ಕನ್ನಡಪ್ರಭ ವಾರ್ತೆ ಮೂಡುಬಿದಿರೆ
ಸೋಮವಾರ ಪುತ್ತಿಗೆಯ ಸೋಮನಾಥೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಾರಂಭದ ಅಂಗವಾಗಿ ಜರಗಿದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದ ಅವರು ಶೀ ವಿಶ್ವನಾಥನ ಕ್ಷೇತ್ರದಿಂದ ತಂದಿದ್ದ ಪ್ರಸಾದವನ್ನು ಕುಲದೀಪ್ ಚೌಟರಿಗೆ ನೀಡಿ ಗೌರವಿಸಿದರು.
ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ ಆಧ್ಯಾತ್ಮ ಆಸ್ತಿಕತೆಯನ್ನು ಬೆಳೆಸಿದರೆ ಆಧುನಿಕ ಶಿಕ್ಷಣದಲ್ಲಿ ನಾಸ್ತಿಕತೆಗೆ ಅವಕಾಶವಿದೆ ಎಂದರು.ಇತಿಹಾಸ ತಜ್ಞ ಡಾ.ಪುಂಡಿಕಾಯ್ ಗಣಪಯ್ಯ ಭಟ್ ಧಾರ್ಮಿಕ ಉಪನ್ಯಾಸ ನೀಡಿದರು.ಪುತ್ತಿಗೆ ಹಾಗೂ ಆಸುಪಾಸಿನ ಗ್ರಾಮಸ್ಥರ ಶ್ರಮದಾನ ಮೂರು ಕೋಟಿ ರು.ಗೂ ಹೆಚ್ಚಿನ ಉಳಿತಾಯಕ್ಕೆ ಕಾರಣವಾಗಿದೆ ಎಂದು ಸುದರ್ಶನ ಎಂ. ಶ್ಲಾಘಿಸಿದರು.
ದೇವಳದ ಅಭಿವೃದ್ಧಿ ಕಾರ್ಯಗಳಲ್ಲಿ ಕೊಡುಗೆ ನೀಡಿದವರನ್ನು ಗೌರವಿಸಲಾಯಿತು.
ಬಳಿಕ ಭರತನಾಟ್ಯ, ನಾಟ್ಯ ವೈಭವ, ಗೀತಾ ಸಾಹಿತ್ಯ ಸಂಭ್ರಮ, ಸಂಗೀತ ಲಹರಿ, ಸಾಂಸ್ಕೃತಿಕ ಕಲಾಪಗಳು ಜರಗಿದವು. ದಿನಪೂರ್ತಿ ಭಜನಾ ಕಾರ್ಯಕ್ರಮಗಳು ಜರಗಿದವು.
ಸೋಮವಾರ ಪೂರ್ವಾಹ್ನ ವೈದಿಕ ಕಾರ್ಯಕ್ರಮದ ಅಂಗವಾಗಿ ದಿವಾಗಂಟೆ 7.49ರ ಮೀನ ಲಗ್ನ ಸುಮುಹೂರ್ತದಲ್ಲಿ ನೂತನ ದೇವಾಲಯದಲ್ಲಿ ಶ್ರೀ ಮಹಿಷಮರ್ದಿನಿ ಅಮ್ಮನವರಿಗೆ ಹೊಸದಾಗಿ ಪ್ರತ್ಯೇಕ ಗುಡಿಯ ಶಿಖರ ಪ್ರತಿಷ್ಠೆ, ಬಿಂಬ ಪ್ರತಿಷ್ಠೆ,ಮಹಾಗಣಪತಿ ಪ್ರತಿಷ್ಠೆ ಅಷ್ಟಬಂಧ ಲೇಪನ, ನಿದ್ರಾಕುಂಭಾಭಿಷೇಕ, ದೈವಗಳ ಪ್ರತಿಷ್ಠೆ, ಧ್ವಜ ಪ್ರತಿಷ್ಠೆ, ಕಲಶಾಭಿಷೇಕ, ಐಕ್ಯಮತ್ಯಭಾಗ್ಯಸೂಕ್ತ ಹೋಮ, ಪ್ರಾಯಶ್ಚಿತ್ತ ಹೋಮಗಳು ಜರಗಿದವು. ಸಂಜೆ ದಿಶಾಹೋಮಗಳು, ಬಲಿಶಿಲಾಪ್ರತಿಷ್ಠೆಗಳು, ಮಹಾಬಲಿಪೀಠ ಪ್ರತಿಷ್ಠೆ, ಕ್ಷೇತ್ರಪಾಲ ಪ್ರತಿಷ್ಠೆ, ದೈವಗಳಿಗೆ ಕಲಶಾಭಿಷೇಕ, ಪರ್ವಸೇವೆ ನಡೆಯಿತು.