
ಕನ್ನಡಪ್ರಭ ವಾರ್ತೆ ರಾಮನಗರ
ನಗರದ ರಾಯರದೊಡ್ಡಿಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಸಹಯೋಗದಲ್ಲಿ ‘ನಮ್ಮವರು ಬಳಗ’ ಸೋಮವಾರ ಹಮ್ಮಿಕೊಂಡಿದ್ದ ‘ಮಹಿಳಾ ದಿನಾಚರಣೆ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಬಳೆ ತೊಡುವ ಹೆಣ್ಣು ಅಸಹಾಯಕಳು ಎಂದು ನೋಡುವ ಮನಸ್ಥಿತಿಯಿಂದ ಸಮಾಜ ಹೊರಬರಬೇಕು’ ಎಂದರು.
ಹೆಣ್ಣು ಮತ್ತು ಗಂಡು ಪರಸ್ಪರ ಅವಲಂಬಿಗಳು. ದೈಹಿಕ ರಚನೆಯಲ್ಲಿ ಕೆಲ ವ್ಯತ್ಯಾಸ ಬಿಟ್ಟರೆ, ಉಳಿದೆಲ್ಲ ವಿಷಯಗಳಲ್ಲಿ ಸಮಾನರು. ಹೆಣ್ಣು ಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ಸಾಧನೆಯ ಶಿಖರ ಏರಿದವರಿಂದ ಪ್ರೇರಣೆ ಪಡೆಯಬೇಕು. ಉತ್ತಮ ಶಿಕ್ಷಣ ಪಡೆದು ಅವಕಾಶಗಳ ಬಗ್ಗೆ ಅರಿತು ತಮ್ಮಿಷ್ಟದ ಕ್ಷೇತ್ರಗಳಲ್ಲಿ ಸಾಧನೆ ಮಾಡಬೇಕು ಎಂದು ಸಲಹೆ ನೀಡಿದರು.ಘನ ಉಪಸ್ಥಿತಿ ವಹಿಸಿದ್ದ ನಗರಸಭೆ ಅಧ್ಯಕ್ಷ ಕೆ. ಶೇಷಾದ್ರಿ (ಶಶಿ) ಮಾತನಾಡಿ, ಅನಾದಿ ಕಾಲದಿಂದಲೂ ಹೆಣ್ಣು ಶೋಷಣೆಗೆ ಒಳಗಾಗಿದ್ದಾಳೆ. ವೈರುಧ್ಯಗಳ ನಡುವೆಯೂ ರಾಣಿ ಚನ್ನಮ್ಮ, ಝಾನ್ಸಿ ರಾಣಿ ಲಕ್ಷ್ಮೀಬಾಯಿ, ಇಂದಿರಾ ಗಾಂಧಿ, ಪಿ.ವಿ. ಸಿಂಧು, ಸ್ಮೃತಿ ಮಂದನಾ ಸೇರಿ ಹಲವು ಮಹಿಳೆಯರು ಶೌರ್ಯ ಮೆರೆದಿದ್ದಾರೆ. ಮಹಿಳೆ ತನಗೆ ಅವಕಾಶ ಸಿಕ್ಕಾಗಲೆಲ್ಲಾ ಸಾಧಿಸಿ ತೋರಿಸಿರುವ ನಿದರ್ಶನಗಳು ಸಾಕಷ್ಟಿವೆ ಎಂದರು.
ಯುವಶಕ್ತಿ ಮನಸ್ಸು ಮಾಡಿದರೆ ಅಸಾಧ್ಯವಾದುದು ಏನೂ ಇಲ್ಲ. ವಿಶ್ವದಲ್ಲೇ ಅತಿ ಹೆಚ್ಚು ಯುವಜನರನ್ನು ಹೊಂದಿರುವ ದೇಶದಲ್ಲಿ ಯುವಶಕ್ತಿ ಕುಂದುತ್ತಿದೆ. ಭ್ರಷ್ಟಾಚಾರ, ಅನ್ಯಾಯ, ಅಸಮಾನತೆ, ದೌರ್ಜನ್ಯದ ವಿರುದ್ಧ ದನಿ ಎತ್ತಬೇಕಿದ್ದ ಸಮುದಾಯ ಮೊಬೈಲ್ ಮತ್ತು ಸಾಮಾಜಿಕ ಜಾಲತಾಣದಲ್ಲಿ ಮುಳುಗಿದೆ. ಅದರಿಂದ ಹೊರಬಂದು ಉತ್ತಮ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಕಿವಿಮಾತು ಹೇಳಿದರು.
ಸಿವಿಲ್ ನ್ಯಾಯಾಧೀಶರಾಗಿ ಆಯ್ಕೆಯಾಗಿರುವ ಚನ್ನಪಟ್ಟಣ ತಾಲೂಕಿನ ಲಾಳಾಘಟ್ಟದ ಎಸ್. ಪ್ರಭಾವತಿ, ತಂದೆ ಸುಬ್ರಮಣ್ಯ, ತಾಯಿ ಪಂಚಾಮೃತ ಹಾಗೂ ಅತಿಥಿಗಳನ್ನು ಸನ್ಮಾನಿಸಲಾಯಿತು. ಕಾಂತಾಮಣಿ ಸ್ವಾಗತಿಸಿದರು. ಮನೋವೈದ್ಯಕೀಯ ಸಾಮಾಜಿಕ ಕಾರ್ಯಕರ್ತೆ ಪದ್ಮರೇಖಾ ಎಸ್. ನಿರೂಪಣೆ ಮಾಡಿದರು. ಸಹಾಯಕ ಪ್ರಾಧ್ಯಾಪಕಿ ನಂದಿನಿ ಕೆ.ಎನ್ ಪ್ರಾರ್ಥನೆ ಹಾಡಿದರು.
ಕೋಟ್...
– ಕೆ. ಶೇಷಾದ್ರಿ (ಶಶಿ), ಅಧ್ಯಕ್ಷ, ನಗರಸಭೆ, ರಾಮನಗರ
ಕೋಟ್...
– ರಾಧಾ ಜಿ.ಆರ್., ಪ್ರಾಂಶುಪಾಲರು, ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು
------ಕೀಳರಿಮೆ ಬಿಡಿ; ಆತ್ಮವಿಶ್ವಾಸ ಬೆಳೆಸಿಕೊಳ್ಳಿ
ಅಬಲೆ ಎಂಬ ಕಾರಣಕ್ಕೆ ಹೆಣ್ಣು ಮಕ್ಕಳಿಗೆ ಅವಕಾಶಗಳನ್ನು ನಿರಾಕರಿಸುತ್ತಿದ್ದ ಕಾಲ ಬದಲಾಗಿದೆ. ಅವಕಾಶಗಳನ್ನು ಬಳಸಿಕೊಂಡು ಸಾಧಿಸುವ ಮೂಲಕ, ನಮ್ಮ ಸಾಮರ್ಥ್ಯ ಏನು ಎಂಬುದನ್ನು ತೋರಿಸಬೇಕು. ಅದಕ್ಕಾಗಿ, ಕೀಳರಿಮೆ ಬಿಟ್ಟು ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು. ಮುಂದೆ ನಾವೇನಾಗಬೇಕು ಎಂಬುದನ್ನು ವಿದ್ಯಾರ್ಥಿದೆಸೆಯಲ್ಲಿ ನಿರ್ಧರಿಸಿ, ಪರಿಶ್ರಮ ಹಾಕಿದರೆ ಗುರಿ ಮುಟ್ಟಬಹುದು. ಸಾಮಾಜಿಕ ಜಾಲತಾಣ ಮತ್ತು ಮೊಬೈಲ್ ಬಳಕೆಯಿಂದ ದೂರವಿದ್ದು, ದಿನಪತ್ರಿಕೆ ಮತ್ತು ಪುಸ್ತಕಗಳ ಓದುವ ಅಭ್ಯಾಸ ಬೆಳೆಸಿಕೊಳ್ಳಬೇಕು. ನಾನಿಂದು ನಿಮ್ಮೆದುರು ನಿಂತಿರುವುದಕ್ಕೆ ನನ್ನ ತಂದೆ-ತಾಯಿ ಶ್ರಮ ಕಾರಣ ಎಂದು ಸಿವಿಲ್ ನ್ಯಾಯಾಧೀಶೆಯಾಗಿರುವ ಆಯ್ಕೆಯಾಗಿರುವ ಎಸ್. ಪ್ರಭಾವತಿ ಹೇಳಿದರು.