ಲೋಕಾರ್ಪಣೆ । ವಿವೇಕಾನಂದ ಸಂಘ ಉದ್ಘಾಟನೆ
ಈ ಭೂಮಿಯ ಮೇಲೆ ಮನುಷ್ಯ ಜನ್ಮ ಸಾರ್ಥಕವಾದುದು. ಮನುಷ್ಯನಲ್ಲಿ ಮಾತ್ರ ಪರಸ್ಪರ ಸಹಕರಿಸುವ ಸ್ವಭಾವ ಇದೆ. ಈ ಸ್ವಭಾವಕ್ಕೆ ಪೂರಕವಾಗಿ ಜಲಚರಗಳು ಮತ್ತು ಪ್ರಕೃತಿ ಸಹಜವಾಗಿ ಸಹಕರಿಸುತ್ತಿವೆ. ಪರಸ್ಪರ ಸಹಕಾರದಲ್ಲಿ ಜೀವನ ಪದ್ದತಿ ಅಳವಡಿಸಿಕೊಂಡಲ್ಲಿ ಬದುಕು ಸಾಧ್ಯವಾಗುತ್ತದೆ ಎಂದು ಸುವರ್ಣ ನ್ಯೂಸ್ ಸಂಪಾದಕ ಅಜಿತ್ ಹನುಮಕ್ಕನವರ್ ಅಭಿಪ್ರಾಯಪಟ್ಟರು.
ನಗರದ ಶ್ಯಾನುಭೋಗರ ಬೀದಿಯಲ್ಲಿ ಸ್ಥಾಪಿಸಿರುವ ಶ್ರೀ ವೀರಸನ್ಯಾಸಿ ವಿವೇಕಾನಂದ ಸೌಹಾರ್ದ ಸಹಕಾರಿ ಸಂಘವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಈ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಸಾವಿರಾರು ನಿರುದ್ಯೋಗಿಗಳು ಸ್ವಯಂ ಉದ್ಯೋಗ ಸೃಷ್ಟಿಸಿಕೊಂಡು ಜೀವನ ಸಾಗಿಸಲು ಆದಾಯ ಮೂಲ ಹುಡುಕಿಕೊಂಡಿದ್ದಾರೆ. ದುಡಿಯಲೇಬೇಕು ಎನ್ನುವವರಿಗೆ ಅನೇಕ ಅವಕಾಶಗಳು ಇವೆ. ಸರ್ಕಾರಗಳಿಂದಲೂ ಸಹಕಾರಿ ಸಂಘಗಳಿಗೆ ಮತ್ತು ಸಂಘ ಸಂಸ್ಥೆಗಳಿಗೆ ಅನೇಕ ಸಹಕಾರ ಮತ್ತು ಸಹಾಯಕ ಅರ್ಥಿಕ ಬಲ ದೊರೆಯುತ್ತಿದೆ. ಈ ಸಂದರ್ಭವನ್ನು ಸಹಕಾರ ಸಂಘಗಳು ಸದುಪಯೋಗ ಮಾಡಿಕೊಳ್ಳಬೇಕು. ಸಂಘದ ಚಟುವಟಿಕೆಗಳು ಸದಾ ನಿರಂತರವಾಗಿಲಿ. ದೇಶ, ಸಂಸ್ಕಾರ, ಸಂಸ್ಕೃತಿ, ನಮ್ಮ ಸುತ್ತ ಮುತ್ತಲಿನ ಅಶಕ್ತ ಜನರಿಗೆ ಆಸರೆಯಾಗಲಿ ಎಂದರು.