ಹೈದರಾಬಾದಲ್ಲಿ ಐಷಾರಾಮಿ ಫ್ಲಾಟ್‌ ಅನಾವರಣ

KannadaprabhaNewsNetwork |  
Published : May 28, 2024, 01:00 AM IST
ಹೈದರಾಬಾದ್‌ನಲ್ಲಿ ನವನಾಮಿ ಡೆವಲಪರ್ಸ್‌ ನಿರ್ಮಿಸಿರುವ  ಮೆಗಾಲಿಯೋ ಅವಳಿ ವಸತಿ ಗೋಪುರಗಳು. | Kannada Prabha

ಸಾರಾಂಶ

ದಕ್ಷಿಣ ಭಾರತದ ಪ್ರಮುಖ ರಿಯಲ್‌ ಎಸ್ಟೇಟ್‌ ಡೆವಲಪರ್‌ ‘ನವನಾಮಿ’ ಪ್ರಾಜೆಕ್ಟ್‌ ಪ್ರೈವೇಟ್‌ ಲಿಮಿಟೆಡ್‌ ಸಂಸ್ಥೆಯು ಮುತ್ತಿನ ನಗರಿ ಹೈದರಾಬಾದ್‌ನಲ್ಲಿ 150 ಐಷಾರಾಮಿ ನಿವಾಸಗಳನ್ನು ಒಳಗೊಂಡ 50 ಮಹಡಿಗಳ ಎತ್ತರದ ‘ಮೆಗಾಲಿಯೋ’ ಅವಳಿ ವಸತಿ ಸಮುಚ್ಚಯಗಳನ್ನು ಅನಾವರಣಗೊಳಿಸಿದೆ.

ಲಿಂಗರಾಜು ಕೋರಾ

ಕನ್ನಡಪ್ರಭ ವಾರ್ತೆ ಹೈದರಾಬಾದ್‌ದಕ್ಷಿಣ ಭಾರತದ ಪ್ರಮುಖ ರಿಯಲ್‌ ಎಸ್ಟೇಟ್‌ ಡೆವಲಪರ್‌ ‘ನವನಾಮಿ’ ಪ್ರಾಜೆಕ್ಟ್‌ ಪ್ರೈವೇಟ್‌ ಲಿಮಿಟೆಡ್‌ ಸಂಸ್ಥೆಯು ಮುತ್ತಿನ ನಗರಿ ಹೈದರಾಬಾದ್‌ನಲ್ಲಿ 150 ಐಷಾರಾಮಿ ನಿವಾಸಗಳನ್ನು ಒಳಗೊಂಡ 50 ಮಹಡಿಗಳ ಎತ್ತರದ ‘ಮೆಗಾಲಿಯೋ’ ಅವಳಿ ವಸತಿ ಸಮುಚ್ಚಯಗಳನ್ನು ಅನಾವರಣಗೊಳಿಸಿದೆ.

ಒಟ್ಟು 4.1 ಎಕರೆ ವಿಸ್ತೀರ್ಣದಲ್ಲಿ ನಿರ್ಮಿಸಿರುವ ಮೆಗಾಲಿಯೋದ ಸುತ್ತಲಿನ 1200 ಎಕರೆ ಹಸಿರಿನಿಂದ ಸುತ್ತುವರಿದ ನೈಸರ್ಗಿಕ ಪ್ರದೇಶವಾಗಿದೆ. ಜೊತೆಗೆ ಸಂರಕ್ಷಿತ ಜಲಮೂಲಗಳಾದ ಹಿಮಾಯತ್ ಸಾಗರ್ ಮತ್ತು ಓಸ್ಮಾನ್ ಸಾಗರ್‌ನ ಸಮೀಪದಲ್ಲೇ ಗಗನಚುಂಬಿಯಂತೆ ವಸತಿ ಸಮುಚ್ಚಯಗಳನ್ನು ನಿರ್ಮಿಸಲಾಗಿದೆ.ನಗರದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ‘ಮೆಗಾಲಿಯೋ ಗ್ರ್ಯಾಂಡ್‌ ಲಾಂಚ್‌’ ಕಾರ್ಯಕ್ರಮದ ಮೂಲಕ ನವನಾಮಿಯ ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕ ನವೀನ್‌ ಗಡ್ಡೆ ತಮ್ಮ ಕನಸಿನ ಯೋಜನೆಯನ್ನು ಅನಾವರಣಗೊಳಿಸಿದರು.ಇದಕ್ಕು ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೆಗಾಲಿಯೋ ಸುಮಾರು 800 ರಿಂದ 900 ಕೋಟಿ ರು. ವೆಚ್ಚದ ಯೋಜನೆಯಾಗಿದೆ. ಒಟ್ಟು150 ವಸತಿಗಳನ್ನು ಶ್ರೀಮಂತಿಕೆ ಮತ್ತು ಅತ್ಯಾಧುನಿಕತೆಯ ಆಧಾರದಲ್ಲಿ ಮೂರು ಘಟಕಗಳಾಗಿ ವಿಂಗಡಿಸಲಾಗಿದೆ. ಸ್ಕೈಲೈನ್ ಟವರ್‌ನ ಫ್ಲಾಟ್‌ಗಳು 11,111 ಚದರ ಅಡಿ ಮತ್ತು ಯುನಿಟಿ ಟವರ್‌ನ ನಿವಾಸಗಳು 9999 ಚದರ ಅಡಿ ಮತ್ತು 8888 ಚದರ ಅಡಿ ವಿಸ್ತೀರ್ಣದಿಂದ ಕೂಡಿವೆ. ಈ ಪ್ರತಿ ಫ್ಲಾಟ್‌ನ ಬೆಲೆ 8 ಕೋಟಿ ರು. ನಿಂದ ಆರಂಭವಾಗುತ್ತದೆ ಎಂದು ನವೀನ್‌ ಗಡ್ಡೆ ತಿಳಿಸಿದರು.

ಡಿಸೈನ್‌ ಹೌಸ್‌ನ ಪ್ರಧಾನ ವಾಸ್ತುಶಿಲ್ಪಿ ರಾಜೀವ್‌ ಕುಮಾರ್‌ ಶರ್ಮಾ, ನವನಾಮಿ ನಿರ್ದೇಶಕ ಕೃಷ್ಣ ಕಾಂತ್‌ ಕೋಟಗಿರಿ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಸಿಲಿನ ಹೊಡೆತಕ್ಕೆ ಸಾವಿರಾರು ಮೀನುಗಳ ಮಾರಣಹೋಮ
ನಿರಾಶ್ರಿತರ ಕಣ್ಣೀರು ಒರೆಸುವ ಕೆಲಸ