೆ ಆಗಮಿಸಿದಾಗ ತಹಸೀಲ್ದಾರ್‌ ಸಯ್ಯಾದ್ ಷಾಷಾವಲ್ಲಿ ಸ್ವಾಗತಿಸಿಕೊಂಡರು. | Kannada Prabha

ಸಾರಾಂಶ

ಕಾಳಗಿ ಮಾರ್ಗವಾಗಿ ಚಿತ್ತಾಪುರ ಪಟ್ಟಣಕ್ಕೆ ಆಗಮಿಸಿದ ಕರ್ನಾಟಕ ಸಂಭ್ರಮ ೫೦ ಹೆಸರಾಯಿತು ಕರ್ನಾಟಕ ಉಸಿರಾಯಿತು ಕನ್ನಡ ಜ್ಯೋತಿ ಯಾತ್ರೆಗೆ ತಹಸೀಲ್ದಾರ್‌ ಸಯ್ಯಾದ್ ಷಾಷಾವಲ್ಲಿ ಭುವನೇಶ್ವರಿ ಮೂರ್ತಿಗೆ ಮಾಲಾರ್ಪಣೆ ಮಾಡುವ ಮೂಲಕ ಅದ್ಧೂರಿಯಾಗಿ ಸ್ವಾಗತಿಸಲಾಯಿತು.

ಕನ್ನಡಪ್ರಭ ವಾರ್ತೆ ಚಿತ್ತಾಪುರ

ಮೈಸೂರು ರಾಜ್ಯವು ಕರ್ನಾಟಕ ಎಂದು ನಾಮಕರಣವಾಗಿ ೫೦ ವರ್ಷ ಪೂರ್ಣಗೊಂಡ ಹಿನ್ನೆಲೆ ಕರ್ನಾಟಕ ಸಂಭ್ರಮ ೫೦ ಹೆಸರಾಯಿತು ಕರ್ನಾಟಕ ಉಸಿರಾಯಿತು ಕನ್ನಡ ಎಂಬ ಹೆಸರಿನಲ್ಲಿ ರಥ ಯಾತ್ರೆಯು ಕರ್ನಾಟಕದಾದ್ಯಂತ ಸಂಚರಿಸುತ್ತಿದೆ. ಕಾಳಗಿ ಮಾರ್ಗವಾಗಿ ಚಿತ್ತಾಪುರ ಪಟ್ಟಣಕ್ಕೆ ಆಗಮಿಸಿದಾಗ ಲಾಡ್ಜಿಂಗ್ ಕ್ರಾಸ್ ಹತ್ತಿರ ತಹಸೀಲ್ದಾರ್‌ ಸಯ್ಯಾದ್ ಷಾಷಾವಲ್ಲಿ ಭುವನೇಶ್ವರಿ ಮೂರ್ತಿಗೆ ಮಾಲಾರ್ಪಣೆ ಮಾಡುವ ಮೂಲಕ ಸ್ವಾಗತಿಸಿಕೊಂಡರು.

ರಥ ಯಾತ್ರೆ ಕೋರ್ಟ್ ರಸ್ತೆ, ಅಕ್ಕಮಹಾದೇವಿ ಮಂದಿರ, ಚಿತ್ತಾವಲಿ ವೃತ್ತ, ಜನತಾ ವೃತ್ತ, ಭುವನೇಶ್ವರಿ ವೃತ್ತ, ಅಂಬೇಡ್ಕರ್ ವೃತ್ತ ಬಸ್ ನಿಲ್ದಾಣ ರಸ್ತೆ, ಬಸವೇಶ್ವರ ವೃತ್ತದ ಮೂಲಕ ತಹಸೀಲ್ದಾರ್‌ ಕಚೇರಿಗೆ ತಲುಪಿತು. ಕುಂಬಮೇಳ ಹಾಗೂ ಯುವಕರ ಲೈಜಿಮ್ ಆಕರ್ಷಕವಾಗಿ ಕಂಡುಬಂತು. ಕನ್ನಡದ ಗೀತೆಗಳು ರಾರಾಜಿಸಿದವು.

ಕೆಪಿಸಿಸಿ ಸದಸ್ಯ ನಾಗರೆಡ್ಡಿ ಪಾಟೀಲ ಕರದಾಳ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ, ತಾಪಂ ಇಒ ನೀಲಗಂಗಾ ಬಬಲಾದ್, ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ದವೀರಯ್ಯ ರುದ್ನೂರ್, ಬಿಸಿಎಂ ಅಧಿಕಾರಿ ಶಿವಶರಣಪ್ಪ ವಾಗ್ಮೋರೆ, ಪಿಎಸ್‌ಐ ಶ್ರೀಶೈಲ್ ಅಂಬಾಟಿ, ಸಮಾಜ ಕಲ್ಯಾಣಾಧಿಕಾರಿ ಚೇತನ್ ಗುರಿಕಾರ, ಕೃಷಿ ಅಧಿಕಾರಿ ಸಂಜೀವಕುಮಾರ ಮಾನಕರ್, ಸರಕಾರಿ ನೌಕರರ ಸಂಘದ ಅಧ್ಯಕ್ಷ ಬಸವರಾಜ ಬಳೂಂಡಗಿ, ಪುರಸಭೆ ಮುಖ್ಯಾಧಿಕಾರಿ ಮನೋಜಕುಮಾರ ಗುರಿಕಾರ, ಕಸಾಪ ಅಧ್ಯಕ್ಷ ವಿರೇಂದ್ರ ಕೊಲ್ಲೂರ, ನಾಗಾವಿ ಸಾಹಿತ್ಯ ಸಾಂಸ್ಕೃತಿಕ ಪರಿಷತ್ತಿನ ಅಧ್ಯಕ್ಷ ಕಾಶಿನಾಥ ಗುತ್ತೇದಾರ, ಪಶು ಅಧಿಕಾರಿ ಡಾ.ಶಂಕರ ಕಣ್ಣಿ, ಡಾ.ಬಸಲಿಂಗಪ್ಪ ಡಿಗ್ಗಿ, ಸಿಡಿಪಿಓ ಮಲ್ಲಣ್ಣ ದೇಸಾಯಿ, ಸಂತೋಷಕುಮಾರ ಶಿರನಾಳ, ನಾಗಯ್ಯಸ್ವಾಮಿ ಅಲ್ಲೂರ, ಜಗದೀಶ ಚವ್ಹಾಣ, ನರಹರಿ ಕುಲಕರ್ಣಿ, ಪ್ರಹ್ಲಾದ್ ವಿಶ್ವಕರ್ಮ, ಪಂಚಾಕ್ಷರಿ ಪೂಜಾರಿ, ಚಂದ್ರಶೇಖರ ಬಳ್ಳಾ, ಆನಂದ ಕಲ್ಲಕ್, ದೇವಿಂದ್ರ ಕುಮುಸಿ, ನಿಂಗಣ್ಣ ಹೆಗಲೇರಿ, ಶಿವಾನಂದ ನಾಲವಾರ, ವೆಂಕಟರೆಡ್ಡಿ, ತಮ್ಮನ್ನಾ ಕೌಸಾರ್ ಇತರರು ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ