ಮನುಷ್ಯನಿಗೆ ಜೀವನದಲ್ಲಿ ಶಿಸ್ತು, ಸಮಯ ಪಾಲನೆ ಅಗತ್ಯ

KannadaprabhaNewsNetwork |  
Published : Aug 10, 2025, 01:30 AM IST
ಫೋಟೋ : 9 ಹೆಚ್‌ಎಸ್‌ಕೆ 1ಹೊಸಕೋಟೆ ನಗರದ ನಿವೃತ್ತ ಸರ್ಕಾರಿ ನೌಕರರ ಭವನದಲ್ಲಿ ನಡೆದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ೩೩ ವರ್ಷ ಶಿಕ್ಷಕ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಶಿಕ್ಷಕ ಬಿ.ಶ್ರೀನಿವಾಸ್ ಅವರಿಗೆ ಗೌರವ ಸಮರ್ಪಣೆ ಸಲ್ಲಿಸಿ ಬೀಳ್ಕೊಡುಗೆ ಮಾಡಲಾಯಿತು | Kannada Prabha

ಸಾರಾಂಶ

ಹೊಸಕೋಟೆ: ಮನುಷ್ಯ ತನ್ನ ವೃತ್ತಿ ಜೀವನದಲ್ಲಿ ಶಿಸ್ತು, ಸಂಯಮ ಹಾಗೂ ಸಮಯ ಪಾಲನೆ ಅಳವಡಿಸಿಕೊಂಡರೆ ಯಶಸ್ವಿ ಜೀವನ ನಿರ್ವಹಿಸಲು ಸಾಧ್ಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಪದ್ಮನಾಭ ತಿಳಿಸಿದರು.

ಹೊಸಕೋಟೆ: ಮನುಷ್ಯ ತನ್ನ ವೃತ್ತಿ ಜೀವನದಲ್ಲಿ ಶಿಸ್ತು, ಸಂಯಮ ಹಾಗೂ ಸಮಯ ಪಾಲನೆ ಅಳವಡಿಸಿಕೊಂಡರೆ ಯಶಸ್ವಿ ಜೀವನ ನಿರ್ವಹಿಸಲು ಸಾಧ್ಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಪದ್ಮನಾಭ ತಿಳಿಸಿದರು.

ನಗರದ ನಿವೃತ್ತ ಸರ್ಕಾರಿ ನೌಕರರ ಭವನದಲ್ಲಿ ಹಮ್ಮಿಕೊಂಡಿದ್ದ ವಯೋನಿವೃತ್ತಿ ಹೊಂದಿದ ಶಿಕ್ಷಕಿ ಸಿಂಗಹಳ್ಳಿ ಬಿ.ಶ್ರೀನಿವಾಸ್ ಅವರ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಅವರು, ಶಿಕ್ಷಕ ವೃತ್ತಿ ಎನ್ನುವುದು ಅತ್ಯಂತ ಶ್ರೇಷ್ಠ ವೃತ್ತಿಯಾಗಿದ್ದು ಪ್ರತಿಯೊಬ್ಬ ಶಿಕ್ಷಕರು ತಮ್ಮಲ್ಲಿ ತಾವೇ ಸಮರ್ಪಣಾ ಮನೋಭಾವವನ್ನು ಹೊತ್ತು ಕೆಲಸ ಮಾಡಬೇಕು. ಆಗ ಮಾತ್ರ ಮುಂದಿನ ಪೀಳಿಗೆಗೆ ಭವಿಷ್ಯದ ಉತ್ತಮ ನಾಯಕರನ್ನು ಸೃಷ್ಟಿಸಲು ಸಾಧ್ಯ. ಸರಳತೆಯ ವ್ಯಕ್ತಿತ್ವವನ್ನ ಹೊಂದಿರುವ ಬಿ.ಶ್ರೀನಿವಾಸ್ 33 ವರ್ಷ ಶಿಕ್ಷಕ ವೃತ್ತಿಯಲ್ಲಿ ಸಮರ್ಪಣಾ ಮನೋಭಾವದ ಜೊತೆಗೆ ಸರಳತೆಯ ಪ್ರತೀಕವಾಗಿ ಕೆಲಸ ಮಾಡಿ ಶಾಲೆಗಳಲ್ಲಿ ತಮ್ಮದೇ ಆದ ಅಭಿವೃದ್ಧಿ ಹೆಜ್ಜೆ ಗುರುತುಗಳನ್ನ ಬಿಟ್ಟು ಹೋಗಿದ್ದಾರೆ. ಮುಂದಿನ ದಿನಗಳಲ್ಲಿ ಸಮಾಜ ಸೇವೆ ಮೂಲಕ ತಮ್ಮ ನಿವೃತ್ತಿ ಜೀವನ ಕಳೆಯಲಿ ಎಂದರು.

ನಿವೃತ್ತ ಇಒ ಡಾ. ನಾರಾಯಸ್ವಾಮಿ ಮಾತನಾಡಿ, ಉತ್ತಮ ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು ಇಂತಹ ಶಿಕ್ಷಕ ಸೇವೆಯನ್ನು 33 ವರ್ಷ ಪೂರೈಸಿದ ಬಿ.ಶ್ರೀನಿವಾಸ್ ಅವರ ಕಾರ್ಯವೈಖರಿ ಜನಮನ್ನಣೆ ಗಳಿಸಿದೆ. ಅವರು ಕೆಲಸ ಮಾಡಿದ ಪ್ರತಿ ಶಾಲೆಯಲ್ಲಿ ಅವರದೇ ಆದ ಸರಳ ವ್ಯಕ್ತಿತ್ವದ ಮೂಲಕ ಮಾದರಿಯಾಗಿದ್ದಾರೆ ಎಂದರು.

ನಿವೃತ್ತ ಶಿಕ್ಷಕ ಬಿ.ಶ್ರೀನಿವಾಸ್ ಮಾತನಾಡಿ, ಶಿಕ್ಷಕರು ತಾವು ಕೆಲಸ ಮಾಡುವ ಸ್ಥಳದಲ್ಲಿ ಎಲ್ಲಾ ಶಿಕ್ಷಕರಲ್ಲಿ ಸಮನ್ವಯತೆ ಸಾಧಿಸಬೇಕು. ಎಸ್‌ಡಿಎಂಸಿ ಅಧ್ಯಕ್ಷರು ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಿದರೆ ಶಾಲೆಯ ಅಭಿವೃದ್ಧಿ ಜೊತೆಗೆ ನಮ್ಮದೇ ಆದ ಸೇವೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಮಾಡಲು ಸಾಧ್ಯವಾಗುತ್ತದೆ. ನಾನು ಕರ್ತವ್ಯ ನಿರ್ವಹಣೆ ಮಾಡಿದ ನಗರೇನಹಳ್ಳಿ, ಸೂಲಿಬೆಲೆ ಜನತಾ ಕಾಲೋನಿ, ಬೆಟ್ಟಹಳ್ಳಿ ಹಾಗೂ ಗಿಡ್ಡಪ್ಪನಹಳ್ಳಿ ಶಾಲೆಗಳಲ್ಲಿ ಎಲ್ಲರ ವಿಶ್ವಾಸದೊಂದಿಗೆ ಅಭಿವೃದ್ಧಿ ಜೊತೆಗೆ ಯಶಸ್ವಿ ಶಿಕ್ಷಕ ವೃತ್ತಿಯನ್ನು ಮಾಡಲು ಸಾಧ್ಯವಾಯಿತು ಎಂದರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಉಪಾಧ್ಯಕ್ಷ ಶ್ರೀನಿವಾಸಪ್ಪ, ತಾಲೂಕು ಅದ್ಯಕ್ಷ ಮುನಿಶಾಮಯ್ಯ, ಗೃಹ ನಿರ್ಮಾಣ ಸಂಘದ ಅಧ್ಯಕ್ಷ ನರೇಶ್, ನಿವೃತ್ತ ಪ್ರಾಂಶುಪಾಲ ಚನ್ನಪ್ಪ, ಬಿಆರ್‌ಸಿ ನಾಗರಾಜ್ ಶಿಕ್ಷಕ ವರ್ಗ ಹಾಜರಿದ್ದರು.

ಫೋಟೋ : 9 ಹೆಚ್‌ಎಸ್‌ಕೆ 1

ಹೊಸಕೋಟೆಯಲ್ಲಿ ಏರ್ಪಡಿಸಿದ್ದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ನಿವೃತ್ತಿ ಹೊಂದಿದ ಶಿಕ್ಷಕ ಬಿ.ಶ್ರೀನಿವಾಸ್‌ಗೆ ಗೌರವ ಸಲ್ಲಿಸಿ ಬೀಳ್ಕೊಡಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ