ಅಣಬೆ ಪ್ರಿಯರಿಗೆ ಈ ವರ್ಷ ಭರ್ಜರಿ ಹಬ್ಬ

KannadaprabhaNewsNetwork |  
Published : Aug 24, 2026, 02:15 AM IST
ತಾಲೂಕಿನ ಸಬಗುಳಿಯಲ್ಲಿ ಮೂಡಿರುವ ಪ್ರಕೃತಿದತ್ತ ಅಣಬೆ ತೆಗೆಯುತ್ತಿರುವ ಕೃಷಿಕ ಸಂದೀಪ ನಾಯ್ಕ. | Kannada Prabha

ಸಾರಾಂಶ

ಪ್ರಕೃತಿದತ್ತವಾಗಿ ಭೂರಮೆಯಲ್ಲಿ ಮೂಡುವ ಅಣಬೆಯ ಬೆಳೆ ಈ ವರ್ಷ ಬಂಪರ್ ಆಗಿ ಕಂಡು ಬಂದಿದೆ. ಹೇಳಿ ಮಾಡಿಸಿದಂಥ ವಾತಾವರಣ ಹಾಗೂ ಕಡಿಮೆ ಮಳೆ ಈ ವರ್ಷ ಅಣಬೆ ಹೆಚ್ಚಾಗಿ ಬರಲು ಕಾರಣವಾಗಿದೆ.

ಅಂಕೋಲಾದಲ್ಲಿ ಅಣಬೆ ಬಂಪರ್; ಮಾರುಕಟ್ಟೆಗೆ ಭರಪೂರ ಆಗಮನ

ಮಳೆ-ಬಿಸಿಲಿನ ಆಟಕ್ಕೆ ಭೂರಮೆಯಲ್ಲಿ ಬಂಪರ್ ಆಗಿ ಮೂಡಿಬಂದ ಅಣಬೆ

ರಾಘು ಕಾಕರಮಠ

ಕನ್ನಡಪ್ರಭ ವಾರ್ತೆ ಅಂಕೋಲಾ

ಪ್ರಕೃತಿದತ್ತವಾಗಿ ಭೂರಮೆಯಲ್ಲಿ ಮೂಡುವ ಅಣಬೆಯ ಬೆಳೆ ಈ ವರ್ಷ ಬಂಪರ್ ಆಗಿ ಕಂಡು ಬಂದಿದೆ. ಹೇಳಿ ಮಾಡಿಸಿದಂಥ ವಾತಾವರಣ ಹಾಗೂ ಕಡಿಮೆ ಮಳೆ ಈ ವರ್ಷ ಅಣಬೆ ಹೆಚ್ಚಾಗಿ ಬರಲು ಕಾರಣವಾಗಿದೆ.

ಪ್ರತಿ ವರ್ಷ ಮುಂಗಾರಿನ ಜೂನ್, ಜುಲೈ, ಅಗಸ್ಟ್ ತಿಂಗಳ ಅವಧಿಯಲ್ಲಿ ಅರಣ್ಯ ಹಾಗೂ ದೊಡ್ಡ ಮರಗಳ ಬುಡಗಳಲ್ಲಿ ತೋಟ ಮತ್ತು ಹೊಲಗಳ ಬದುವಿನಲ್ಲಿ, ಗೊಬ್ಬು ಮಣ್ಣು ಹಾಗೂ ಒರಲೆ ಹುತ್ತಗಳಲ್ಲಿ ಸೊಂಪಾಗಿ ಪ್ರಕೃತಿದತ್ತವಾಗಿ ಬೆಳೆದು ಹೇರಳವಾಗಿ ಸಿಗುವ ರುಚಿಕರ ಅಣಬೆ, ಈ ವರ್ಷ ನಿರೀಕ್ಷಿತ ಪ್ರಮಾಣಕ್ಕಿಂತಲೂ ಹೆಚ್ಚಾಗಿ ಪಟ್ಟಣಕ್ಕೆ ಮಾರಾಟಕ್ಕೆ ಬಂದಿದೆ.

ಅಣಬೆ ಪ್ರಿಯರು ತುಸು ಕಷ್ಟವಾದರೂ ಇಷ್ಟಪಟ್ಟು ಅಣಬೆ ಸಿಗುವ ಪ್ರದೇಶವನ್ನು ಹುಡುಕಿ ಆಸ್ವಾದಿಸುತ್ತಾರೆ. ಬೆಳೆಗಿನ ಜಾವ 5-6 ಗಂಟೆಗೆ ತೆರಳಿ ಅಣಬೆ ಕೀಳುವುದೇ ಒಂದು ವಿಶಿಷ್ಠ ಅನುಭವವಾಗಿದೆ.

ಸಾಮಾನ್ಯವಾಗಿ ಮುಂಗಾರು ಅವಧಿಯ ಜೂನ್‌ನಿಂದ ಆಗಸ್ಟ್ ತಿಂಗಳ ವರೆಗೆ ಕಂಡು ಬರುತ್ತದೆ. ಇವುಗಳನ್ನು ಸಂಗ್ರಹಿಸಿಕೊಂಡು ಖಾದ್ಯ ತಯಾರಿಸಿ ಸೇವಿಸಲಾಗುತ್ತದೆ. ಇನ್ನೂ ಅಣಬೆ ಹುಟ್ಟುವ ಸ್ಥಳ ಗೊತ್ತಿದ್ದವರು ಮಳೆಗಾಲ ಅವಧಿ ಮುಗಿಯುವ ತನಕ ಕಿತ್ತುತಂದು, ಅದರಿಂದ ಖಾದ್ಯ ತಯಾರಿಸಿ ಸೇವಿಸುತ್ತಾರೆ.

ಮೊಗ್ಗಿನ ಅಣಬೆ ರುಚಿಕರ:

ಅಣಬೆ ಹುಟ್ಟುವ ಜಾಗ ಗೊತ್ತಿದ್ದವರು ಹಿಂದಿನ ದಿನವೇ ಹುಟ್ಟಿ ಬರುವ ಸುಳಿವು ತಿಳಿದಿರುತ್ತಾರೆ. ಮರುದಿನ ಸೂರ್ಯ ಉದಯಿಸುವ ಮುನ್ನವೇ ಎದ್ದು ಮೊಗ್ಗಿರುವ ಅಣಬೆಯನ್ನು ಕಿತ್ತುಕೊಂಡು ಬರುತ್ತಾರೆ. ಮೊಗ್ಗಿನ ಅಣಬೆ ಭಾರಿ ಬೇಡಿಕೆ ಇದೆ. ಅಣಬೆ ಹೂವಿನಂತೆ ಅರಳಿದರೆ ಅಷ್ಟು ರುಚಿಯಿರುವುದಿಲ್ಲ, ಹಾಗಾಗಿ ಬೇಡಿಕೆ ಕಡಿಮೆ. ಹೂವಾದ ಅಣಬೆ ಬಳಸುವವರು ಬಹಳಷ್ಟು ಕಡಿಮೆ ಎನ್ನುತ್ತಾರೆ ಕೃಷಿಕ ಗಣಪತಿ ನಾಯಕ ಮೂಲೆಮನೆ.ಈ ವರ್ಷ ಅಣಬೆ ಬೆಳೆಯಲು ಅನುಕೂಲಕರ ವಾತಾವರಣ ಇರುವುದರಿಂದ ಅಣಬೆ ಬಹಳಷ್ಟು ಪ್ರಮಾಣದಲ್ಲಿ ಮೂಡಿದೆ. ಭಾರಿ ಮಳೆ ಬಿದ್ದರೆ ಭೂಮಿ ಗಟ್ಟಿಗೊಳ್ಳುತ್ತದೆ. ಹಾಗಾಗಿ ಅಣಬೆ ಮೂಡಲು ತೊಂದರೆಯಾಗುತ್ತದೆ. ಮಳೆ-ಬಿಸಿಲು ಈ ವರ್ಷ ಕಂಡು ಬಂದಿದ್ದರಿಂದ ಭೂಮಿಯಿಂದ ಸರಾಗವಾಗಿ ಅಣಬೆ ಎದ್ದಿದೆ. ಇದು ಖುಷಿ ತಂದಿದೆ ಎನ್ನುತ್ತಾರೆ ಸಬಗುಳಿ ಗ್ರಾಮದ ಅಣಬೆ ಕೃಷಿಕ ಸಂದೀಪ ನಾಯ್ಕ.

ಹೆಚ್ಚಿನ ಪ್ರಮಾಣದ ಪ್ರೋಟಿನ್

ಮಾರುಕಟ್ಟೆಯಲ್ಲಿ ಕೃತಕವಾಗಿ ಬೆಳೆಸಿದ ಅಣಬೆ ಸಿಗುತ್ತದೆ, ಅದು ಅಷ್ಟು ರುಚಿಯಿರುವುದಿಲ್ಲ ಹಾಗೆ ರಾಸಾಯನಿಕಯುಕ್ತವಾಗಿರುತ್ತದೆ. ಬಿಳಿ ಮುಖದ (ಬಿಳಿ ಸೊಂಡಿ), ಕರಿ ಮುಖದ (ಬಿಳಿ ಸೊಂಡಿ) ಹೀಗೆ ಎರಡು ವಿಧದಲ್ಲಿ ಅಣಬೆ ಭೂಮಿಯಿಂದ ಏಳುತ್ತದೆ. ಬಿಳಿ ಸೊಂಡಿ ಅಣಬೆಯಲ್ಲಿ ಭಾರಿ ಪ್ರಮಾಣದಲ್ಲಿ ಪ್ರೋಟಿನ್ ಹಾಗೂ ತಿನ್ನಲು ರುಚಿಕರವಾಗಿದ್ದರಿಂದ ಇದಕ್ಕೆ ಬೇಡಿಕೆ ಹೆಚ್ಚಾಗಿದೆ.

ಒಂದಕ್ಕೆ ₹3:

ಸುಂಕಸಾಳ, ರಾಮನಗುಳಿ, ಗುಳ್ಳಾಪುರ ಹಾಗೂ ಹೆಬ್ಬುಳ ಭಾಗಗಳಲ್ಲಿ ಹೆಚ್ಚಾಗಿ ಅಣಬೆ ಕಾಣಸಿಗುತ್ತದೆ. ಅಣಬೆಗೆ ಈ ವರ್ಷ 1ಕ್ಕೆ ₹3 ದರ ಬಂದಿದೆ. ಹಿಂದಿನ ವರ್ಷ ₹10 ತನಕವು ಮಾರಾಟವಾಗಿತ್ತು. ಕೆಲವು ಏಜೆಂಟರು ಅಣಬೆಗೆ ಕೃತಕ ಅಭಾವ ಸೃಷ್ಟಿಸಿ ಹೆಚ್ಚಿನ ದರಕ್ಕೆ ಮಾರಟ ಮಾಡುತ್ತಿರುವ ಆರೋಪವು ಕೂಡ ಇದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಣಜಿಗ ಸಮಾಜ ಸ್ವಾವಲಂಬನೆಯಿಂದ ಸಂಘಟಿತವಾಗಬೇಕು
ದೇವಸ್ಥಾನದಲ್ಲಿ ಮೂತ್ರ ವಿಸರ್ಜನೆ ಪ್ರಕರಣ, ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ಆರೋಪಿ ಗಡಿಪಾರು ಮಾಡಿ