ಪ್ರೇಮ ವೈಫಲ್ಯ ಯುವಕ ನೇಣಿಗೆ ಶರಣು

KannadaprabhaNewsNetwork |  
Published : May 25, 2025, 01:16 AM IST
ಸಿಕೆಬಿ-4 ಮೃತ ಮಂಜುನಾಥ್ | Kannada Prabha

ಸಾರಾಂಶ

ಸಾಮಾಜಿಕ ಜಾಲತಾಣಗಳು ಸಿನಿಮಾಗಳ ಪ್ರಭಾವದಿಂದಾಗಿ ಮಾದರಿ ಜೀವನ ಮಾಡುವ ಬದಲು ಸೂಕ್ಷ್ಮತೆಗೆ ಒತ್ತು ನೀಡುತ್ತಿದ್ದಾರೆ. ಕ್ಷುಲ್ಲಕ ಕಾರಣಕ್ಕೆ ಜೀವನ ಕೊನೆಗಾಣಿಸಿಕೊಳ್ಳುತ್ತಿದ್ದಾರೆ. ಅಪ್ರಾಪ್ತೆ ಬಾಲಕಿಯನ್ನ ಪ್ರೀತಿಸುತಿದ್ದ ಪ್ರೇಮಿಯೊಬ್ಬ ರಾತ್ರಿ ತನ್ನ ಲವರ್ ಹುಟ್ಟು ಹಬ್ಬ ಆಚರಿಸಿ ಬೆಳಿಗ್ಗೆ ಸಾವಿಗೆ ಶರಣಾಗಿರುವ ಘಟನೆ ತಾಲೂಕಿನ ಅಜ್ಜವಾರ ಗ್ರಾಮದಲ್ಲಿ ನಡೆದಿದೆ

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಸಾಮಾಜಿಕ ಜಾಲತಾಣಗಳು ಸಿನಿಮಾಗಳ ಪ್ರಭಾವದಿಂದಾಗಿ ಮಾದರಿ ಜೀವನ ಮಾಡುವ ಬದಲು ಸೂಕ್ಷ್ಮತೆಗೆ ಒತ್ತು ನೀಡುತ್ತಿದ್ದಾರೆ. ಕ್ಷುಲ್ಲಕ ಕಾರಣಕ್ಕೆ ಜೀವನ ಕೊನೆಗಾಣಿಸಿಕೊಳ್ಳುತ್ತಿದ್ದಾರೆ. ಅಪ್ರಾಪ್ತೆ ಬಾಲಕಿಯನ್ನ ಪ್ರೀತಿಸುತಿದ್ದ ಪ್ರೇಮಿಯೊಬ್ಬ ರಾತ್ರಿ ತನ್ನ ಲವರ್ ಹುಟ್ಟು ಹಬ್ಬ ಆಚರಿಸಿ ಬೆಳಿಗ್ಗೆ ಸಾವಿಗೆ ಶರಣಾಗಿರುವ ಘಟನೆ ತಾಲೂಕಿನ ಅಜ್ಜವಾರ ಗ್ರಾಮದಲ್ಲಿ ನಡೆದಿದೆ.

ನೇಣಿಗೆ ಶರಣಾದ ಯುವಕನನ್ನು ಅಜ್ಜವಾರ ಗ್ರಾಮದ ಯುವಕ ಮಂಜುನಾಥ್ (27) ರ್ಮೃತ ದುರ್ದೈವಿ. ತನ್ನ ಸೋದರ ಮಾವನ ಮಗಳು ಅಪ್ರಾಪ್ತೆ ಯುವತಿಯನ್ನ ಪ್ರೀತಿಸುತಿದ್ದ ಮಂಜುನಾಥ್ ಲವ್ ಬ್ರೇಕಪ್ ಅಥವಾ ಏನಾಯ್ತೋ ಗೊತ್ತಿಲ್ಲ ರಾತ್ರಿ ಖುಷಿಯಾಗಿ ತನ್ನ ಲವರ್ ಜತೆ ಕೇಕ್ ಕತ್ತರಿಸಿ ಹುಟ್ಟಿ ಹಬ್ಬ ಆಚರಿಸಿದ ಯುವಕ ಬೆಳಿಗ್ಗೆ ಸಾವಿಗೆ ಶರಣಾಗಿದ್ದಾನೆ.

ಮಂಜುನಾಥ್ ಬೋರ್ ವೆಲ್ ರಿಪೇರಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತಿದ್ದ. ಈ ಹಿಂದೆ ಒಬ್ಬ ಯುವತಿಯನ್ನು ಪ್ರೀತಿಸುತಿದ್ದನಂತೆ, ನಂತರ ಅವಳಿಗೆ ಮತ್ತೊಬ್ಬರ ಜೊತೆ ಮದುವೆ ಆಗೋಯ್ತು ಅಂತ ಬೇಸರದಲ್ಲಿದ್ದ ಯುವಕ ಇನ್ನೂ ಹದಿನೆಂಟು ವರ್ಷ ದಾಟದ ತನ್ನ ಸೋದರ ಮಾನವ ಮಗಳನ್ನೆ ಪ್ರೀತಿಸುತಿದ್ದ ಎನ್ನಲಾಗಿದೆ. ರಾತ್ರಿ ಹುಟ್ಟು ಹಬ್ಬ ಆಚರಿಸಿದ ನಂತರ ಎನಾಯ್ತೋ ಗೊತ್ತಿಲ್ಲ ಮನನೊಂದ ಯುವಕ ಮಂಜುನಾಥ್ ಪ್ಯಾನಿಗೆ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾನೆ. ಅವಳಿಗೆ ಹದಿನೆಂಟು ವರ್ಷ ಮುಗಿಯಲಿ ಮಾತಾಡೋಣ ಅಲ್ಲಿವರೆಗೂ ಸುಮ್ಮನಿರು ನಿನ್ಮ ಕೆಲಸ ನೀ ನೋಡಿಕೋ ಎಂದು ಹೇಳಿದ್ದೇನೆ ಆದ್ರೂ ಯಾಕೆ ಸಾವನ್ನಪ್ಪಿದನೋ ಗೊತ್ತಿಲ್ಲ ಎಂದು ಹುಡುಗಿ ಚಿಕ್ಕಮ್ಮ ತಿಳಿಸಿದ್ದಾರೆ.

ಯುವಕನ‌ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಪೋಷಕರು ನಮ್ಮ ಹುಡುಗನ ಸಾವಿಗೆ ಹುಡುಗಿಯವರೇ ಕಾರಣ. ಅವರ ಮೇಲೆ ಪೊಲೀಸ್ ದೂರು ನೀಡಿ ತನಿಖೆಗೆ ಒತ್ತಾಯಿಸುತ್ತೇವೆ ಎಂದು ಮೃತನ ಅತ್ತಿಗೆ ತಿಳಿಸಿದ್ದಾರೆ. ಇನ್ನು ಘಟನೆ ಸ್ಥಳಕ್ಕೆ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸರು ಆಗಮಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತ ದೇಹವನ್ನ ಜಿಲ್ಲಾ ಆಸ್ಪತ್ರೆಗೆ ಶವಗಾರಕ್ಕೆ ರವಾನಿಸಿ ಮರಣೋತ್ತರ ಪರೀಕ್ಷೆ ನಡೆಸಿ ಶವವನ್ನು ಸಂಬಂಧಿಕರಿಗೆ ಹಸ್ತಾಂತರ ಮಾಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!