ಸಿಎಂ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯ್ಲಲಿ ಮಹಿಳೆಯರ ಆಗಮನ

KannadaprabhaNewsNetwork | Published : Feb 2, 2024 1:01 AM

ಸಾರಾಂಶ

ಮುದ್ದೇಬಿಹಾಳ ಪಟ್ಟಣಕ್ಕೆ ಶುಕ್ರವಾರರಂದು ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ ಮತ್ತು ಶಂಕು ಸ್ಥಾಪನೆ ಅಲ್ಲದೇ ಕೆಲವು ಕಟ್ಟಡಗಳ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಆಗಮಿಸುತ್ತಿರುವ ಸಿಎಂ ಸಿದ್ದರಾಮಯ್ಯನವರ ಕಾರ್ಯಕ್ರಮಕ್ಕೆ ಅತೀ ಹೆಚ್ಚು ಮಹಿಳೆಯರೇ ಆಗಮಿಸಲಿದ್ದಾರೆ ಎಂದು ಮತಕ್ಷೇತ್ರದ ಶಾಸಕ ಮತ್ತು ಕರ್ನಾಟಕ ಸೋಪ್ಸ್ ಮತ್ತು ಡಿಟರ್ಜೆಂಟ್ ನಿಗಮ ಮಂಡಳಿ ಅಧ್ಯಕ್ಷ ಸಿ.ಎಸ್.ನಾಡಗೌಡ(ಅಪ್ಪಾಜಿ) ಹೇಳಿದರು.

ಕನ್ನಡಪ್ರಭ ವಾರ್ತೆ ತಾಳಿಕೋಟೆ

ಮುದ್ದೇಬಿಹಾಳ ಪಟ್ಟಣಕ್ಕೆ ಶುಕ್ರವಾರರಂದು ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ ಮತ್ತು ಶಂಕು ಸ್ಥಾಪನೆ ಅಲ್ಲದೇ ಕೆಲವು ಕಟ್ಟಡಗಳ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಆಗಮಿಸುತ್ತಿರುವ ಸಿಎಂ ಸಿದ್ದರಾಮಯ್ಯನವರ ಕಾರ್ಯಕ್ರಮಕ್ಕೆ ಅತೀ ಹೆಚ್ಚು ಮಹಿಳೆಯರೇ ಆಗಮಿಸಲಿದ್ದಾರೆ ಎಂದು ಮತಕ್ಷೇತ್ರದ ಶಾಸಕ ಮತ್ತು ಕರ್ನಾಟಕ ಸೋಪ್ಸ್ ಮತ್ತು ಡಿಟರ್ಜೆಂಟ್ ನಿಗಮ ಮಂಡಳಿ ಅಧ್ಯಕ್ಷ ಸಿ.ಎಸ್.ನಾಡಗೌಡ(ಅಪ್ಪಾಜಿ) ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರ ಪುರಸಭಾ ಸದಸ್ಯರ, ಅಧಿಕಾರಿಗಳ ಮತ್ತು ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ನಾಡಿನ ದೊರೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು 2ನೇ ಬಾರಿಗೆ ಮತಕ್ಷೇತ್ರಕ್ಕೆ ಆಗಮಿಸುತ್ತಿದ್ದಾರೆ. ಸರ್ಕಾರದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಜೊತೆಗೆ ಕೆಲವು ಖಾಸಗಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಮುಖ್ಯವಾಗಿ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಬಗ್ಗೆ ಮಹಿಳೆಯರಿಗೆ ಮನವರಿಕೆ ಮಾಡಲಿದ್ದಾರೆ. ಈ ಹಿಂದೆಯೂ ಕೂಡಾ ಮುಖ್ಯಮಂತ್ರಿಗಳಾಗಿದ್ದ ಸಮಯದಲ್ಲಿ ಕ್ಷೇತ್ರಕ್ಕೆ ಸಾಕಷ್ಟು ಅನುದಾನ ನೀಡಿದ್ದಾರೆ ಎಂದರು.

ಮುಖ್ಯಮಂತ್ರಿಗಳ ಕಾರ್ಯಕ್ರಮಕ್ಕೆ ಮತಕ್ಷೇತ್ರದ ಎಲ್ಲ ಭಾಗಗಳಿಗೂ ವಾಹನದ ಸೌಲಭ್ಯವನ್ನು ಒದಗಿಸಲಾಗಿದೆ. ಮಹಿಳೆಯರಿಗೆ ಬಸ್ ಒದಗಿಸುವಂತಹ ಕೆಲಸ ಮಾಡಲಾಗಿದೆ. ಮುದ್ದೇಬಿಹಾಳ ಮತಕ್ಷೇತ್ರದಲ್ಲಿ 2 ತಾಲೂಕುಗಳು ಒಳಪಡುತ್ತಿರುವುದರಿಂದ ತಾಳಿಕೋಟೆ ತಾಲೂಕಿನಿಂದಲೂ ಜನರು ಆಗಮಿಸಲು ವಾಹನಗಳ ವ್ಯವಸ್ಥೆ ಮಾಡಲಾಗಿದೆ. ತಾಳಿಕೋಟೆ ತಾಲೂಕಿಗೆ ಸುಮಾರು ೧೦೦ಕ್ಕೂ ಅಧಿಕ ವಾಹನಗಳನ್ನು ಒದಗಿಸಲಾಗಿದೆ. ನಾಲತವಾಡ ಪಟ್ಟಣಕ್ಕೆ ಪ್ರತ್ಯೇಕ ೪೦ ವಾಹನಗಳನ್ನು ಒದಗಿಸಲಾಗಿದೆ. ಅದರಂತೆ ತಾಳಿಕೋಟೆ ಪಟ್ಟಣಕ್ಕೂ ಕೂಡಾ ೪೦ ವಾಹನಗಳು ಪ್ರತಿ ಗ್ರಾಮಗಳಿಗೂ ಕನಿಷ್ಠ ೩ ರಿಂದ ೪ ವಾಹನಗಳನ್ನು ಒದಗಿಸಲಾಗಿದೆ ಎಂದು ತಿಳಿಸಿದರು.

ತಾಳಿಕೋಟೆ ಪುರಸಭೆಯಿಂದ ಮತ್ತು ಮುದ್ದೇಬಿಹಾಳ ಪುರಸಭೆಯಿಂದ ಪೌರ ಸನ್ಮಾನ ಮಾಡಲು ತೀರ್ಮಾನಿಸಲಾಗಿದೆ. ಪುರಸಭಾ ಸದಸ್ಯರುಗಳು ಮತ್ತು ಅಧಿಕಾರಿಗಳು ಭಾಗವಹಿಸಿ ನಾಡಿನ ದೊರೆಗೆ ಅಭಿನಂದಿಸಲಿದ್ದಾರೆ ಎಂದರು.

ಈ ಕಾರ್ಯಕ್ರಮದ ಯಶಸ್ವಿಗೆ ಸಂಬಂಧಿಸಿ ಕನಿಷ್ಠ ೨೦ ಸಾವಿರ ಜನರಿಗೆ ಆಸನಗಳ ವ್ಯವಸ್ಥೆ ಮತ್ತು ೩೦ ರಿಂದ ೩೫ ಸಾವಿರ ಜನರಿಗೆ ಆಗುವಷ್ಟು ಊಟದ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡಲು ಸಿದ್ಧತೆ ಕೈಗೊಳ್ಳಲಾಗಿದೆ ಎಂದರು.

ತಾಳಿಕೋಟೆ ಹೊಸ ತಾಲೂಕು ಆಗಿರುವುದರಿಂದ ಹೊಸ ಕಚೇರಿಗಳ ಮಂಜೂರಾತಿ ಒಳಗೊಂಡಂತೆ ಹೊಸ ಕಟ್ಟಡಗಳ ನಿರ್ಮಾಣ ಮತ್ತು ಮಿನಿ ವಿಧಾನ ಸೌಧ ಕಟ್ಟಡಕ್ಕೆ ಮುಖ್ಯಮಂತ್ರಿಗಳಿಗೆ ಪ್ರಸ್ಥಾವನೆ ಸಲ್ಲಿಸಿದ್ದೇನೆ. ಮುಂದಿನ ದಿನಗಳಲ್ಲಿ ಕಂಡಿತವಾಗಿ ಮಾಡಿ ಕೊಡಲಿದ್ದಾರೆ. ಈ ತಾಲೂಕಿಗೆ ದೇವರಹಿಪ್ಪರಗಿ ಮತಕ್ಷೇತ್ರದ ೩೦ಕ್ಕೂ ಹೆಚ್ಚು ಗ್ರಾಮಗಳು ಒಳಪಡುತ್ತಿರುವುದರಿಂದ ಅಲ್ಲಿಯ ಜನರೂ ಕೂಡಾ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಅನುಕೂಲ ಕಲ್ಪಿಸಲು ಪ್ರತಿ ಗ್ರಾಮಗಳಿಗೆ ವಾಹನದ ಸೌಲಭ್ಯವನ್ನು ಒದಗಿಸಲಾಗಿದೆ. ಕಾರಣ ಎಲ್ಲ ಕಾರ್ಯಕರ್ತರು ಮತ್ತು ಮಹಿಳೆಯರು ಯಾವುದೇ ಪಕ್ಷ ಭೇದವೆನ್ನದೇ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದರೊಂದಿಗೆ ಯಶಸ್ವಿಗೆ ಸಹಕರಿಸಬೇಕು ಎಂದು ಕೋರಿದರು.

ಇದೇ ಸಮಯದಲ್ಲಿ ಕರ್ನಾಟಕ ಸೋಪ್ಸ್ ಮತ್ತು ಡಿಟರ್ಜೆಂಟ್ ನಿಗಮ ಮಂಡಳಿಯ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡು ಪ್ರಥಮ ಬಾರಿಗೆ ಪಟ್ಟಣಕ್ಕೆ ಆಗಮಿಸಿದ ಶಾಸಕ ನಾಡಗೌಡ ಅವರಿಗೆ ಪುರಸಭಾ ಸದಸ್ಯರುಗಳು ಹಾಗೂ ಅಧಿಕಾರಿಗಳು ಮತ್ತು ವಿವಿಧ ಸಂಘಟಿಕರು ಸನ್ಮಾನಿಸಿ, ಗೌರವಿಸಿದರು.

ಈ ಸಮಯದಲ್ಲಿ ಮುಖಂಡರುಗಳಾದ ಸುರೇಶ ನಾಡಗೌಡ(ಬಿಂಜಲಭಾವಿ), ಶರಣುಧನಿ ದೇಶಮುಖ, ಪ್ರಭುಗೌಡ ಮದರಕಲ್ಲ, ವಿ.ಸಿ.ಹಿರೇಮಠ(ಹಂಪಿಮುತ್ಯಾ), ಸಿದ್ದನಗೌಡ ಪಾಟೀಲ(ನಾವದಗಿ), ಬಸನಗೌಡ ಜೈನಾಪೂರ, ಬ್ಲಾಕ್ ಕಾಂಗ್ರೆಸ್‌ ಅಧ್ಯಕ್ಷ ಮೈಹಿಬೂಬ್‌ ಚೋರಗಸ್ತಿ, ನೀಲಮ್ಮ ಪಾಟೀಲ, ವಿಜಯಸಿಂಗ್ ಹಜೇರಿ, ಪುರಸಭಾ ಸದಸ್ಯರುಗಳಾದ ಅಣ್ಣಾಜಿ ಜಗತಾಪ, ಅಕ್ಕಮಹಾದೇವಿ ಕಟ್ಟಿಮನಿ, ಮಲ್ಲಿಕಾರ್ಜುನ ಪಟ್ಟಣಶೆಟ್ಟಿ, ಡಿ.ವಿ.ಪಾಟೀಲ, ಮುಸ್ತಫಾ ಚೌದ್ರಿ ಹಾಗೂ ಶಾಂತಗೌಡ ಕೇಸರಭಾವಿ, ಸಂಗನಗೌಡ ಅಸ್ಕಿ, ಮಂಜೂರ ಬೇಪಾರಿ, ಇಬ್ರಾಹಿಂ ಮನ್ಸೂರ, ಫಯಾಜ ಉತ್ನಾಳ, ಸಚಿನ ಪಾಟೀಲ, ಶಂಕರಗೌಡ ಅಸ್ಕಿ, ಪುರಸಭಾ ಮುಖ್ಯಾಧಿಕಾರಿ ಮೋಹನ್ ಜಾಧವ ಹಾಗೂ ಅಧಿಕಾರಿ ವೃಂದದವರು ಮೊದಲಾದವರು ಉಪಸ್ಥಿತರಿದ್ದರು.ಮತಕ್ಷೇತ್ರದ ೬೦ ಸಾವಿರ ಜನ ಮಹಿಳೆಯರು ಗ್ಯಾರೆಂಟಿಗೆ ಸಂಬಂಧಿಸಿ ₹೨ ಸಾವಿರ ಮತ್ತು ೮೦ ಸಾವಿರ ಕುಟುಂಬಗಳಿಗೆ ಉಚಿತ ವಿದ್ಯುತ್ ಮತ್ತು ಪ್ರತಿ ತಿಂಗಳು ೭ ಲಕ್ಷ ಮಹಿಳೆಯರು ಕ್ಷೇತ್ರದಿಂದ ಬಸ್ ಸಂಚಾರದ ಸೌಲಭ್ಯಗಳನ್ನು ಪಡೆದುಕೊಂಡಿದ್ದಾರೆ. ಹೀಗಾಗಿ ಈ ಕಾರ್ಯಕ್ರಮದಲ್ಲಿ ಮುಖ್ಯವಾಗಿ ಗ್ಯಾರೆಂಟಿಯ ಬಗ್ಗೆ ಜನರಿಗೆ ಮುಟ್ಟಿದ್ದರ ಬಗ್ಗೆ ಮುಖ್ಯಮಂತ್ರಿಗಳು ವಿಸ್ತಾರವಾಗಿ ವಿವರಿಸುತ್ತಿರುವುದರಿಂದ ಈ ಕಾರ್ಯಕ್ರಮಕ್ಕೆ ಕಾರ್ಯಕರ್ತರ ಜೊತೆಗೆ ಮಹಿಳೆಯರಿಗೂ ಕೂಡಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಪ್ರಾಧ್ಯಾನ್ಯತೆ ನೀಡಲಾಗಿದೆ.

- ಸಿ.ಎಸ್.ನಾಡಗೌಡ(ಅಪ್ಪಾಜಿ), ಶಾಸಕ ಮತ್ತು ಕರ್ನಾಟಕ ಸೋಪ್ಸ್ ಮತ್ತು ಡಿಟರ್ಜೆಂಟ್ ನಿಗಮ ಮಂಡಳಿ ಅಧ್ಯಕ್ಷರು.

Share this article