ಶವ ಸಾಗಿಸುತ್ತಿದ್ದ ಅಂಬ್ಯುಲೆನ್ಸ್‌ಗೆ ಲಾರಿ ಡಿಕ್ಕಿ: ಓರ್ವ ಮಹಿಳೆ ಸಾವು

KannadaprabhaNewsNetwork |  
Published : Aug 28, 2024, 12:48 AM IST
ಜಖಂಗೊಂಡಿರುವ ಅಂಬ್ಯುಲೆನ್ಸ್‌ ವಾಹನ | Kannada Prabha

ಸಾರಾಂಶ

A lorry collides with an ambulance carrying a dead body: a woman dies

ಕನ್ನಡಪ್ರಭ ವಾರ್ತೆ ಸಿರಿಗೆರೆ

ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿದ್ದ ವ್ಯಕ್ತಿಯೊಬ್ಬನ ಶವವನ್ನು ಸಾಗಿಸುತ್ತಿದ್ದ ಅಂಬ್ಯುಲೆನ್ಸ್‌ಗೆ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಅಂಬ್ಯುಲೆನ್ಸ್‌ನಲ್ಲಿದ್ದ ಮಹಿಳೆಯೋರ್ವಳು ಸಾವನ್ನಪ್ಪಿದ್ದಾರೆ. ಸಿರಿಗೆರೆ ಸಮೀಪದ ಕಾತ್ರಳ್‌ ಬಳ್ಳೇಕಟ್ಟೆ ಸಮೀಪ ಈ ದುರ್ಘಟನೆ ನಡೆದಿದೆ. ಹೃದಯರೋಗಕ್ಕೀಡಾಗಿದ್ದ ಹಾವೇರಿಯ ಶಿವಬಸವ ಎಂಬುವವರು ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ನಿಧನರಾಗಿದ್ದರು. ಅವರ ಶವವನ್ನು ಬೆಂಗಳೂರಿನಿಂದ ಹಾವೇರಿಗೆ ಖಾಸಗಿ ಅಂಬ್ಯುಲೆನ್ಸ್‌ನಲ್ಲಿ ಸಾಗಿಸುವ ವೇಳೆ ಕಾತ್ರಾಳು ಬಳ್ಳೇಕಟ್ಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿಯೊಂದು ರಭಸವಾಗಿ ಅಂಬ್ಯುಲೆನ್ಸ್‌ಗೆ ಡಿಕ್ಕಿ ಒಡೆದಿದೆ. ಇದರಿಂದ ವಾಹನದಲ್ಲಿ ಶವದ ಜೊತೆಗೆ ಸಂಚರಿಸುತ್ತಿದ್ದ ಶಿವಬಸವ ಸಂಬಂಧಿ ಸರೋಜಮ್ಮ (೫೨) ಮೃತಪಟ್ಟಿದ್ದಾರೆ. ಅಂಬ್ಯುಲೆನ್ಸ್‌ನಲ್ಲಿದ್ದ ಇಬ್ಬರು ಗಾಯಗೊಂಡಿದ್ದು ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಭರಮಸಾಗರ ಠಾಣೆಯ ವ್ಯಾಪ್ತಿಯಲ್ಲಿ ಈ ಪ್ರಕರಣ ಜರುಗಿದೆ.

ಫೋಟೊ: ಜಖಂಗೊಂಡಿರುವ ಅಂಬ್ಯುಲೆನ್ಸ್‌ ವಾಹನ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಒಲವಿನ ಊಟ ಬಡಿಸಲು ಸಿದ್ಧವಾದ ಅಕ್ಕ ಕೆಫೆ
ಚನ್ನಮ್ಮ ಮೂರ್ತಿ ಉದ್ಘಾಟನಾ ಸಮಾರಂಭಕ್ಕೆ ಬಹಿಷ್ಕಾರ