ಕನ್ನಡಪ್ರಭ ವಾರ್ತೆ ವಿಜಯಪುರ:
ಅಭಿಯಾನದ ಕಾರ್ಯಾಧ್ಯಕ್ಷ ಉಮೇಶ ಕಾರಜೋಳ ಮಾತನಾಡಿ, ಭಗವದ್ಗೀತೆ ಮನುಷ್ಯನಿಗೆ ನೈತಿಕತೆ ಬೋಧಿಸುವ ದಿವ್ಯ ಗ್ರಂಥವಾಗಿದ್ದು, ಗೀತಾ ಸಾರವನ್ನು ತಿಳಿದುಕೊಂಡು ಬದುಕಿದರೆ ಇಡೀ ಬದುಕೇ ಧನ್ಯವಾಗುತ್ತದೆ. ಯುದ್ಧಭೂಮಿಯಲ್ಲಿ ಅರ್ಜುನ ಶಸ್ತ್ರಾಸ್ತ್ರ ಕೆಳಗಿಟ್ಟ ಸಂದರ್ಭದಲ್ಲಿ ಅಸತ್ಯದ ವಿರುದ್ಧ ಸತ್ಯದ ಜಯಕ್ಕಾಗಿ ಈ ಹೋರಾಟ ಅನಿವಾರ್ಯ ಎಂದು ವಿವರಿಸುವ ಸಂದರ್ಭದಲ್ಲಿ ಭಗವಾನ ಶ್ರೀ ಕೃಷ್ಣ ಭಗವದ್ಗೀತೆಯನ್ನು ಬೋಧಿಸುತ್ತಾರೆ. ಇಡೀ ಬದುಕಿನ ನಿಜಾರ್ಥವೇ ಭಗವದ್ಗೀತೆಯಲ್ಲಿ ಅಡಗಿದ್ದು, ಮಕ್ಕಳು ಬಾಲ್ಯದಲ್ಲಿಯೇ ಭಗವದ್ಗೀತೆಯ ತತ್ವಗಳನ್ನು ಅಳವಡಿಸಿಕೊಳ್ಳಲು ನೆರವಾಗಲು ಈ ಅಭಿಯಾನ ಸಂಘಟಿಸಲಾಗುತ್ತಿದೆ. ಮಕ್ಕಳು ಭಗವದ್ಗೀತೆಯನ್ನು ಓದುವ ಪರಿಪಾಠ ಅದರಲ್ಲಿರುವ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಸುಂದರ ಜೀವನ ಹಾಗೂ ಭವಿಷ್ಯ ರೂಪಿಸಿಕೊಳ್ಳಬೇಕಿದೆ ಎಂದು ಕಿವಿಮಾತು ಹೇಳಿದರು.ಈ ವೇಳೆ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಪ್ರಧಾನ ಆಯುಕ್ತ ಸಿದ್ಧಣ್ಣ ಸಕ್ರಿ, ಸಹಜಾನಂದ ದಂದರಗಿ, ಜಿಲ್ಲಾ ಯುವ ಪರಿಷತ್ ಜಿಲ್ಲಾಧ್ಯಕ್ಷ ಶರಣು ಸಬರದ, ರಾಜೇಶ್ವರಿ ಮೋಪಗಾರ, ಪರಶುರಾಮ ಕುಂಬಾರ, ಎಸ್.ಎಸ್.ಬೊಮ್ಮನಹಳ್ಳಿ, ವಿದ್ಯಾವತಿ ಅಂಕಲಗಿ, ರಾಜಶೇಖರ ಖೇಡಗಿ, ವಿನೋದ ಮಣೂರ, ವಿರೇಶ ಗೊಬ್ಬೂರ ಹಾಗೂ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.