ನಶೆಮುಕ್ತ ಸಮಾಜದಿಂದ ಸದೃಢ ದೇಹ-ದೇಶ ಸಾಧ್ಯ

KannadaprabhaNewsNetwork |  
Published : Nov 09, 2024, 01:25 AM IST
08 ಎಚ್‍ಆರ್‍ಆರ್ 4 ಹಾಗೂ 4ಎಹರಿಹರದ ಸೆಂಟ್ ಅಲೋಸಿಸ್ ಪಿ ಯು ಕಾಲೇಜಿನಲ್ಲಿ ತಂಬಾಕು ಮುಕ್ತ ಯುವ ಅಭಿಯಾನ 2.0 ಕಾರ್ಯಕ್ರಮ ನಡೆಯಿತು. | Kannada Prabha

ಸಾರಾಂಶ

ತಂಬಾಕು ಹಾಗೂ ತಂಬಾಕು ಉತ್ಪನ್ನಗಳ ಸೇವನೆ ಕಡೆಗೆ ಇಂದಿನ ಯುವಜನತೆ ಹೆಚ್ಚು ಆಕರ್ಷಿತವಾಗುತ್ತಿದ್ದಾರೆ. ಅವುಗಳಿಂದ ದೂರ ಉಳಿದರೆ ಮಾತ್ರ ದೇಹ, ಕುಟುಂಬ ಹಾಗೂ ದೇಶವನ್ನು ಸದೃಢವಾಗಿ ಇರಬಲ್ಲದು ಎಂದು ವಕೀಲ ಸಂಘದ ಅಧ್ಯಕ್ಷ ಆನಂದ ಕುಮಾರ ಹೇಳಿದ್ದಾರೆ.

- ತಂಬಾಕುಮುಕ್ತ ಯುವ ಅಭಿಯಾನದಲ್ಲಿ ವಕೀಲ ಆನಂದಕುಮಾರ ಅಭಿಮತ - - - ಕನ್ನಡಪ್ರಭ ವಾರ್ತೆ ಹರಿಹರ ತಂಬಾಕು ಹಾಗೂ ತಂಬಾಕು ಉತ್ಪನ್ನಗಳ ಸೇವನೆ ಕಡೆಗೆ ಇಂದಿನ ಯುವಜನತೆ ಹೆಚ್ಚು ಆಕರ್ಷಿತವಾಗುತ್ತಿದ್ದಾರೆ. ಅವುಗಳಿಂದ ದೂರ ಉಳಿದರೆ ಮಾತ್ರ ದೇಹ, ಕುಟುಂಬ ಹಾಗೂ ದೇಶವನ್ನು ಸದೃಢವಾಗಿ ಇರಬಲ್ಲದು ಎಂದು ವಕೀಲರ ಸಂಘದ ಅಧ್ಯಕ್ಷ ಆನಂದ ಕುಮಾರ ಹೇಳಿದರು.

ನಗರದ ಸೆಂಟ್ ಅಲೋಸಿಸ್ ಪಿಯು ಕಾಲೇಜಿನಲ್ಲಿ ಶುಕ್ರವಾರ ನಡೆದ ತಂಬಾಕುಮುಕ್ತ ಯುವ ಅಭಿಯಾನ 2.0 ಉದ್ಘಾಟಿಸಿ ಅವರು ಮಾತನಾಡಿದರು. ತಂಬಾಕು ಸೇವನೆಯಿಂದಾಗುವ ದುಷ್ಪರಿಣಾಮಗಳನ್ನು ಅರಿತ ಸರ್ಕಾರ ಅನೇಕ ಕಾಯಿದೆಗಳನ್ನು ತಂದಿದೆ. ಸೆಕ್ಷನ್ 4ರ ಪ್ರಕಾರ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವುದು, ಸೆಕ್ಷನ್ 5ರ ಪ್ರಕಾರ ತಂಬಾಕು ಉತ್ಪನ್ನಗಳ ನೇರ ಹಾಗೂ ಪರೋಕ್ಷ ಜಾಹೀರಾತು ಉತ್ತೇಜನ, ಸೆಕ್ಷನ್ 6ಎ ಪ್ರಕಾರ ತಂಬಾಕು ಉತ್ಪನ್ನಗಳು ಆಪ್ರಾಪ್ತರಿಗೆ (18 ವರ್ಷದೊಳಗಿನ ಮಕ್ಕಳು) ನೀಡುವುದು ಅಥವಾ ಮಾರುವುದು, ಸೆಕ್ಷನ್ 6ಬಿ ಪ್ರಕಾರ ಶೈಕ್ಷಣಿಕ ಸಂಸ್ಥೆಗಳ 100 ಗಜದೊಳಗೆ ಉತ್ಪನ್ನಗಳ ಮಾರಾಟ, ಸೆಕ್ಷನ್ 7ರ ಪ್ರಕಾರ ತಂಬಾಕು ಉತ್ಪನ್ನಗಳ ಮೇಲೆ 87% ರಷ್ಟು ನಿರ್ದಿಷ್ಟ ಆರೋಗ್ಯ ಎಚ್ಚರಿಕೆ ಸಂದೇಶಗಳಿಲ್ಲದೇ ಮಾರಾಟ ಮಾಡುವುದು ನಿಷೇಧ ಮಾಡಲಾಗಿದೆ ಎಂದು ವಿವರಿಸಿದರು.

ವೃತ ನಿರೀಕ್ಷಕ ಸುರೇಶ್ ಸಗರಿ ಮಾತನಾಡಿ, ಬೀಡಿ-ಸಿಗರೇಟ್ ಆರೋಗ್ಯಕ್ಕೆ ಹಾನಿಕರ. ಅದೇ ರೀತಿ, ಮದ್ಯಪಾನ ಮಾಡಿ, ವಾಹನಗಳನ್ನು ಸಂಚಾರ ಮಾಡಬೇಡಿ. ನಗರ ಪ್ರದೇಶಗಳಲ್ಲಿ ಚಿಕ್ಕಚಿಕ್ಕ ರಸ್ತೆಗಳು, ವಾಹನಗಳ ದಟ್ಟಣೆ ಇರುವುದರಿಂದ ವಾಹನಗಳನ್ನು 22ರಿಂದ 30ರ ವೇಗದಲ್ಲಿ ವಾಹನಗಳನ್ನು ಚಲಾಯಿಸಬೇಕು. ವಾಹನ ಚಾಲನಾ ಪರವಾನಗಿ, ವಿಮೆ ಇನ್ನಿತರೆ ದಾಖಲೆಗಳಿಲ್ಲದೇ ಮಕ್ಕಳು ವಾಹನ ಚಲಾಯಿಸಬೇಡಿ. ಅಪ್ರಾಪ್ತರು ವಾಹನ ಚಲಾಯಿಸಿ, ಅಕಸ್ಮಾತ್ ಯಾರಿಗಾದರೂ ಡಿಕ್ಕಿ ಹೊಡೆದು, ಅವರು ಅಂಗವಿಕಲರಾದರೆ ಅಥವಾ ಮೃತಪಟ್ಟರೆ ಆ ವಾಹನ ಮಾಲೀಕರೇ ಲಕ್ಷಾಂತರ ರು. ದಂಡ ಕಟ್ಟುವ ಜೊತೆಗೆ ಜೈಲುವಾಸ ಅನುಭವಿಸಬೇಕಾದ ಸಂಭವ ಉಂಟಾಗಬಹುದು ಎಂದು ಎಚ್ಚರಿಸಿದರು.

ತಾಲೂಕು ಆರೋಗ್ಯ ಅಧಿಕಾರಿ ಡಾಕ್ಟರ್ ಅಬ್ದುಲ್ ಖಾದರ್ ಮಾತನಾಡಿ, ತಂಬಾಕು ಸೇವಿಸುವುದರಿಂದ ತುಟಿ ಕ್ಯಾನ್ಸರ್. ಅಂಗಳ ಕ್ಯಾನ್ಸರ್. ಗಂಟಲು ಕ್ಯಾನ್ಸರ್, ಶ್ವಾಸಕೋಶದ ಕ್ಯಾನ್ಸರ್‌ ಸೇರಿದಂತೆ ಹೃದಯ ಸಂಬಂಧಿ ರೋಗಗಳು ಸಹ ಬರುವ ಸಾಧ್ಯತೆ ಇರುತ್ತದೆ. ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿರಲಿ ಎಂದರು.

ಪ್ರಾಂಶುಪಾಲೆ ಪುಷ್ಪಲತಾ. ತಾಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಉಮ್ಮಣ್ಣ, ತಾಲೂಕು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ನಾಗರಾಜ್. ದೈಹಿಕ ಶಿಕ್ಷಕ ಮಂಜುನಾಥ್, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

- - - -08ಎಚ್‍ಆರ್‍ಆರ್4, 4ಎ:

ಹರಿಹರದ ಸೆಂಟ್ ಅಲೋಸಿಸ್ ಪಿಯು ಕಾಲೇಜಿನಲ್ಲಿ ತಂಬಾಕುಮುಕ್ತ ಯುವ ಅಭಿಯಾನ 2.0 ಕಾರ್ಯಕ್ರಮ ನಡೆಯಿತು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ