ಸಾಲಿಗ್ರಾಮದಲ್ಲಿ ಒಕ್ಕಲಿಗ ಮುಖಂಡರ ಸಭೆ

KannadaprabhaNewsNetwork |  
Published : Jan 06, 2025, 01:02 AM IST
68 | Kannada Prabha

ಸಾರಾಂಶ

ಸಂಘವನ್ನು ಎಲ್ಲರ ಸಹಮತ ಹಾಗೂ ಒಮ್ಮತದೊಂದಿಗೆ ಬಲಿಷ್ಠವಾಗಿ ಸಂಘಟಿಸುವ ಮೂಲಕ ಸಂಘದ ವತಿಯಿಂದ ಸಮುದಾಯದ ಜನರಿಗೆ ಅನುಕೂಲವಾಗುವಂತ ಕಾರ್ಯ

ಕನ್ನಡಪ್ರಭ ವಾರ್ತೆ ಸಾಲಿಗ್ರಾಮ

ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲೂಕು ಒಕ್ಕಲಿಗ ಸಮುದಾಯದ ಮುಖಂಡರ ಸಭೆ ನಡೆಯಿತು.

ತಾಲೂಕು ವ್ಯಾಪ್ತಿಯ ಮಿರ್ಲೆ, ಚುಂಚನಕಟ್ಟೆ ಹಾಗೂ ಸಾಲಿಗ್ರಾಮ ಹೋಬಳಿಗಳ ವ್ಯಾಪ್ತಿಯಲ್ಲಿನ ಎಲ್ಲಾ ಗ್ರಾಮಗಳ ಒಕ್ಕಲಿಗ ಸಮುದಾಯದ ಜನರನ್ನು ಒಟ್ಟುಗೂಡಿಸಿ ಸಾಲಿಗ್ರಾಮ ತಾಲೂಕು ಒಕ್ಕಲಿಗರ ಸಂಘವನ್ನು ನೂತನವಾಗಿ ಪ್ರಾರಂಭಿಸಲಾಗುವುದು. ಸಂಘವನ್ನು ಎಲ್ಲರ ಸಹಮತ ಹಾಗೂ ಒಮ್ಮತದೊಂದಿಗೆ ಬಲಿಷ್ಠವಾಗಿ ಸಂಘಟಿಸುವ ಮೂಲಕ ಸಂಘದ ವತಿಯಿಂದ ಸಮುದಾಯದ ಜನರಿಗೆ ಅನುಕೂಲವಾಗುವಂತ ಕಾರ್ಯ ರೂಪಿಸುವುದಾಗಿ ಮುಖಂಡರು ತಿಳಿಸಿದರು.

ಸಂಘದ ಸದಸ್ಯತ್ವ ಬಯಸುವವರು ಒಂದು ಸಾವಿರ ರೂ. ಹಣ ಪಾವತಿಸಿ ಸದಸ್ಯತ್ವ ಪಡೆಯಬೇಕು. ಸದಸ್ಯತ್ವ ಪಡೆಯ ಬಯಸುವವರು

ಎಸ್.ಆರ್. ಪ್ರಕಾಶ್ ಹಾಗೂ ನಾಗೇಶ್ ಅವರನ್ನು ಸಂಪರ್ಕಿಸಿ ಹಣ ಪಾವತಿಸಿ ಸದಸ್ಯತ್ವ ಪಡೆಯಬಹುದೆಂದು ತಿಳಿಸಿದ್ದಾರೆ.

ತಾಲೂಕಿನ ಒಕ್ಕಲಿಗ ಸಮುದಾಯದ ಎಲ್ಲಾ ಮುಖಂಡರು, ಜನಪ್ರತಿನಿಧಿಗಳು, ಸಂಘ- ಸಂಸ್ಥೆಯವರು ಸಂಘದ ಸದಸ್ಯತ್ವ ಪಡೆಯುವ ಮೂಲಕ ಸಂಘದ ಬೆಳವಣಿಗೆಗೆ ಸಹಕರಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಸಭೆಯಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷ ಕುಪ್ಪಹಳ್ಳಿ ಸೋಮಶೇಖರ್, ಗ್ರಾಪಂ ಮಾಜಿ ಅಧ್ಯಕ್ಷ ಎಸ್.ಆರ್. ಪ್ರಕಾಶ್, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ಕರುಣ್ ಕುಮಾರ್, ಪಾಪಣ್ಣ, ಅನಂತ,

ಎಸ್.ಜೆ. ಮಹೇಶ್, ತಾಲೂಕು ಕೃಷಿಕ ಸಮಾಜದ ನಿರ್ದೇಶಕ ಎಸ್.ಎ. ರವೀಶ್, ವಾಹನ ಚಾಲಕರ ಸಂಘದ ಅಧ್ಯಕ್ಷ ಮಂಜುನಾಥ್, ಗೂಡ್ಸ್ ಆಟೋ ಸಂಘದ ಅಧ್ಯಕ್ಷ ರಾಮು, ಮುಖಂಡರಾದ ತಿಮ್ಮೇಗೌಡ, ಅಪ್ಪಾಜಿಗೌಡ, ಗುರುಪ್ರಸಾದ್, ಜ್ಯೋತಿ ವೆಂಕಟೇಶ್, ಸಾ.ರಾ. ಸತೀಶ್, ಡೈರಿ ಮಹೇಶ್, ನಾಗೇಶ್, ಮಹದೇವ್, ಎಸ್.ಆರ್. ಗೋವಿಂದ, ಮಹೇಂದ್ರ, ಎಸ್.ಜೆ. ಗಿರೀಶ್ ಗೌಡ, ರವಿ, ಕುಮಾರ್, ಬಸವರಾಜು, ಸುರೇಶ, ರಾಜು, ಸೀನಣ್ಣ ಮೊದಲಾದವರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!