ಕನ್ನಡಪ್ರಭ ವಾರ್ತೆ ಕುಣಿಗಲ್
ತಾಲೂಕಿನ ಯಡಿಯೂರು ಹೋಬಳಿ ಕಗ್ಗೇರೆ ತಪೋ ಕ್ಷೇತ್ರದಲ್ಲಿ ಭಕ್ತರು ತಮ್ಮ ಹಿರಿಯರ ಸ್ಮರಣಾರ್ಥ ನಿರ್ಮಿಸಿದ್ದ ತಪೋ ಕ್ಷೇತ್ರ ಅರವಂಟಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮದುವೆಗಾಗಿ ಕೋಟಿಗಟ್ಟಲೆ ಖರ್ಚು ಮಾಡುವ ಕೆಟ್ಟ ಸಂಪ್ರದಾಯ ಉಳ್ಳವರಲ್ಲಿ ಹೆಚ್ಚಾಗುತ್ತಿದೆ, ಪುರಾತನ ಕಾಲದಲ್ಲಿ ಗಾಂಧರ್ವ ವಿವಾಹ ಎಂಬ ಹೆಸರಿನಲ್ಲಿ ಸರಳ ವಿವಾಹ ನಡೆದ ಹಲವಾರು ಸಾಕ್ಷಿಗಳು ನಮ್ಮಲ್ಲಿವೆ ಎಂದರು.ಮದುವೆಗಾಗಿ ಮಾಡುವ ಖರ್ಚಿನಿಂದ ಪೋಷಕರು ಸಾಲಗಾರರಾಗಿ ಕಷ್ಟ ಪಡುವುದು ಸಾಮಾನ್ಯ ವಿಚಾರವಾಗಿದೆ, ಸರಳ ವಿವಾಹಗಳನ್ನು ಮಾಡುವ ರೂಢಿ ಸಮಾಜದಲ್ಲಿ ಹೆಚ್ಚಾಗಬೇಕು ಎಂದು ಸಲಹೆ ನೀಡಿದರು. ಇಂದಿನ ಕಾಲದಲ್ಲಿ ತಂದೆ- ತಾಯಿಯವರ ಹೆಸರನ್ನು ಹೇಳಲು ಇಚ್ಛಿಸದ ಹಲವಾರು ವ್ಯಕ್ತಿಗಳನ್ನು ನಾವು ಕಂಡಿದ್ದೇವೆ. ಆದರೆ ಈ ಕುಟುಂಬಗಳು ಹಿರಿಯರಿಗಾಗಿ, ತಂದೆ- ತಾಯಿಯವರ ಹೆಸರಿನಲ್ಲಿ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳನ್ನು ಮಾಡುತ್ತಿರುವುದಕ್ಕೆ ಅಭಿನಂದಿಸಬೇಕಾಗಿದೆ ಎಂದರು.
ನವದಂಪತಿಗಳ ಜೀವನ ಸುಖವಾಗಿರಬೇಕಾದರೆ ಅತ್ತೆ- ಮಾವಂದಿರನ್ನು ತಂದೆ- ತಾಯಿಯಂತೆ ಸೊಸೆಯನ್ನು ಮಗಳಂತೆ ಕಂಡಾಗ ಮಾತ್ರ ನಿಮ್ಮ ಬದುಕು ಸುಖಕರ ಆಗಿರುತ್ತದೆ ಎಂದು ಸಲಹೆ ನೀಡಿದರು,
ಕಾರ್ಯಕ್ರಮದಲ್ಲಿ ಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ, ರಾಮೇನಹಳ್ಳಿ ಮಠದ ಶ್ರೀ ಶಿವ ಪಂಚಾಕ್ಷರಿ ಸ್ವಾಮೀಜಿ ಹಾಗೂ ದಾನಿಗಳಾದ ನಂದೀಶ್, ದಿನೇಶ್, ಉದಯ್, ವಿಜಯಮ್ಮ, ರೇವಣ್ಣ ,ಕುಮಾರ್ ಸೇರಿದಂತೆ ಇತರರು ಇದ್ದರು.