ಕನ್ನಡಪ್ರಭ ವಾರ್ತೆ ಬೈಲಹೊಂಗಲ
ಪಟ್ಟಣದ ಗಣಾಚಾರಿ ಶಿಕ್ಷಣ ಸಂಸ್ಥೆಯ ಸಭಾಭವನದಲ್ಲಿ ನಡೆದ ವಿಧಾನಸಭಾ ಕ್ಷೇತ್ರದ ವಕೀಲರ ಸಭೆಯಲ್ಲಿ ಮಾತನಾಡಿದ ಅವರು, ಕಣ್ಣಿದ್ದು ಕುರಾಡಾದ, ಕಿವಿಯಿದ್ದು ಕಿವುಡಾದ ಪ್ರಸ್ತುತ ಸರ್ಕಾರದಲ್ಲಿ ಲಿಂಗಾಯತ ಪಂಚಮಸಾಲಿ ಹೋರಾಟಕ್ಕೆ ಮನ್ನಣೆ ಸಿಗದಿರುವುದು ಹಾಗೂ ಸಮಾಜದ ಶಾಸಕರು ವಿಧಾನಸೌಧದಲ್ಲಿ ಧ್ವನಿ ಎತ್ತದಿರುವುದು ಬೇಸರ ತಂದಿದೆ. ಸಮಾಜದ ವಕೀಲರು ಹೋರಾಟಕ್ಕೆ ಇಳಿದಿರುವುದರಿಂದ ಮೀಸಲಾತಿ ಹೋರಾಟ ತಾರ್ಕಿಕ ಅಂತ್ಯ ಕಾಣುವ ಭರವಸೆ ಇದೆ. ನಮ್ಮವರಿಂದಲೇ ಇಂದು ಕಗ್ಗಂಟಾಗಿರುವ ಲಿಂಗಾಯತ ಪಂಚಮಸಾಲಿ 2ಎ ಮೀಸಲಾತಿ ಹೋರಾಟ ವಕೀಲರ ನೇತೃತ್ವದಲ್ಲಿ ಮುನ್ನಡೆಸುವ ಉದ್ದೇಶದಿಂದ ಸೆ.22ರಂದು ಸಾವಿರಾರು ವಕೀಲರು ಹೋರಾಟದ ಶಕ್ತಿ ಕೇಂದ್ರ ಬೆಳಗಾವಿಯಲ್ಲಿ ಸೇರಿ ಮುಂದಿನ ಹೋರಾಟದ ನಿರ್ಣಯ ತಗೆದುಕೊಳ್ಳಲಾಗುವುದು ಎಂದರು.
ಮಾಜಿ ಶಾಸಕ ಡಾ.ವಿ.ಐ.ಪಾಟೀಲ ಮಾತನಾಡಿ, ಪಂಚಮಸಾಲಿಗಳು ಒಂದಾದರೆ ನಮ್ಮ ಬೇಡಿಕೆ ಸರ್ಕಾರ ಈಡೆರಿಸುತ್ತದೆ. ಸಮಾಜ ಒಡೆಯುವ ಕೆಲಸ ಯಾರು ಮಾಡಬಾರದು. ಅಂತವರಿಗೆ ಪಾಠ ಕಲಿಸಬೇಕೆಂದೆರು.ಅಧ್ಯಕ್ಷತೆ ವಹಿಸಿದ್ದ ವಕೀಲರ ಸಂಘದ ಅಧ್ಯಕ್ಷ ಎಮ್.ಆರ್.ಮೆಳವೆಂಕಿ ಮಾತನಾಡಿ, ಸಮಾಜಕ್ಕೆ ನ್ಯಾಯ ಕೊಡಿಸುವ ವಕೀಲರು ಹೋರಾಟ ಯಶಸ್ವಿಯಾಗಿಸೊಣ ಎಂದರು.
ವೇದಿಕೆಯ ಮೇಲೆ ಬಿ.ಎಸ್.ಕಿವಡಸಣ್ಣವರ, ಎಮ್.ವಾಯ್.ಸೊಮಣ್ಣವರ, ಜಿ.ಬಿ.ಶೀಗಿಹಳ್ಳಿ, ಮಹಾಂತೇಶ ಮತ್ತಿಕೊಪ್ಪ, ಎಸ್.ಎಸ್.ಮಠದ, ಇದ್ದರು.
ಮುರಿಗೆಪ್ಪ ಗೂಂಡ್ಲೂರ, ಮಹೇಶ ಹರಕುಣಿ, ರಾಜು ಸೊಗಲ, ಎಸ್.ಎಸ್.ಅಲದಕಟ್ಟಿ ವಿ.ಎಸ್.ಸಂಗೊಳ್ಳಿ, ಮಹಾಂತೇಶ ಚಿಕ್ಕೊಪ್ಪ, ವಿಶ್ವನಾಥ ಪಾಟೀಲ, ಮಹಾಂತೇಶ ಹೊಸಮನಿ, ಬಿ.ಬಿ.ಹುಲಮನಿ, ಪಿ.ಡಿ.ಮರಕಟ್ಟಿ, ರಾಜು ಕುಡಸೋಮಣ್ಣವರ, ಎಸ್.ಬಿ.ರೊಟ್ಟಿ. ಸಿ.ಪಿ.ಈಟಿ, ಎಸ್.ವಾಯ್.ಪಾಟೀಲ, ಆನಂದ ತುರಮರಿ, ರುದ್ರಪ್ಪ ಹೊಸಮನಿ ಸೇರಿದಂತೆ ನೂರಾರು ವಕೀಲರು ಇದ್ದರು.