ಕನ್ನಡಪ್ರಭ ವಾರ್ತೆ ಶಿರಸಿ
ಕಳೆದೊಂದು ವಾರದಿಂದ ಸತತವಾಗಿ ಸುರಿಯುತ್ತಿರುವ ಮಳೆ ಶನಿವಾರ ಕೊಂಚ ಕಡಿಮೆಯಾಗಿದೆ. ಇದರಿಂದ ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದೆ.ತಾಲೂಕಿನ ಕಳವೆ ಗ್ರಾಮದ ಕುಂಬ್ರಿಜಡ್ಡಿಯ ಮಂಜುನಾಥ ವೆಂಕಟರಮಣ ಹೆಗಡೆ ವಾಸ್ತವ್ಯದ ಕಚ್ಚಾಮನೆಯ ಮೇಲೆ ಹಲಸಿನ ಮರ ಬಿದ್ದು ೪ ರಿಂದ ೫ ಸಿಮೆಂಟ್ ಸೀಟ್ ಒಡೆದು, ಅಂದಾಜು ₹೧೦ ಸಾವಿರ, ರಾಮಾಪುರದ ನಾಗಪ್ಪ ವಡ್ಡರ್ ವಾಸ್ತವ್ಯದ ಮನೆಯ ಹಿಂದಿನ ಅಡುಗೆ ಮನೆಯ ಶೆಡ್ ಹಾಳಾಗಿ ಸುಮಾರು ₹೧೦ ಸಾವಿರ ಹಾನಿಯಾಗಿದೆ.
ಮಳೆ ವಿವರ:ಯಲ್ಲಾಪುರ ತಾಲೂಕಿನಲ್ಲಿ ಜು ೨೦ರ ವರೆಗೆ ೧೩೮೨.೬ ಮಿ.ಮೀ ಮಳೆಯಾಗಿದ್ದು, ಜು ೨೦ರಂದು ೬೦.೬ ಮಿ.ಮೀ ಮಳೆ ಸುರಿದಿದೆ. ಸಿದ್ದಾಪುರ ತಾಲೂಕಿನಲ್ಲಿ ಜು ೨೦ರ ವರೆಗೆ ೨೧೪೩.೬ ಮಿ.ಮೀ ಮಳೆ ಸುರಿದಿದ್ದು, ಜು ೨೦ರಂದು ೧೦೫.೨ ಮಿ.ಮೀ ಮಳೆಯಾಗಿದೆ. ಮುಂಡಗೋಡ ತಾಲೂಕಿನಲ್ಲಿ ಜು ೨೦ರ ವರೆಗೆ ೬೬೬.೦ ಮಿ.ಮೀ. ಮಳೆಯಾಗಿದ್ದು, ಜು ೨೦ರಂದು ೩೦.೨ ಮಿ.ಮೀ. ಮಳೆಯಾಗಿದೆ. ಶಿರಸಿ ತಾಲೂಕಿನಲ್ಲಿ ಜು. ೨೦ರ ವರೆಗೆ ೨೦೭೮.೩ ಮಿ.ಮೀ. ಮಳೆಯಾಗಿದ್ದು, ಜು. ೨೦ರಂದು ೮೪.೨ ಮಿ.ಮೀ ಮಳೆ ಸುರಿದಿದೆ.ಮನೆಗಳಿಗೆ ಹಾನಿ: ಅಧಿಕಾರಿಗಳ ಭೇಟಿಕನ್ನಡಪ್ರಭ ವಾರ್ತೆ ಮುಂಡಗೋಡನಿರಂತರ ಮಳೆಯಿಂದಾಗಿ ಶನಿವಾರ ಒಂದೇ ದಿನ ತಾಲೂಕಿನಲ್ಲಿ ೧೮ ಮನೆಗಳಿಗೆ ಹಾನಿಯಾಗಿದ್ದು, ಮಳೆಯಿಂದ ಈ ವರೆಗೆ ತಾಲೂಕಿನಲ್ಲಿ ಹಾನಿಗೊಳಗಾದ ಮನೆಗಳ ಸಂಖ್ಯೆ ೪೧ಕ್ಕೇರಿದಂತಾಗಿದೆ. ಬೆಡಸಗಾಂವ ಗ್ರಾಮದ ಮೋಹನ ನಾಯ್ಕ, ನಂದಿಕಟ್ಟಾ ಗ್ರಾಮದ ಗಂಬುಬಾಯಿ ಹಂಚಿನಮನಿ, ಬೆಕ್ಕೋಡ ಗ್ರಾಮದ ಉದೇಶ ಶಿವಪ್ಪ ನಾಯ್ಕ, ಕೊಪ್ಪ ಗ್ರಾಮದ ತಿಪ್ಪಣ್ಣ ಸಿದ್ದಪ್ಪ ಸುಣಗಾರ ಹಾಗೂ ಯಲ್ಲವ್ವ ಹೊಸೂರ, ಮಜ್ಜಿಗೇರಿ ಗ್ರಾಮದ ಲಕ್ಮವ್ವ ಭೋವಿವಡ್ಡರ, ಹುನಗುಂದ ಗ್ರಾಮದ ದೇವೇಂದ್ರ ಬಿಶೆಟ್ಟಿ, ಶಾಂತವ್ವ ಬಮ್ಮನಳ್ಳಿ, ಕರಗಿನಕೊಪ್ಪ ಗ್ರಾಮದ ಪ್ರೇಮವ್ವ ಲಮಾಣಿ, ಮಂಜುಳಾ ಲಮಾಣಿ, ಹನುಮಾಪುರ ಗ್ರಾಮದ ಸಾವಕ್ಕ ಹಾರವಳ್ಳಿ, ಗಂಗಮ್ಮ ಕಮ್ಮಾರ, ನಂದೀಪುರ ಗ್ರಾಮದ ಭಾರತಿ ವಡ್ಡರ, ಓಣಿಕೇರಿ ಗ್ರಾಮದ ಗಂಗಪ್ಪ ಕಮ್ಮಾರ, ಸಾವಿತ್ರಿ ಹಜ್ಜನ್ನವರ, ಶಿರಗೇರಿ ಗ್ರಾಮದ ಬಯ್ಯಾಬಾಯಿ ಕೊಕರೆ, ಮಲವಳ್ಳಿ ಗ್ರಾಮದ ದೇವಕ್ಕ ಸಾಲ್ವಾಂಕೆ, ಶಂಶುದ್ದಿನ್ ಅಂಗಡಿ ಅವರಿಗೆ ಸೇರಿ ಮನೆ ಕುಸಿದು ಹಾನಿಗೊಳಗಾಗಿದ್ದು, ಅಧಿಕಾರಿಗಳು ಹಾನಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಪರಿಹಾರ ಕ್ರಮ ಕೈಗೊಂಡಿದ್ದಾರೆ.