ಗತಕಾಲದ ವೈಭವ ತಿಳಿಸುವ ವಸ್ತುಸಂಗ್ರಹಾಲಯ: ಗೋವರ್ಧನ ಪಿ.ಬಿ.

KannadaprabhaNewsNetwork | Published : May 20, 2024 1:40 AM

ಸಾರಾಂಶ

ಪುರಾತತ್ವ ವಸ್ತು ಸಂಗ್ರಹಾಲಯಗಳು ಗತಕಾಲದ ವೈಭವ ತಿಳಿಸುವುದಲ್ಲದೆ ಶೈಕ್ಷಣಿಕ ಹಾಗೂ ಸಂಶೋಧನೆಯ ಕೇಂದ್ರಗಳಾಗಿವೆ ಎಂದು ಬಾದಾಮಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಗೋವರ್ಧನ ಪಿ.ಬಿ. ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಪುರಾತತ್ವ ವಸ್ತು ಸಂಗ್ರಹಾಲಯಗಳು ಗತಕಾಲದ ವೈಭವ ತಿಳಿಸುವುದಲ್ಲದೆ ಶೈಕ್ಷಣಿಕ ಹಾಗೂ ಸಂಶೋಧನೆಯ ಕೇಂದ್ರಗಳಾಗಿವೆ ಎಂದು ಬಾದಾಮಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಗೋವರ್ಧನ ಪಿ.ಬಿ. ಅಭಿಪ್ರಾಯಪಟ್ಟರು.

ಬಾದಾಮಿಯ ಭಾರತೀಯ ಪುರಾತತ್ವ ಸರ್ವೇಕ್ಷಣೆ ಇಲಾಖೆಯ ಪುರಾತತ್ವ ಸಂಗ್ರಹಾಲಯದಲ್ಲಿ ಭಾನುವಾರ ಹಮ್ಮಿಕೊಂಡ ಅಂತಾರಾಷ್ಟ್ರೀಯ ವಸ್ತುಸಂಗ್ರಹಾಲಯ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿಶ್ವದ ಇತಿಹಾಸ ಕಟ್ಟಿಕೊಡುವಲ್ಲಿ ವಸ್ತು ಸಂಗ್ರಹಾಲಯಗಳು ಪ್ರಮುಖ ಪಾತ್ರವಹಿಸುತ್ತಿವೆ ಎಂದು ಹೇಳಿದರು.

ಮುಖ್ಯ ಅತಿಥಿಗಳಾದ ನಿವೃತ್ತ ಮುಖ್ಯಶಿಕ್ಷಕ ಎಸ್.ಎಂ. ಹಿರೇಮಠ ಮಾತಾನಾಡಿ ವಿದ್ಯಾರ್ಥಿಗಳು ಸ್ಮಾರಕಗಳ ವಸ್ತು ಸಂಗ್ರಹಾಲಯಗಳಿಗೆ ಭೇಟಿ ನೀಡಿ ಅವುಗಳ ಮಹತ್ವ ಅರಿತು ಮತ್ತಷ್ಟು ಸಂಶೋಧನೆ ಮಾಡಬೇಕೆಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಭಾರತೀಯ ಪುರಾತತ್ವ ಸರ್ವೇಕ್ಷಣೆ ಇಲಾಖೆಯ ಸಹಾಯಕ ಅಧೀಕ್ಷಕ ಡಾ.ದೇವರಾಜ ಸಾರಂಗಮಠ, ವಸ್ತು ಸಂಗ್ರಹಾಲಯಗಳ ಪ್ರಾಮುಖ್ಯತೆಯ ಮಹತ್ವ ಕುರಿತು ವಿದ್ಯಾರ್ಥಿಗಳಿಗೆ ಅರಿವುಮೂಡಿಸಲು ಪ್ರತಿವರ್ಷ ಮೇ 18ರಂದು ಅಂತಾರಾಷ್ಟ್ರೀಯ ವಸ್ತು ಸಂಗ್ರಹಾಲಯ ದಿನಾಚರಣೆ ಆಚರಿಸಲಾಗುತ್ತದೆ. ಇದು ಗತಕಾಲದ ಇತಿಹಾಸ ಪ್ರತಿಬಿಂಬಸುವಲ್ಲಿ ಮಹತ್ವದ ಪ್ರಾತವಹಿಸುತ್ತವೆ. ಇವು ಅಂದಿನ ಕಾಲದ ರಾಜಕೀಯ, ಸಾಮಾಜಿಕ, ಆರ್ಥಿಕ, ಧಾರ್ಮಿಕ, ವಿಚಾರಗಳಿಗೆ ಮತ್ತು ಮಹತ್ವದ ಘಟನೆಗಳಿಗೆ ಸಾಕ್ಷಿಯಾಗಿ ನಿಂತಿವೆ ಎಂದರು.

ವಸ್ತು ಸಂಗ್ರಹಾಲಯಗಳು ಸಂಶೋಧನಗೆ ನೈಜತೆಯ ಅಂಶಗಳನ್ನು ಒದಗಿಸಿಕೊಡುತ್ತವೆ. ಹಾಗಾಗಿ ಇಲ್ಲಿ ಸಂಶೋಧಕರು ಪೂರ್ವಗ್ರಹಪೀಡಿತನಾಗದೆ ಬರವಣಿಗೆಯಲ್ಲಿ ತೊಡಗುವುದಿಲ್ಲ ಮತ್ತು ಸಂಶೋಧಕರು ನೈಜತೆ ಹಾಗೂ ವಸ್ತುಸ್ಥಿತಿ ಅಳವಡಿಸಿಕೊಳ್ಳುತ್ತಾರೆ ಎಂದರು. ವಸ್ತು ಸಂಗ್ರಹಾಲಯಗಳಲ್ಲಿ ಪ್ರಾಚ್ಯವಸ್ತು ಪ್ರದರ್ಶನಗಳ ವಿಧಾನಗಳ ಕುರಿತು ವಿವರಿಸಿದರು. ವಸ್ತು ಸಂಗ್ರಹಾಲಯಗಳಲ್ಲಿರುವ ಪ್ರಾಚ್ಯವಸ್ತುಗಳ ಅವಶೇಷಗಳ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣೆ ಇಲಾಖೆಯ ಪುರಾತತ್ವ ಸಂಗ್ರಹಾಲಯದ ಸಿಬ್ಬಂದಿ ಸೇರಿದಂತೆ ಬಾದಾಮಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Share this article