ಜಿಲ್ಲಾ ಪೊಲೀಸರ ಫೇಸ್‌ಬುಕ್‌ ಪೋಸ್ಟ್‌ಗೂ ಕ್ಯಾರೆ ಎನ್ನದ ಗುಂಡ್ಲುಪೇಟೆ ಟಿಪ್ಪರ್‌ಗಳು!

KannadaprabhaNewsNetwork | Updated : Nov 09 2024, 10:27 AM IST

ಸಾರಾಂಶ

ಗುಂಡ್ಲುಪೇಟೆಯ ಟಿಪ್ಪರ್‌ಗಳಲ್ಲಿ ಓವರ್ ಲೋಡ್ ಎಂ.ಸ್ಯಾಂಡ್ ಸಾಗಾಣಿಕೆ ವಿಚಾರ ಪತ್ರಿಕೆಗಳಲ್ಲಿ ಬಂದ ವರದಿಗೆ ಎಚ್ಚೆತ್ತ ಜಿಲ್ಲಾ ಪೊಲೀಸರು ತಮ್ಮ ಫೇಸ್‌ಬುಕ್‌ನಲ್ಲಿ ಓವರ್ ಲೋಡ್ ತುಂಬಬೇಡಿ ಇದರಿಂದ ಅಪಘಾತ ಮತ್ತು ಅನಾಹುತ ಸಾಧ್ಯತೆಯಿದೆ ಎಂದು ಪೋಸ್ಟ್‌ ಮಾಡಿದ್ದಾರೆ.

 ಗುಂಡ್ಲುಪೇಟೆ : ಪಟ್ಟಣದ ಮೂಲಕ ಟಿಪ್ಪರ್‌ಗಳಲ್ಲಿ ಓವರ್ ಲೋಡ್ ಎಂ.ಸ್ಯಾಂಡ್ ಸಾಗಾಣಿಕೆ ವಿಚಾರ ಪತ್ರಿಕೆಗಳಲ್ಲಿ ಬಂದ ವರದಿಗೆ ಎಚ್ಚೆತ್ತ ಜಿಲ್ಲಾ ಪೊಲೀಸರು ತಮ್ಮ ಫೇಸ್‌ಬುಕ್‌ನಲ್ಲಿ ಓವರ್ ಲೋಡ್ ತುಂಬಬೇಡಿ ಇದರಿಂದ ಅಪಘಾತ ಮತ್ತು ಅನಾಹುತ ಸಾಧ್ಯತೆಯಿದೆ ಎಚ್ಚರ ಎಂದು ಹೇಳಿತ್ತು. 

ಜಿಲ್ಲಾ ಪೊಲೀಸ್‌ ಫೇಸ್‌ ಬುಕ್‌ನಲ್ಲಿ ಮೇಲಿನ ಎಚ್ಚರಿಕೆ ನೀಡಿದ್ದು 2022 ರ ಜ.29 ಅಥವಾ 30 ರಲ್ಲಿ. ಪೊಲೀಸ್‌ ಈ ರೀತಿ ಎಚ್ಚರಿಕೆ ಪೋಸ್ಟ್‌ ಹಾಕಲು ಕಾರಣ ತಾಲೂಕಿನಾದ್ಯಂತ ಕ್ರಷರ್‌ಗಳಿಂದ ಟಿಪ್ಪರ್‌ಗಳಲ್ಲಿ ಎಂ.ಸ್ಯಾಂಡ್‌, ಜಲ್ಲಿ ಓವರ್ ಲೋಡ್ ತೆರಳುತ್ತಿವೆ. ಆದರೂ ಪೊಲೀಸರು ಕ್ರಮ ವಹಿಸುತ್ತಿಲ್ಲ ಎಂದು 2022ರ ಜನವರಿ ತಿಂಗಳ ಕೊನೆಯಲ್ಲಿ ಕನ್ನಡಪ್ರಭ ವರದಿ ಪ್ರಕಟಿಸಿ ಗಮನ ಸೆಳೆದಿತ್ತು.

ಪತ್ರಿಕೆಯಲ್ಲಿ ಬಂದ ವರದಿ ಕಾರಣವೋ ಅಥವಾ ಜಿಲ್ಲಾ ಪೊಲೀಸ್ ನೂತನ ವರಿಷ್ಠಾಧಿಕಾರಿ ಟಿ.ಪಿ.ಶಿವಕುಮಾರ್ ಸೂಚನೆಯೋ ಪೊಲೀಸ್ ಇಲಾಖೆಯ ಅಧಿಕೃತ ಫೇಸ್‌ಬುಕ್‌ನಲ್ಲಿ ಟಿಪ್ಪರ್ ಹಾಗೂ ಇತರೆ ಗೂಡ್ಸ್ ವಾಹನಗಳಲ್ಲಿ ಅತಿಯಾದ ಭಾರ (ಓವರ್ ಲೋಡ್) ತುಂಬಬೇಡಿ ಇದರಿಂದ ಅಪಘಾತ ಮತ್ತು ಅನಾಹುತಗಳಾಗುವ ಸಾಧ್ಯತೆ ಇರುತ್ತದೆ ಎಚ್ಚರವಿರಲಿ ಎಂದು ಚಾಮರಾಜನಗರ ಜಿಲ್ಲಾ ಪೊಲೀಸ್ ಸೂಚನೆ ನೀಡಿತ್ತು.

ನಿಲ್ಲದ ಓವರ್ ಲೋಡ್: ಜಿಲ್ಲಾ ಪೊಲೀಸ್ ಇಲಾಖೆಯ ಅಧಿಕೃತ ಫೇಸ್‌ಬುಕ್‌ನಲ್ಲಿ ಓವರ್ ಲೋಡ್ ತುಂಬಬೇಡಿ ಎಂಬ ಎಚ್ಚರ ಎಂದು ಸೂಚನೆ ನೀಡಿದ್ದರೂ ತಾಲೂಕಿನಲ್ಲಿ ಮಾತ್ರ ಕ್ರಷರ್‌ಗಳಿಂದ ಎಂ.ಸ್ಯಾಂಡ್, ಜಲ್ಲಿ ಓವರ್ ಲೋಡ್ ತುಂಬಿದ ಟಿಪ್ಪರ್‌ಗಳ ಸಂಚಾರ ನಿಂತಿಲ್ಲ. ಗುಂಡ್ಲುಪೇಟೆ, ಗರಗನಹಳ್ಳಿ, ಹಿರೀಕಾಟಿ ಸುತ್ತ ಮುತ್ತಲಿನ ಕ್ರಷರ್‌ಗಳಲ್ಲಿ ಹಗಲು ರಾತ್ರಿ ಎನ್ನದೆ ಓವರ್ ಲೋಡ್ ಎಂ.ಸ್ಯಾಂಡ್, ಜಲ್ಲಿ ತುಂಬಿದ ಟಿಪ್ಪರ್‌ಗಳು ಪೊಲೀಸ್ ಠಾಣೆಗಳ ಮುಂದೆಯೇ ತೆರಳುತ್ತಿವೆ ಇದು ನಿಜಕ್ಕೂ ದುರಂತದ ವಿಷಯ.

ಎಸ್ಪಿ ಖಡಕ್ ಸೂಚನೆ ನೀಡುವರೇ?ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ತಾಲೂಕಿನಾದ್ಯಂತ ಇರುವ ಕ್ರಷರ್‌ಗಳಿಂದ ಎಂ.ಸ್ಯಾಂಡ್, ಜಲ್ಲಿ ಓವರ್ ಲೋಡ್ ತುಂಬಿದ ಟಿಪ್ಪರ್‌ಗಳು ಗುಂಡ್ಲುಪೇಟೆ, ಬೇಗೂರು, ತೆರಕಣಾಂಬಿ ಗ್ರಾಮದೊಳಗೆ ತೆರಳುತ್ತಿವೆ. ದುರಂತ ಎಂದರೆ ಬೇಗೂರು, ತೆರಕಣಾಂಬಿ ಠಾಣೆಯ ಮುಂದೆ ಓವರ್ ಲೋಡ್ ತುಂಬಿದ ಟಿಪ್ಪರ್‌ಗಳು ತೆರಳುತ್ತಿವೆ. ಆದರೂ ಜನರು ಅಥವಾ ಪತ್ರಿಕೆಗಳು ದೂರಿದಾಗ ಮಾತ್ರ ತಪಾಸಣೆ ಮಾಡುತ್ತಾರೆ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ಓವರ್ ಲೋಡ್ ಸಾಗಾಣಿಕೆಗೆ ಕಡಿವಾಣ ಹಾಕಲು ಸ್ಥಳೀಯ ಪೊಲೀಸರಿಗೆ ಸೂಚನೆ ನೀಡಲಿ ಎಂದು ಸಾರ್ವಜನಿಕರ ಆಗ್ರಹವಾಗಿದೆ.

Share this article