ದುರಾಸೆ ತುಂಬಿದ ಬದುಕು ಒಳ್ಳೆಯದಲ್ಲ

KannadaprabhaNewsNetwork |  
Published : Feb 09, 2026, 02:30 AM IST
೦೮ ವೈಎಲ್‌ಬಿ ೦೨ಯಲಬುರ್ಗಾ ತಾಲೂಕಿನ ಗೆದಗೇರಿ ಶರಣಬಸವೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಏರ್ಪಡಿಸಿದ್ದ  ಸಾಂಸ್ಕೃತಿಕ ಉತ್ಸವಕ್ಕೆ ಚಾಲನೆ ನೀಡಲಾಯಿತು. | Kannada Prabha

ಸಾರಾಂಶ

ಪ್ರತಿಯೊಬ್ಬ ಮನುಷ್ಯನು ಅಧ್ಯಾತ್ಮದ ಕಡೆಗೆ ಗಮನ ಹರಿಸಿದಾಗ ಮನಸ್ಸು ನೆಮ್ಮದಿಯಾಗಿರುತ್ತದೆ.

ಯಲಬುರ್ಗಾ: ದುರಾಸೆ ತುಂಬಿದ ಬದುಕು ಒಳ್ಳೆಯದಲ್ಲ.ಮನುಜ ಸ್ವಾರ್ಥಕ್ಕೆ ಸಿಲುಕಿ ನಿಜ ಜೀವನ ಮರೆತಿದ್ದಾನೆ ಎಂದು ಕುಷ್ಟಗಿಯ ನಿಡಶೇಸಿ ಹಿರೇಮಠದ ಅಭಿನವ ಶ್ರೀ ಕರಿಬಸವ ಸ್ವಾಮೀಜಿ ಹೇಳಿದರು.

ತಾಲೂಕಿನ ಗೆದಗೇರಿ ಗ್ರಾಮದ ಶ್ರೀಶರಣಬಸವೇಶ್ವರ ಜಾತ್ರಾಮಹೋತ್ಸವ ಅಂಗವಾಗಿ ಪರಿವರ್ತನ ಗೆಳೆಯರ ಬಳಗದಿಂದ ಆಯೋಜಿಸಿದ್ದ ಸಾಂಸ್ಕೃತಿಕ ಉತ್ಸವದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಪ್ರತಿಯೊಬ್ಬ ಮನುಷ್ಯನು ಅಧ್ಯಾತ್ಮದ ಕಡೆಗೆ ಗಮನ ಹರಿಸಿದಾಗ ಮನಸ್ಸು ನೆಮದಿಯಾಗಿರುತ್ತದೆ. ಅಹಂಕಾರ ದೂರವಾಗುತ್ತದೆ. ಮಾನವ ಹಣ ಗಳಿಸಿದರೆ ಸಾಧಕನಾಗುವುದಿಲ್ಲ, ಗುಣದಿಂದ ಸಾಧಕನಾಗುತ್ತಾನೆ. ಜೀವನದಲ್ಲಿ ದಾನ ಧರ್ಮ ಮಾಡುವ ಪರೋಪಕಾರ ಗುಣ ಬೆಳೆಸಿಕೊಳ್ಳಬೇಕು ಎಂದರು.

ಯುವ ಜನಾಂಗ ದುಶ್ಚಟಕ್ಕೆ ಬಲಿಯಾಗುತ್ತಿದ್ದಾರೆ. ಮಾನವ ಜನ್ಮ ಶ್ರೇಷ್ಠವಾದದ್ದು, ಭಗವಂತ ನೀಡಿದ ಜೀವನ ಸಾರ್ಥಕಗೊಳಿಸಿಕೊಳ್ಳಬೇಕು. ಭಕ್ತಿ ಮತ್ತು ಸೇವೆಗೆ ಗೆದಗೇರಿ ಹೆಸರಾಗಿದ್ದು, ಗ್ರಾಮದ ರಥೋತ್ಸವ ನೋಡಿದರೆ ಕೊಪ್ಪಳದ ಗವಿಸಿದ್ಧೇಶ್ವರನ ರಥ ನೋಡಿದ ಹಾಗೇ ಕಾಣುತ್ತದೆ. ಗ್ರಾಮದಲ್ಲಿ ಯುವಕರು ವ್ಯಸನಮುಕ್ತ ಬದುಕು ಕಟ್ಟಿಕೊಳ್ಳಬೇಕು ಎಂದರು.

ಆಹಾರ ಇಲಾಖೆ ನಿರೀಕ್ಷಕ ಮಲ್ಲಿಕಾರ್ಜುನ ಶಾಸ್ತ್ರೀಮಠ, ಸಚಿನ್ ಗೋಣಿ ಮಾತನಾಡಿದರು. ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.

ಈ ಸಂದರ್ಭ ಗ್ರಾಪಂ ಮಾಜಿ ಅಧ್ಯಕ್ಷ ಶರಣಪ್ಪ ಕೊಪ್ಪದ, ಸುಭಾಷ ರಾಜೂರ, ಶಿವಯ್ಯ ಹಿರೇಮಠ, ಮಹಾಂತೇಶ ದೇಸಾಯಿ, ಹನುಮಂತರಾವ್ ಸಾಳುಂಕೆ, ಶರಣಪ್ಪ ಹಿರೇಮನಿ, ಪತ್ರಕರ್ತ ದೇವರಾಜ ದೊಡ್ಡಮನಿ, ವೀರಯ್ಯ ಹಿರೇಮಠ, ರುದ್ರಪ್ಪ ಕೊಪ್ಪದ, ಶಿವಕುಮಾರ ಮರಿಗೌಡರ, ರವಿ ದೊಡ್ಡಮನಿ ಮತ್ತಿತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭರ್ಜರಿ ಯಶಸ್ಸು ಕಂಡ ಕೆಪೆಕ್‌ ವಾಣಿಜ್ಯ ಮೇಳ
ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ಮೆಟ್ರೋ ದರ ಏರಿಕೆಗೆ ತಾತ್ಕಾಲಿಕ ತಡೆ : ತೇಜಸ್ವಿ ಸೂರ್ಯ