ಕನ್ನಡಪ್ರಭ ವಾರ್ತೆ ದಾವಣಗೆರೆ
ಪರಿಷತ್‌ನಿಂದ ರಾಜ್ಯ, ಪರ ರಾಜ್ಯಗಳ ಕಲಾವಿದರ ಚಿತ್ರಕಲೆ, ಕಲಾಕೃತಿಗಳ ಪ್ರದರ್ಶನದ ಜೊತೆಗೆ ಮಾರಾಟಕ್ಕೂ ಅವಕಾಶ ಮಾಡಿಕೊಟ್ಟಿದ್ದು, ಬೆಂಗಳೂರಿನ ಚಿತ್ರಸಂತೆ ಮಾದರಿಯಲ್ಲಿ ಜಿಲ್ಲಾ ಕೇಂದ್ರದ ಚಿತ್ರಸಂತೆ ಎಲ್ಲರ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು. ಚಿತ್ರಸಂತೆಯಲ್ಲಿ 101 ಮಳಿಗೆ ಸ್ಥಾಪಿಸಲಾಗಿತ್ತು. ಹೊಳಲ್ಕೆರೆ ಸ್ನೇಹ ಪಬ್ಲಿಕ್ ಶಾಲೆಯ 5ರಿಂದ 8ನೇ ತರಗತಿ ವಿದ್ಯಾರ್ಥಿಗಳು ತಾವು ರಚಿಸಿದ ಕ್ಲೇ, ಪೋಸ್ಟರ್ ಕಲರ್, ಅಮೂರ್ತ ಚಿತ್ರಕಲೆ, ಪೆನ್ಸಿಲ್ ಸ್ಕೆಚ್ ಚಿತ್ರಗಳ, ಗದಗ್‌ನ ವಿಜಯ ಕಲಾ ಮಂದಿರದ ವಿದ್ಯಾರ್ಥಿಗಳು ಸಾಂಪ್ರದಾಯಿಕ ಕಲೆ, ಪೆನ್ ವರ್ಕ್, ಮಂಡಲ್ ವರ್ಕ್, ಕ್ರಿಯೇಟಿವ್ ವರ್ಕ್, ರಾಜಾಸ್ಥಾನದಿಂದ ಬಂದ ರಿಯಾಜ್ ಮೆಟಲ್‌ನಿಂದ ತಯಾರಿಸಿದ ಅಲಂಕಾರಿಕ ಕಲಾಕೃತಿ ಪ್ರದರ್ಶಿಸಿದರು.
ಒಡಿಶಾದ ಕಲಾವಿದ ಸನಾತನ್ ನಾಯಕ್ ಪಾಲ್ಮ್ ಟ್ರೀ ಎನ್‌ಗ್ರೇವಿಂಗ್‌ನಿಂದ ಟಾಸರ್ ಪೇಯಿಂಟ್‌ನಿಂದ ಪಟ್ಟಾ ಚಿತ್ರಗಳ ತಯಾರಿಸಿ ಅದರಲ್ಲಿ ಶ್ರೀಕೃಷ್ಣ, ದುರ್ಗಾಮಾತೆ, ಗಣೇಶ ಸೇರಿ ಅನೇಕ ದೇವರ ಚಿತ್ರ ಬಿಡಿಸಿ, ಪ್ರದರ್ಶಿಸಿದರು. ಕೊಡಗಿನ ರಾಜೇಶ್ವರಿ ಮಣ್ಣಿನ ಆಭರಣ, ಹರಿಹರದ ಅಶ್ವಥ್ ಹಳೆಯ ರದ್ದಿ ಪೇಪರ್‌ನಿಂದ ದೀಪ, ಕಮಲ, ಕಳಸ, ಪಾಟ್, ಬಾಲ್, ಕೇರಳದ ನಟ್ಟಪಟ್ಟಂ ಕಲೆ, ಅಲಂಕಾರಿಕ ವಿವಿಧ ರೀತಿ ಕಲಾಕೃತಿ, ಬೆಂಗಳೂರಿನ ಕಲಾವಿದ ಎಲ್. ರವಿ ತಂಜಾವೂರು ಪೇಂಟಿಂಗ್‌ನಲ್ಲಿ ನಂದಿ, ಗಣೇಶ, ಪಂಚಮುಖಿ ಗಣಪತಿ, ತಾಮ್ರದ ಗೊಂಬೆಗಳ ತಯಾರಿಸಿದರು.ಬ್ಯಾಡಗಿಯ ಕಲಾವಿದ ಹರೀಶ ಮಾಳಪ್ಪ ಪೈಬರ್‌ನಿಂದ ಮಾಡಿದ ಕಲಾಕೃತಿಗಳು, ಬೆಂಗಳೂರಿನ ಮಂಜುನಾಥ ಕಲಾಲ್ ಒಡಿಶಾದಲ್ಲಿ ಬೆಳೆಯುವ ಮರದಿಂದ ವಿವಿಧ ಬಗೆಯ ಹೂವು, ಅಲಂಕಾರಿಕ ವಸ್ತುಗಳ ಪ್ರದರ್ಶಿಸಿದರು. ಬೆಂಗಳೂರಿನ ಕಲಾವಿದ ರವೀಶ್ ಒಣ ತೆಂಗಿನಕಾಯಿಯಲ್ಲಿ ಗಣೇಶ ಮೂರ್ತಿ ರಚಿಸಿದ್ದರು. ಕಾರಿಗನೂರಿನ ಮೊರಾರ್ಜಿ ದೇಸಾಯಿ ಶಾಲೆಯಲ್ಲಿ ಚಿತ್ರಕಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಜಿ.ಎಸ್.ಕೃಷ್ಣ ಹರಿಹರ ಅಕ್ರಾಲಿಕ್ ಪೇಂಟಿಂಗ್, ನೈಫ್ ಪೇಯಿಂಗ್‌ನಿಂದ ಕ್ಯಾನ್ವಸ್ ಮೇಲೆ ಮಹಾರಾಷ್ಟ್ರದ ಎಲೆಫೆಂಟ್ ಕೇವ್‌ನಲ್ಲಿರುವ ಶಿಲ್ಪಕಲೆ, ಬೇಲೂರು ಹಳೇ ಬೀಡು, ಸೋಮನಾಥಪುರದಲ್ಲಿರುವ ಹಳೆಯ ಕಾಲದ ದೇವಾಲಯ ಕೆತ್ತನೆ ನೈಫ್‌ಕಲೆಯಿಂದ ಚಿತ್ರಿಸಿರುವುದು. ಸಾಲುಮರದ ತಿಮ್ಮಕ್ಕನವರ ಚಿತ್ರ ರಚಿಸಿ ಅವರಿಗೆ ನೆನಪಿನ ಕಾಣಿಕೆಯಾಗಿ ನೀಡಿದ್ದೇನೆ ಎಂದು ಹೇಳಿದರು.
ಸ್ಥಳೀಯ ಕಲಾವಿದರಿಂದ ವಿವಿಧ ಚಿತ್ರಗಳ ರಚನೆ