ಕನ್ನಡಪ್ರಭ ವಾರ್ತೆ ಮಂಡ್ಯ
ಯುದ್ಧೋನ್ಮಾದ ಸ್ಥಿತಿ ವಿಶ್ವದಲ್ಲಿ ನೆಲೆಸಿರುವ ಪಸ್ತುತ ಸನ್ನಿವೇಶದಲ್ಲಿ ಶಾಂತಿ ಸ್ಥಾಪನೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡುವುದು ಅಗತ್ಯವಾಗಿದೆ ಎಂದು ಖ್ಯಾತ ವೈದ್ಯ ಡಾ.ಅನಿಲ್ ಆನಂದ್ ಹೇಳಿದರು.ನಗರದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯದಲ್ಲಿ ಸಂಸ್ಥೆಯ ಲೋಗೋ ಬಿಡುಗಡೆ ಮಾಡಿ ಹಾಗೂ ಮಹಾ ಶಿವರಾತ್ರಿ ಮಹೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಶಾಂತಿಯು ಹಿಂಸೆ, ಸಂಘರ್ಷ ಮತ್ತು ಹಗೆತನವಿಲ್ಲದ ಸಾಮರಸ್ಯದ ಸ್ಥಿತಿ. ಇದು ನೆಮ್ಮದಿ, ಸಾಮಾಜಿಕ ಕಲ್ಯಾಣ ಮತ್ತು ಆರ್ಥಿಕ ಸಮೃದ್ಧಿಯನ್ನು ಸೂಚಿಸುತ್ತದೆ. ಶಾಂತಿ ಎನ್ನುವುದು ಯುದ್ಧದ ಪರಿಸ್ಥಿತಿಗಷ್ಟೇ ಸೀಮಿತಗೊಳ್ಳದೆ ವ್ಯಕ್ತಿಗತ, ಸಾಮಾಜಿಕ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಮಾನತೆ ಹಾಗೂ ತೃಪ್ತಿಯನ್ನು ಒಳಗೊಂಡಿರುವ ಅಂಶವಾಗಿದೆ ಎಂದರು.
ಮನಸ್ಸಿನಲ್ಲಿರುವ ಕಲ್ಮಶಗಳನ್ನು ದೂರ ಮಾಡುವ ಮೂಲಕ ನಿಷ್ಕಲ್ಮಶ ಮನಸ್ಥಿತಿಯೊಂದಿಗೆ ನಮ್ಮನ್ನು ನಾವು ಕಂಡುಕೊಳ್ಳಬೇಕು. ಸದಾ ಒಳ್ಳೆಯದನ್ನು ಬಯಸುತ್ತಾ, ಒಳ್ಳೆಯ ಕಾರ್ಯಗಳನ್ನು ಮಾಡುವುದರೊಂದಿಗೆ, ಎಲ್ಲರೊಂದಿಗೆ ಸಹಬಾಳ್ವೆ ನಡೆಸುತ್ತಾ ಸಮಾನತೆಯನ್ನು ಸಾಧಿಸುವುದರೊಂದಿಗೆ ಸರಳ, ಉತ್ತಮ ಜೀವನ ನಡೆಸಬೇಕು. ಪ್ರತಿಯೊಬ್ಬರೂ ದ್ವೇಷ, ಅಹಂಕಾರ, ಅಸೂಯೆ, ಅಸಹನೆಯಿಂದ ದೂರ ಉಳಿದು ಉತ್ತಮ ಬದುಕನ್ನು ನಡೆಸಿದಾಗ ಸುಖೀ ಸಮಾಜ ನಿರ್ಮಾಣ ಸಾಧ್ಯವಾಗಲಿದೆ ಎಂದರು.ಕಾರ್ಯಕ್ರಮದಲ್ಲಿ ಸಂಸ್ಥೆಯ ಮುಖ್ಯಸ್ಥೆ ಶಾರದಾ, ರಾಧಾ, ವಿಜಯಲಕ್ಷ್ಮೀ, ಸರೋಜಾ, ಸುನಂದಾ ಇತರರಿದ್ದರು.ಬ್ರಾಹ್ಮಣ ಯುವ ಸೇವಾ ಟ್ರಸ್ಟ್‌ನಿಂದ
ಈಶ್ವರನಿಗೆ ಪಂಚಾಮೃತ ಅಭಿಷೇಕ
ಮಂಡ್ಯ: ನಗರದಲ್ಲಿ ಬ್ರಾಹ್ಮಣ ಯುವ ಸೇವಾ ಟ್ರಸ್ಟ್ ವತಿಯಿಂದ ಬ್ರಾಹ್ಮಣರ ಮೋಕ್ಷದಾಮದಲ್ಲಿ ಶಿವರಾತ್ರಿ ಹಬ್ಬದ ಪ್ರಯುಕ್ತ ಬೆಳಿಗ್ಗೆ ಈಶ್ವರನಿಗೆ ಪಂಚಾಮೃತ ಅಭಿಷೇಕ, ರುದ್ರಾಭಿಷೇಕವನ್ನು ವೇದ ಬ್ರಹ್ಮ ಶ್ರೀಅನಂತನ ನಾರಾಯಣ ಶಾಸ್ತ್ರಿರವರ ಸಾರಥ್ಯದಲ್ಲಿ ನೆರವೇರಿಸಲಾಯಿತು.
ಯುವ ಸೇವಾ ಟ್ರಸ್ಟ್ ಅಧ್ಯಕ್ಷ ರಾಧಾಕೃಷ್ಣನ್, ಕಾರ್ಯದರ್ಶಿ ಕೆ.ಆರ್ ಬಾಲಾಜಿ, ಖಜಾಂಚಿ ರಾಮಚಂದ್ರ, ನಿರ್ದೇಶಕರಾದ ಗೋಪಿನಾಥ್, ರವಿಶಂಕರ್, ವಿಶ್ವನಾಥ್, ಕೇಶವ, ಪ್ರದೀಪ್, ಸಮಾಜ ಸೇವಕರ ಸುರೇಶ್ ದಂಪತಿ ಶಶಿ ಟ್ರೇಡರ್ಸ್ ಮಾಲೀಕರಾದ ರಾಮಕೃಷ್ಣ, ರಾಜ್ಯ ಬ್ರಾಹ್ಮಣ ಮಹಾಸಭಾ ಮಂಡ್ಯ ಪ್ರತಿನಿಧಿ ಶಂಕರ್ ನಾರಾಯಣ ಶಾಸ್ತ್ರಿ, ಮಂಡ್ಯ ಜಿಲ್ಲಾ ಬ್ರಾಹ್ಮಣ ಸಭಾ ನಿರ್ದೇಶಕರಾದ ಶ್ರೀಪತಿ ಭಾರದ್ವಾಜ್, ಉಮಾ ದೊರೆ ಸ್ವಾಮಿ, ರಾಮಕೃಷ್ಣ, ಕಿರಣ್ ಕೃಷ್ಣಮೂರ್ತಿ, ಹೊಳಲು ನಾಗೇಶ್ ಸೇರಿದಂತೆ ಮುಂತಾದವರು ಭಾಗವಹಿಸಿದ್ದರು.