ಕನ್ನಡಪ್ರಭ ವಾರ್ತೆ ಕಾಗವಾಡ
ತಾಲೂಕಿನ ಜುಗೂಳ ಗ್ರಾಮದ ಶ್ರೀ 1008 ಆದಿನಾಥ ವಿವಿಧ ಉದ್ದೇಶಗಳ ಸೌಹಾರ್ದ ಸಹಕಾರಿ ಸಂಘದ ನೂತನ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, 15 ವರ್ಷಗಳ ಹಿಂದೆ ಬಾಡಿಗೆ ಕಟ್ಟದಲ್ಲಿ ಸ್ಥಾಪನೆಗೊಂಡು ಅಲ್ಪಾವಧಿಯಲ್ಲಿಯೇ ಪ್ರಗತಿಪಥದಲ್ಲಿ ಸಾಗಿ, ಸ್ವಂತ ಕಟ್ಟಡಕ್ಕೆ ಸ್ಥಳಾಂತರಗೊಳ್ಳುತ್ತಿರುವ ಜುಗೂಳ ಗ್ರಾಮದ ಶ್ರೀ 1008 ಆದಿನಾಥ ವಿವಿಧ ಉದ್ದೇಶಗಳ ಸೌಹಾರ್ದ ಸಹಕಾರಿಯು ಸಹಕಾರ ತತ್ವದೊಂದಿಗೆ ಈ ಭಾಗದ ರೈತರ ಮತ್ತು ಸಾರ್ವಜನಿಕರ ಆರ್ಥಿಕ ಪ್ರಗತಿಗೆ ಶ್ರಮಿಸುತ್ತಿದೆ. ಯುವಕರು ಸೇರಿ ಸ್ಥಾಪಿಸಿರುವ ಈ ಸಹಕಾರಿಯು ಇನ್ನಷ್ಟು ಪ್ರಗತಿ ಸಾಧಿಸಿ, ಈ ಭಾಗದ ರೈತರ ಏಳಿಗೆಗೆ ಶ್ರಮಿಸಲಿ ಎಂದು ಶುಭಹಾರೈಸಿದರು.ಮಾಜಿ ಸಚಿವ ಶ್ರೀಮಂತ ಪಾಟೀಲ ನೂತನ ಕಟ್ಟಡದ ಉದ್ಘಾಟನೆ ನೆರವೇರಿಸಿ ಮಾತನಾಡಿ, ಸಹಕಾರಿಯ ಅಧ್ಯಕ್ಷ ಅರುಣ ಗಣೇಶವಾಡಿ ಅವರ ಪರಿಶ್ರಮ, ಆಡಳಿತ ಮಂಡಳಿಯ ಪ್ರಾಮಾಣಿಕ ಸಹಕಾರದೊಂದಿಗೆ ಸಂಸ್ಥೆ ಪ್ರಗತಿಪಥದಲ್ಲಿ ಸಾಗುತ್ತಿದೆ. ಇದೇ ರೀತಿಯಾಗಿ ಸಂಘವು ಇನ್ನಷ್ಟು ಪ್ರಗತಿ ಸಾಧಿಸಲಿ ಎಂದು ಹಾರೈಸಿದರು.ನಾಂದಣಿ ಜೈನ ಮಠದ ಸ್ವಸ್ತಿಶ್ರೀ ಜಿನಸೇನ ಭಟ್ಟಾರಕ ಪಟ್ಟಾಚಾರ್ಯರರು, ರಾಜಸ್ಥಾನ-ತಿಜಾರಾ ಜೈನ ಮಠದ ಸ್ವಸ್ತಿಶ್ರೀ ಸೌರಭಸೇನ ಭಟ್ಟಾರಕ ಪಟ್ಟಾಚಾರ್ಯರರು, ಕಾಗವಾಡ ಗುರುದೇವಾಶ್ರಮದ ಪಪೂ ಯತೀಶ್ವರಾನಂದ ಶ್ರೀಗಳು ಸಾನ್ನಿಧ್ಯ ವಹಿಸಿ, ಆಶೀರ್ವಚನ ನೀಡಿದರು.ಶ್ರೀಗಳು, ಗಣ್ಯರು ದೀಪ ಬೆಳಗಿಸಿ, ಸಮಾರಂಭಕ್ಕೆ ಚಾಲನೆ ನೀಡಿದರು. ಗಣ್ಯರನ್ನು ಸನ್ಮಾನಿಸಲಾಯಿತು. ಸಹಕಾರಿಯ ಅಧ್ಯಕ್ಷ ಅರುಣ ಗಣೇಶವಾಡಿ ಪ್ರಾಸ್ಥಾವಿಕವಾಗಿ ಮಾತನಾಡಿ, ಸಹಕಾರಿಯ ಪ್ರಗತಿ ನೋಟದ ಬಗ್ಗೆ ವಿವರಿಸಿದರು.ಈ ವೇಳೆ ನಿಪ್ಪಾಣಿ ಕ್ಷೇತ್ರದ ಯುವ ಧುರೀಣ ಉತ್ತಮ ಪಾಟೀಲ, ಮಾಜಿ ಶಾಸಕ ಕಲ್ಲಪ್ಪಣ್ಣ ಮಗ್ಗೆನ್ನವರ, ಬೆಳಗಾವಿ ಸಹಕಾರಿ ಸಂಘಗಳ ಉಪನಿಬಂಧಕ ರವೀಂದ್ರ ಪಾಟೀಲ, ಬೆಳಗಾವಿ ತಹಸೀಲ್ದಾರ್ ಹಣಮಂತ ಶಿರಹಟ್ಟಿ, ಚಿಕ್ಕೋಡಿ ಸಿಬಿಕೆಎಸ್‌ಎಸ್ ಕಾರ್ಖಾನೆಯ ಅಧ್ಯಕ್ಷ ಮಲ್ಲಿಕಾರ್ಜುನ ಕೋರೆ, ನಿರ್ದೇಶಕ ಅಣ್ಣಾಸಾಬ ಪಾಟೀಲ, ಮುಖಂಡರಾದ ಅಭಯಕುಮಾರ ಅಕಿವಾಟೆ, ಧೂಳಗೌಡ ಪಾಟೀಲ, ಮೊಮ್ಮಣ್ಣ ಚೌಗಲಾ, ಜ್ಯೋತಿಕುಮಾರ ಪಾಟೀಲ, ಸುಧಾಕರ ಗಣೇಶವಾಡಿ, ಅಜೀತ ನಾಂದ್ರೆ, ಅಭಯ ಪಾಟೀಲ, ರಾವಸಾಬ ನಾಯಿಕ, ಬಾಪಾ ಪಾಟೀಲ, ಅನೀಲ ಸುಂಕೆ, ಶಿರಗುಪ್ಪಿ ಶುಗರ್ಸನ ಎಂಡಿ ಅರುಣ ಫರಾಂಡೆ, ಅರಿಹಂತ ಶುಗರ್ಸರ ಸಿಇಒ ಮಹಾವೀರ ಪಾಟೀಲ, ಸಿಎ ಗುಂಡು ಜುಗಳೆ, ಸಹಕಾರಿಯ ಉಪಾಧ್ಯಕ್ಷ ಅಪ್ಪಾಸಾಬ ಅಲಾಸೆ ಸೇರಿದಂತೆ ಆಡಳಿತ ಮಂಡಳಿಯ ಸದಸ್ಯರು, ಸಿಬ್ಬಂದಿ ವರ್ಗದವರು, ಗ್ರಾಮಸ್ಥರು ಉಪಸ್ಥಿತರಿದ್ದರು.