ಕೇರ್‌ಟೇಕರ್‌ ಇಲ್ಲದ ಕೂಸಿನ ಮನೆ

KannadaprabhaNewsNetwork |  
Published : Nov 14, 2024, 12:50 AM IST
13ಕೆಬಿಪಿಟಿ.1.ಬಂಗಾರಪೇಟೆ ತಾಲೂಕಿನ ಚಿಕ್ಕಅಂಕಂಡಹಳ್ಳಿ ಗ್ರಾಮದಲ್ಲಿರುವ ಕೂಸಿನ ಮನೆಗೆ ಸಿಡಿಪಿ ಮುನಿರಾಜು ಬೇಟಿ ನೀಡಿ ಪರಿಶೀಲನೆ ಮಾಡಿದರು. | Kannada Prabha

ಸಾರಾಂಶ

ಬಂಗಾರಪೇಟೆ ತಾಲೂಕಿನಲ್ಲಿ ೨೧ ಗ್ರಾಮ ಪಂಚಾಯಿತಿಗಳಿದ್ದು, ಎಲ್ಲಾ ಗ್ರಾಮ ಪಂಚಾಯಿತಿ ಕೇಂದ್ರಗಳಲ್ಲಿ ನರೇಗಾ ಯೋಜನೆಯ ಕೂಲಿ ಕಾರ್ಮಿಕರ ಮಕ್ಕಳನ್ನು ಆರೈಕೆ ಮಾಡುವ ಸಲುವಾಗಿ ಕೂಸಿನ ಮನೆಗಳನ್ನು ತೆರೆಯಲಾಗಿದೆ. ಆದರೆ ಒಂದೆರಡು ಕೇಂದ್ರಗಳು ಮಾತ್ರ ಕಾರ್ಯ ನಿರ್ವಹಿಸುತ್ತಿವೆ.

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ನರೇಗಾ ಯೋಜನೆಯ ಕೂಲಿ ಕಾರ್ಮಿಕರ ಮಕ್ಕಳಿಗಾಗಿ ನಿರ್ಮಾಣವಾಗಿರುವ ತಾಲ್ಲೂಕಿನ ಹಲವು ಕೂಸಿನ ಮನೆಗಳಿಗೆ ಸಿಡಿಪಿಒ ಮುನಿರಾಜು ಮತ್ತಿತರೆ ಅಧಿಕಾರಿಗಳು ಬೇಟಿ ನೀಡಿ ಕೂಸಿನ ಮನೆ ಸಮರ್ಪಕವಾಗಿ ಕಾರ್ಯನಿರ್ವಣೆ ಮಾಡುತ್ತಿದೆಯೇ ಇಲ್ಲವೆ ಎಂಬುದನ್ನು ಪರಿಶೀಲನೆ ನಡೆಸಿ ಮಾಹಿತಿ ಪಡೆದರು.ಈ ವೇಳೆ ಮಾತನಾಡಿದ ಅವರು, ತಾಲೂಕಿನಲ್ಲಿ ೨೧ ಗ್ರಾಮ ಪಂಚಾಯಿತಿಗಳಿದ್ದು, ಎಲ್ಲಾ ಗ್ರಾಮ ಪಂಚಾಯಿತಿ ಕೇಂದ್ರಗಳಲ್ಲಿ ನರೇಗಾ ಯೋಜನೆಯ ಕೂಲಿ ಕಾರ್ಮಿಕರ ಮಕ್ಕಳನ್ನು ಆರೈಕೆ ಮಾಡುವ ಸಲುವಾಗಿ ಕೂಸಿನ ಮನೆಗಳನ್ನು ತೆರೆಯಲಾಗಿದೆ. ಆದರೆ ಒಂದೆರಡು ಕೇಂದ್ರಗಳು ಮಾತ್ರ ಕಾರ್ಯ ನಿರ್ವಹಿಸುತ್ತಿವೆ ಎಂದರು.

ಕೇರ್‌ಟೇಕರ್‌ ನೇಮಕ ಮಾಡಿಲ್ಲ

ಚಿಕ್ಕಅಂಕಂಡಹಳ್ಳಿ, ಗುಲ್ಲಹಳ್ಳಿ ಮತ್ತು ಆಲಂಬಾಡಿ ಜ್ಯೋತೆನಹಳ್ಳಿ ಗ್ರಾಮದ ಕೇಂದ್ರಗಳಿಗೆ ಭೇಟಿ ನೀಡಿದ್ದು, ಚಿಕ್ಕ ಅಂಕಂಡಹಳ್ಳಿ ಕೇಂದ್ರ ಒಂದು ಮಾತ್ರ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ ಉಳಿದ ಎರಡೂ ಕೇಂದ್ರಗಳು ಕಾರ್ಯನಿರ್ವಹಿಸುತ್ತಿಲ್ಲ. ಅಧಿಕಾರಿಗಳನ್ನು ಕೇಳಿದರೆ ಕೇಂದ್ರದಲ್ಲಿ ನಿಯೋಜನೆ ಮಾಡಿರುವಂತಹ ಕೇರ್ ಟೇಕರ್‌ಗಳು ನೂರು ದಿನ ಪೂರೈಸಿದ ನಂತರ ಬೇರೊಬ್ಬ ಕೇರ್ ಟೇಕರ್‌ಗೆ ತರಭೇತಿ ನೀಡಿ ನೇಮಕ ಮಾಡಬೇಕು ಎಂಬುದು ನಿಯಮ. ಆದರೆ ನೂರು ದಿನಗಳು ಪೂರೈಸಿದ ನಂತರ ಬೇರೊಬ್ಬ ಕೇರ್ ಟೇಕರ್ ಅನ್ನು ನೇಮಕ ಮಾಡುತ್ತಿಲ್ಲ ಎಂಬ ಉತ್ತರ ನೀಡುತ್ತಿದ್ದಾರೆ ಎಂದರು.

ಕೂಸಿನ ಮನೆ ತಾತ್ಕಾಲಿಕ ಬಂದ್‌

ಈ ಕಾರಣದಿಂದಾಗಿ ಕೂಸಿನ ಮನೆ ಕಾರ್ಯನಿರ್ವಹಿಸುತ್ತಿಲ್ಲ. ಕೂಸಿನ ಮನೆ ಕಾರ್ಯ ನಿರ್ವಹಿಸುತ್ತಿದ್ದಾಗ ಕೇಂದ್ರಕ್ಕೆ ಏಳೆಂಟು ಮಕ್ಕಳು ಬರುತ್ತಿದ್ದರು. ಈಗ ತಾತ್ಕಾಲಿಕವಾಗಿ ಕೇಂದ್ರವನ್ನು ಮುಚ್ಚಿರುವ ಕಾರಣ ತಾ.ಪಂ ಇಒರವರಿಗೆ ಮಾಹಿತಿ ನೀಡಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದರು.ಕೂಸಿನ ಮನೆಗಳು ಕಾರ್ಯವನ್ನು ಸ್ಥಗಿತಗೊಳಿಸಲಾಗಿದೆ ಎಂಬ ಸಾರ್ವಜನಿಕರ ಆರೋಪಗಳ ಹಿನ್ನೆಲೆಯಲ್ಲಿ ತಾ.ಪಂ ಇಒ ರವಿಕುಮಾರ್ ಪಿಡಿಒಗಳಿಗೆ ಕೂಸಿನ ಮನೆಗಳಿಗೆ ತೆರಳಿ ವರದಿ ನೀಡುವಂತೆ ಸೂಚಿಸಿದ್ದರಿಂದ ಅವರು ಭೇಟಿ ನೀಡಿ ಪರಿಶೀಲನೆ ಮಾಡಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ