ಆರೋಗ್ಯವಂತ ಯುವಜನತೆ ದೇಶದ ಆಸ್ತಿ : ಸುನಿಲ್ ಕುಮಾರ

KannadaprabhaNewsNetwork |  
Published : Jun 02, 2024, 01:45 AM IST
ಕ್ಯಾಪ್ಷನಃ1ಕೆಡಿವಿಜಿ31ಃದಾವಣಗೆರೆಯ ಎಸ್‌ಪಿಎಸ್‌ಎಸ್ ಪಪೂ ಕಾಲೇಜಿನಲ್ಲಿ ನಡೆದ ವಿಶ್ವ ತಂಬಾಕು ರಹಿತ ದಿನಾಚರಣೆ ಕಾರ್ಯಕ್ರಮದಲ್ಲಿ ಸುನಿಲ್ ಕುಮಾರ ಉಪನ್ಯಾಸ ನೀಡಿದರು. | Kannada Prabha

ಸಾರಾಂಶ

ದಾವಣಗೆರೆಯ ಎಸ್‌ಪಿಎಸ್‌ಎಸ್ ಪಪೂ ಕಾಲೇಜಿನಲ್ಲಿ ನಡೆದ ವಿಶ್ವ ತಂಬಾಕು ರಹಿತ ದಿನಾಚರಣೆ ಕಾರ್ಯಕ್ರಮದಲ್ಲಿ ಸುನಿಲ್ ಕುಮಾರ ಉಪನ್ಯಾಸ ನೀಡಿದರು.

ಕನ್ನಡಪ್ರಭ ವಾರ್ತೆ, ದಾವಣಗೆರೆ, ಜೂ. 1, ವಿಶ್ವ ಆರೋಗ್ಯ ಸಂಸ್ಥೆಯ ಘೋಷವಾಕ್ಯ "ತೊರೆಯಲು ಸಿದ್ಧರಾಗಿ " ಎನ್ನುವ ಸಲಹಾತ್ಮಕ ಸೂಚನೆಯನ್ವಯ ಮೇ 31ನೇ ದಿನಾಂಕವನ್ನು ವಿಶ್ವ ತಂಬಾಕು ರಹಿತ ದಿನವನ್ನಾಗಿ ಆಚರಿಸಲಾಗುತ್ತದೆ. ತಂಬಾಕಿನ ಕೆಡುಕಿನ ಬಗ್ಗೆ ತೀವ್ರ ತರವಾದ ಜಾಗೃತಿ ಮೂಡಿಸುವ ಕಾರ್ಯ ಇಂದು ತುರ್ತು ಅಗತ್ಯವಾಗಿದೆ ಎಂದು ನಿಮ್ಹಾನ್ಸ್ ನ ಬ್ರೇನ್ ಹೆಲ್ತ್ ಕ್ಲಿನಿಕ್‌ನ ಜಿಲ್ಲಾ ಸಂಯೋಜಕ ಸುನಿಲ್ ಕುಮಾರ್ ತಿಳಿಸಿದರು. ಅವರಿಂದು ದಾವಣಗೆರೆ ನಗರದ ಶ್ರೀಮತಿ ಶಾಮನೂರು ಪಾರ್ವತಮ್ಮ ಶಿವಶಂಕರಪ್ಪ ವಿಜ್ಞಾನ ಪಪೂ ಕಾಲೇಜಿನಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಮತ್ತು ಜಿಲ್ಲಾ ಬಾಲಭವನ ಸಮಿತಿ ಸಂಯುಕ್ತವಾಗಿ ಆಯೋಜಿಸಿದ್ದ ವಾರಂತ್ಯ ಚಟುವಟಿಕೆ ಕಾರ್ಯಕ್ರಮದಲ್ಲಿ ಶ್ರೀಮತಿ ಶಾಮನೂರು ಪಾರ್ವತಮ್ಮ ಶಿವಶಂಕರಪ್ಪ ವಿಜ್ಞಾನ ಪಪೂ ಕಾಲೇಜಿನಲ್ಲಿ ನೀಡಿದರು. ಕೆಡುಕಿಗೆ ಆಕರ್ಷಣೆ ಹೆಚ್ಚು. ಬೀಡಿ, ಸಿಗರೇಟ್ ಸೇರಿದಂತೆ ತಂಬಾಕಿನ ಬೇರೆ ಬೇರೆ ರೂಪಗಳಲ್ಲಿ ಸೇವಿಸುವುದು ಆರೋಗ್ಯಕ್ಕೆ ಹಾನಿಕರ. ಇದರಿಂದ ಸಾರ್ವಜನಿಕ ಆರೋಗ್ಯದ ಮೇಲೆ ದೊಡ್ಡ ಪರಿಣಾಮ ಬೀರುತ್ತಿದೆ. ಕೇವಲ ಜೀವನ ನಷ್ಟವಲ್ಲ. ಆರ್ಥಿಕ ನಷ್ಟವನ್ನು ತರುತ್ತದೆ. ವಿಶೇಷವಾಗಿ ದೇಶದೆಲ್ಲೆಡೆ ಯುವಜನರು ಬಲಿಯಾಗುತ್ತಿರುವುದು ದುರದೃಷ್ಟಕವಾಗಿದೆ. "ಆರೋಗ್ಯವಂತ ಯುವ ಜನತೆ ದೇಶದ ಆಸ್ತಿ " ಅವರನ್ನು ಸನ್ಮಾರ್ಗದತ್ತ ಕೊಂಡೊಯ್ಯುವ ಜವಾಬ್ದಾರಿ ಸಮಾಜದ ಮೇಲಿದೆ ಎಂದರು.ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾ ಕಾರ್ಯದರ್ಶಿ ಎಂ.ಗುರುಸಿದ್ಧಸ್ವಾಮಿ ಮಾತನಾಡಿ, ತಂಬಾಕು ಉತ್ಪದನಾ ಕಂಪನಿಗಳು ಸಾಮಾಜಿಕ ಜಾಲತಾಣ ಪ್ಲಾಟ್ ಫಾರಂಗಳ ಮೂಲಕ ಮಕ್ಕಳು ಮತ್ತು ಹದಿಹರೆಯದವರನ್ನು ಸೆಳೆಯಲು ಪ್ರಯತ್ನಿಸುತ್ತಿದೆ. ಸಿನಿಮಾ ತಾರೆಯರ ಮೂಲಕ ಯುವಜನರನ್ನು ಆಕರ್ಷಿಸುವ ಹುನ್ನಾರ ನಿರಂತರವಾಗಿ ನಡೆಯುತ್ತದೆ. ಇದರಿಂದ ಉದ್ದಿಮೆದಾರರಿಗೆ ಲಾಭಗಳಿಸುತ್ತಾರೆ. ಬಳಕೆದಾರರು ರೋಗಗಳಿಗೆ ತುತ್ತಾಗಿ ಆರ್ಥಿಕ ಸಂಕಷ್ಟಕ್ಕೆ ಒಳಗಾಗುತ್ತಾರೆ. ಆದ್ದರಿಂದ ವಿದ್ಯಾರ್ಥಿ-ಯುವಜನರು ತಂಬಾಕು ಉತ್ಪನ್ನಗಳಿಂದ ದೂರವಿರಲು ಮನವಿ ಮಾಡಿದರು.ಕಾಲೇಜಿನ ಪ್ರಾಚಾರ್ಯ ಪ್ರೋ.ಎಂ.ಪಿ. ರುದ್ರಪ್ಪ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ, ತಂಬಾಕು ಒಂದು ಮಾದಕ ವಸ್ತು. ಇಂತಹ ವಸ್ತುಗಳನ್ನು ಮಕ್ಕಳಿಂದ ತರಿಸಿಕೊಳ್ಳುವುದನ್ನು ಮೊದಲು ಬಿಡಬೇಕು. ತಂಬಾಕು ಉತ್ಪನ್ನಗಳನ್ನು ಸರ್ಕಾರ ನಿಷೇಧಿಸಬೇಕು ಹಾಗೆಯೇ ಸಾರ್ವಜನಿಕರು ಆರೋಗ್ಯ ದೃಷ್ಠಿಯಿಂದ ಧೂಮಪಾನ ಮಾಡುವುದಿಲ್ಲವೆಂದು ಶಪಥ ಮಾಡಬೇಕೆಂದು ತಿಳಿಸಿದರು.ವಿದ್ಯಾರ್ಥಿ ಆರ್.ದರ್ಶನ್ ಪ್ರಾರ್ಥಿಸಿದರೆ, ಉಪನ್ಯಾಸಕ ಕೆ.ಸಿ. ವಿಜಯಕುಮಾರ್ ಸ್ವಾಗತಿಸಿದರು. ಜಿಲ್ಲಾ ಬಾಲಭವನ ಕಾರ್ಯಕ್ರಮ ಸಂಯೋಜಕಿ ಎಸ್.ಬಿ.ಶಿಲ್ಪ ಕಾರ್ಯಕ್ರಮ ನಿರೂಪಿಸಿದರೆ, ವಿಜಯಕುಮಾರ ವಂದಿಸಿದರು.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ