ಕನ್ನಡಪ್ರಭ ವಾರ್ತೆ ಧಾರವಾಡ
ಎರಡು ದಿನಗಳ ಹಿಂದಷ್ಟೇ ಕವಿವಿ ಹಿಂಬದಿ ಪ್ರದೇಶದಲ್ಲಿ ಕಾಣಿಸಿಕೊಂಡಿದೆ ಎಂಬ ಸುದ್ದಿ ಇತ್ತು. ಅರಣ್ಯ ಇಲಾಖೆ ಸಿಬ್ಬಂದಿ ಅದರ ಹುಡುಕಾಟ ಸಹ ನಡೆಸಿದ್ದರು. ಅದರ ಕುರುಹು ಸಿಕ್ಕಿರಲಿಲ್ಲ. ಆದರೆ, ಇದೀಗ ಮನಸೂರಿನ ಮಡಿವಾಳಪ್ಪ ಅಗಸರ ಎಂಬುವರು ಮನೆ ಹೊರಗೆ ಕಟ್ಟಿದ್ದ ಆಕಳ ಮೇಲೆ ನಡೆದಿರುವ ದಾಳಿಯಿಂದ ಚಿರತೆ ಇರುವುದು ಪಕ್ಕಾ ಆಗಿದೆ.
ಆಕಳು ಇದ್ದಲ್ಲೇ ಬಂದ ಚಿರತೆ, ಅಲ್ಲೇ ತಟ್ಟಲಾಗಿದ್ದ ಸಗಣಿ ಬೆರಣಿಗಳ ಮೇಲೆ ಕಾಲಿಟ್ಟಿದ್ದು, ಅದರ ಹೆಜ್ಜೆ ಗುರುತುಗಳು ಕಾಣಿಸಿಕೊಂಡಿವೆ. ರಾತ್ರಿ ಚಿರತೆ ದಾಳಿಗೊಳಗಾದ ಆಕಳು ಬೆಳಗ್ಗೆ ವರೆಗೆ ನರಳಿ ಪ್ರಾಣಬಿಟ್ಟಿದೆ. ಸ್ಥಳಕ್ಕೆ ದೌಡಾಯಿಸಿರುವ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆ ಇರುವುದನ್ನು ಖಚಿತಪಡಿಸಿ ಅದನ್ನು ಸೆರೆ ಹಿಡಿಯುವುದಕ್ಕಾಗಿ ಪ್ರಯತ್ನ ನಡೆಸಿದ್ದಾರೆ.ಸುತ್ತಲಿನ ಗ್ರಾಮಗಳ ರೈತರಿಗೆ ಎಚ್ಚರಿಕೆಯಿಂದ ಇರುವಂತೆಯೂ ಹಾಗೂ ಚಿರತೆ ಸೆರೆ ಹಿಡಿಯುವುದಕ್ಕೆ ಸಹಕಾರ ನೀಡುವಂತೆಯೂ ಮನವಿ ಮಾಡಿಕೊಂಡಿದ್ದಾರೆ. ಸದ್ಯ ಸ್ಥಳದಲ್ಲೇ ಬೀಡು ಬಿಟ್ಟಿರುವ ಅರಣ್ಯ ಇಲಾಖೆ ಸಿಬ್ಬಂದಿ, ಚಿರತೆ ಸೆರೆ ಹಿಡಿಯುವುದಕ್ಕಾಗಿ ಬೋನು ಸೇರಿದಂತೆ ಎಲ್ಲ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.