ಕನ್ನಡಪ್ರಭ ವಾರ್ತೆ ಹುಕ್ಕೇರಿ
ತಾಲೂಕಿನ ಸಾರಾಪೂರ ಗ್ರಾಮದಲ್ಲಿ ಬುಧವಾರ ಆಯೋಜಿಸಿದ ಶ್ರೀ ಶಾಂತಿನಾಥ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ 10ನೇ ವಾರ್ಷಿಕ ಸರ್ವ ಸಾಧಾರಣ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಅನೇಕರು ಸಹಕಾರ ಕ್ಷೇತ್ರವನ್ನು ತಮ್ಮ ಬದುಕಿನ ಗುರಿಯಾಗಿಸಿಕೊಂಡು ಅಚಲವಾಗಿ ನಡೆದವರಿದ್ದಾರೆ. ಸಹಕಾರದ ತತ್ವವನ್ನು ಕೇವಲ ಪುಸ್ತಕದಲ್ಲಿ ಉಳಿಸದೆ ಕಾರ್ಯರೂಪಕ್ಕೆ ತಂದವರಿದ್ದಾರೆ ಎಂದರು.ಸಹಕಾರಿ ತತ್ವದಡಿ ವಿದ್ಯುತ್ ಪೂರೈಸುತ್ತಿರುವ ರಾಜ್ಯದ ಏಕೈಕ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘ, ವೈದ್ಯಕೀಯ ಸೇವೆಲ್ಲಿರುವ ಘಟಪ್ರಭಾ ಜೆ.ಜಿ.ಸಹಕಾರ ಆಸ್ಪತ್ರೆ, ಕ್ರೀಡಾಕೂಟಕ್ಕೆ ಖ್ಯಾತಿವೆತ್ತ ಚಂದರಗಿ ಕ್ರೀಡಾ ಶಾಲೆ ಹೀಗೆ ಬೆಳಗಾವಿ ಜಿಲ್ಲೆಯ ಅನೇಕ ಸಂಸ್ಥೆಗಳು ಸಹಕಾರ ಕ್ಷೇತ್ರಕ್ಕೆ ತಮ್ಮದೇಯಾದ ವಿಶಿಷ್ಟ ಕೊಡುಗೆ ಸಲ್ಲಿಸಿವೆ. ಇಲ್ಲಿನ ಸಹಕಾರಿಗಳ ಸಮರ್ಪಣಾ ಮನೋಭಾವ ಸಹಕಾರ ರಂಗದಲ್ಲಿ ನವ ಮನ್ವಂತರಕ್ಕೆ ನಾಂದಿ ಹಾಡಿದೆ ಎಂದರು.ಮುಖ್ಯ ಅತಿಥಿ ಯುವ ಮುಖಂಡ ಪವನ ಕತ್ತಿ ಮಾತನಾಡಿ, ಸಹಕಾರವಿಲ್ಲದೆ ಬದುಕಿಲ್ಲ, ಸಹಕಾರವಿಲ್ಲದೆ ಪ್ರಗತಿಯಿಲ್ಲ ಎಂಬ ನಂಬಿಕೆಯೊಂದಿಗೆ ಈ ಶಾಂತಿನಾಥ ಕ್ರೆಡಿಟ್ ಸೌಹಾರ್ದ ಸಹಕಾರಿ ಬ್ಯಾಂಕ್ ದಶಕ ಪೂರೈಸಿ ಇತರೆ ಸಂಸ್ಥೆಗಳಿಗೆ ಮಾದರಿಯಾಗಿದೆ. ಈ ಭಾಗದ ರೈತರು, ಕೃಷಿ ಕಾರ್ಮಿಕರು, ಕೆಳ ಮತ್ತು ಮಧ್ಯಮ ವರ್ಗದವರನ್ನು ಒಳಗೊಂಡಂತೆ ಸಮಾಜದ ಎಲ್ಲ ಸಮುದಾಯಗಳ ನೋವು-ನಲಿವುಗಳಿಗೆ ಸ್ಪಂದಿಸುವ ಮೂಲಕ ಕಲ್ಪವೃಕ್ಷವಾಗಿ ನಿಂತಿದೆ. ಇದರೊಂದಿಗೆ ಗ್ರಾಹಕ-ಸದಸ್ಯರ ಜೀವನಾಡಿಯಾಗಿ ಹೊರಹೊಮ್ಮಿದೆ ಎಂದರು.ಬ್ಯಾಂಕಿನ ಸಂಸ್ಥಾಪಕರೂ ಆದ ಪ್ರಧಾನ ವ್ಯವಸ್ಥಾಪಕ ಸುರೇಶ ಹೆಬ್ಬಾಳ ಮಾತನಾಡಿ, ಸಂಸ್ಥೆಯು 1394 ಸದಸ್ಯರನ್ನು ಹೊಂದಿದ್ದು, ಒಟ್ಟು ₹94.53 ಕೋಟಿ ವಹಿವಾಟು ನಡೆಸಿದೆ. ₹13.41 ಲಕ್ಷ ಶೇರು ಬಂಡವಾಳ ಹೊಂದಿದ್ದು, ₹1.66 ಕೋಟಿ ಕಾಯ್ದಿಟ್ಟ ಹಾಗೂ ಇತರೆ ನಿಧಿಗಳಿವೆ. ₹17.30 ಕೋಟಿ ಠೇವು ಸಂಗ್ರಹಿಸಿದ್ದು, ₹15.60 ಕೋಟಿ ಸಾಲ ವಿತರಿಸಲಾಗಿದೆ. ₹2.43 ಕೋಟಿ ಗುಂತಾವಣೆಯಿದ್ದು, ₹21.51ಕೋಟಿ ದುಡಿಯುವ ಬಂಡವಾಳವಿದೆ. ಕಳೆದ 2025-26ನೇ ಸಾಲಿನ ಆರ್ಥಿಕ ವರ್ಷದಲ್ಲಿ ಒಟ್ಟು ₹44.84 ಲಕ್ಷ ನಿವ್ಹಳ ಲಾಭ ಗಳಿಸಿದೆ ಎಂದು ತಿಳಿಸಿದರು.ಬೆಲ್ಲದ ಬಾಗೇವಾಡಿ ಮಹಾಂತೇಶ್ವರ ವಿರಕ್ತಮಠದ ಶಿವಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಂಸ್ಥೆಯ ಅಧ್ಯಕ್ಷ ವೃಷಭ ಮುನ್ನೋಳಿ ಅಧ್ಯಕ್ಷತೆ ವಹಿಸಿದ್ದರು. ಘಟಪ್ರಭಾ-ಮಲಪ್ರಭಾ ಪಿಜಿ ಸನ್ಮತಿಸಾಗರ ಸಹಕಾರಿ ಸಂಘದ ಅಧ್ಯಕ್ಷ ಮಹೇಂದ್ರ ಖೆಮಲಾಪೂರೆ, ಆಂತರಿಕ ಲೆಕ್ಕ ಪರಿಶೋಧಕ ಶಾಂತಿನಾಥ ನಾಯಿಕ, ಮಸರಗುಪ್ಪಿ ಜೈನ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಬಾಳಪ್ಪ ಕಂಠಿ, ಪ್ರತಿಷ್ಠಾಚಾರ್ಯ ಸಿದ್ದಪ್ಪ ಉಪಾಧ್ಯೆ, ನ್ಯಾಯವಾದಿ ಬಸವರಾಜ ಜಿನರಾಳೆ, ನಿವೃತ್ತ ಶಿಕ್ಷಕ ಎಸ್.ಬಿ.ಮುನ್ನೋಳಿ, ಎಸ್.ಎಂ.ಪಾಟೀಲ, ಸುರೇಶ ಜಿನರಾಳಿ, ಸತ್ಯಪ್ಪಾ ಹಾಲಟ್ಟಿ, ಪುಟ್ಟು ಚೌಗಲಾ, ಸಂತೋಷ ಖೆಮಲಾಪೂರೆ ಮತ್ತಿತರರು ಉಪಸ್ಥಿತರಿದ್ದರು.ಪ್ರಧಾನ ವ್ಯವಸ್ಥಾಪಕ ಸುರೇಶ ಹೆಬ್ಬಾಳ ಸ್ವಾಗತಿಸಿದರು. ಅನಿಲ ಹಂಜಿ, ಉಮೇಶ ಪಾಟೀಲ ಜಂಟಿಯಾಗಿ ನಿರೂಪಿಸಿದರು. ಬಾಹುಬಲಿ ಬೆಳವಿ ವಂದಿಸಿದರು. ಸಿದ್ದಪ್ಪ ಹಟ್ಟಿ ವಾರ್ಷಿಕ ಲಾಭ ಹಾನಿ ಪತ್ರಿಕೆ ಓದಿದರು. ಸಂತೋಷಕುಮಾರ ಚೌಗಲಾ 10ನೇ ವಾರ್ಷಿಕ ಅಡಾವೆ ಪತ್ರಿಕೆ ಓದಿದರು. ಪ್ರಗತಿಪರ ರೈತರು, ನಿವೃತ್ತ ಯೋಧರನ್ನು ಇದೇ ವೇಳೆ ಸನ್ಮಾನಿಸಲಾಯಿತು. ಬ್ಯಾಂಕಿನ ಆಡಳಿತ ಮಂಡಳಿ ಹಾಗೂ ಸಲಹಾ ಸಮಿತಿ ಸರ್ವ ಸದಸ್ಯರು ಉಪಸ್ಥಿತರಿದ್ದರು.