ಭಗವಂತನ ಪ್ರಾರ್ಥನೆಯಿಂದ ನೆಮ್ಮದಿ ಜೀವನ ಸಾಧ್ಯ: ಗುಣನಾಥ ಶ್ರೀ

KannadaprabhaNewsNetwork | Published : Apr 18, 2025 12:45 AM

ಸಾರಾಂಶ

ಚಿಕ್ಕಮಗಳೂರು, ಸಾಂಸರಿಕ ಕಲಹ ಹಾಗೂ ಮಾನಸಿಕ ಖಿನ್ನತೆಯಿಂದ ಹೊರಬರಲು ಭಗವಂತನ ಸನ್ನಿಧಾನದಲ್ಲಿ ಪ್ರಾರ್ಥಿಸಿದರೆ ಮನಸ್ಸು ಹಗುರವಾಗಿ ನೆಮ್ಮದಿಯ ಜೀವನ ಲಭಿಸುತ್ತದೆ ಎಂ ದು ಆದಿಚುಂಚನಗಿರಿ ಶೃಂಗೇರಿ ಶಾಖಾಮಠದ ಶ್ರೀ ಗುಣನಾಥ ಸ್ವಾಮೀಜಿ ಹೇಳಿ ದರು.

ವಸ್ತಾರೆ ಹೋಬಳಿ ತೊಂಡವಳ್ಳಿ ಗ್ರಾಮದ ಶ್ರೀ ಆಂಜನೇಯಸ್ವಾಮಿ ದೇವಾಲಯದ ಜೀರ್ಣೋದ್ದಾರ,

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಸಾಂಸರಿಕ ಕಲಹ ಹಾಗೂ ಮಾನಸಿಕ ಖಿನ್ನತೆಯಿಂದ ಹೊರಬರಲು ಭಗವಂತನ ಸನ್ನಿಧಾನದಲ್ಲಿ ಪ್ರಾರ್ಥಿಸಿದರೆ ಮನಸ್ಸು ಹಗುರವಾಗಿ ನೆಮ್ಮದಿಯ ಜೀವನ ಲಭಿಸುತ್ತದೆ ಎಂ ದು ಆದಿಚುಂಚನಗಿರಿ ಶೃಂಗೇರಿ ಶಾಖಾಮಠದ ಶ್ರೀ ಗುಣನಾಥ ಸ್ವಾಮೀಜಿ ಹೇಳಿ ದರು.ತಾಲೂಕಿನ ವಸ್ತಾರೆ ಹೋಬಳಿ ತೊಂಡವಳ್ಳಿ ಗ್ರಾಮದ ಶ್ರೀ ಆಂಜನೇಯಸ್ವಾಮಿ ದೇವಾಲಯದ ಜೀರ್ಣೋದ್ದಾರ, ಪ್ರತಿ ಷ್ಟಾಪನೆ, ವಿಮಾನ ಗೋಪುರ ಆವಿಷ್ಕರಣ ಮತ್ತು ಮಹಾಕುಂಭಾಭಿಷೇಕ ಮಹೋತ್ಸವದಲ್ಲಿ ಪಾಲ್ಗೊಂಡು ನಂತರ ಸಾರ್ವಜನಿಕ ಸಭೆ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.ಮಾನವ ಸಂಕುಲಕ್ಕೆ ಸೃಷ್ಟಿಕರ್ತನು ಸಕಲಸೌಲಭ್ಯಗಳನ್ನು ನೀಡಿದರೂ ಕೆಲವೊಂದು ಸಮಸ್ಯೆ, ಕೊರಗಿನಿಂದಲೇ ಬದುಕುತ್ತಿದ್ದಾನೆ. ಆದರೆ ಪ್ರಾಣಿ, ಪಕ್ಷಿಗಳಿಗೆ ದಿನನಿತ್ಯದ ಊಟಕ್ಕೂ ಸಮಸ್ಯೆಗಳಿದ್ದರೂ ನೆಮ್ಮದಿಯಾಗಿ ಜೀವಿಸುತ್ತಿವೆ. ಹೀಗಾಗಿ ಮನುಷ್ಯ ಆಸೆ-ಆಮಿಷಗಳಿಗೆ ಹೆಚ್ಚು ಪ್ರಾಧಾನ್ಯತೆ ನೀಡದೇ ಸಂತೋಷದಿಂದ ಬದುಕಬೇಕು ಎಂದರು.ಅಯೋಧ್ಯ ಶ್ರೀರಾಮನ ಅಪ್ಪಟ ಭಕ್ತನಾದ ಶ್ರೀ ಆಂಜನೇಯ ಎದೆಬಗೆದು ಭಕ್ತಿ ಪ್ರದರ್ಶಿಸಿದ ಕಾರಣ ನಾಡಿನಲ್ಲಿ ಹನುಮನ ಮಂದಿರಗಳು ಹೆಚ್ಚಿನ ಸಂಖ್ಯೆಯಲ್ಲಿ ನಿರ್ಮಾಣಗೊಂಡು ಪೂಜಿಸುವ ಸಂಸ್ಕೃತಿ ಬೆಳೆದಿದೆ. ಆ ನಿಟ್ಟಿನಲ್ಲಿ ಮನುಷ್ಯ ಹನುಮನ ಭಕ್ತಿಯ ಸದ್ಗುಣ ಅಳವಡಿಸಿಕೊಂಡಾಗ ಸಮಾಜದಲ್ಲಿ ಸ್ಥಾನಮಾನ ಸಿಗಲಿದೆ ಎಂದರು.ಪರಮಾತ್ಮನ ಅತ್ಯಂತ ಪ್ರಿಯವಾದ ಭಕ್ತನೆಂದರೆ ದೇವಾಲಯದ ಅರ್ಚಕನಲ್ಲ, ಸ್ವಾಮಿಗಳಲ್ಲ. ದೇಶದ ಬೆನ್ನೆಲೆಬು ರೈತರು. ಯಾವುದೇ ಬೆಳೆ ಬೆಳೆಯಲು ಮೊದಲು ಭಗವಂತನ ಸನ್ನಿಧಾನಕ್ಕೆ ಅರ್ಪಿಸುವ ಸಂಸ್ಕೃತಿ ರೈತರಲ್ಲಿದೆ ಎಂದ ರೈತರು ವೈಯಕ್ತಿಕ ಜೊತೆಗೆ ಪಕ್ಷಿಗಳಿಗೂ ಒಂದಿಷ್ಟು ಧಾನ್ಯಗಳನ್ನು ಹಂಚುವ ಹೃದಯವೈಶಾಲ್ಯತೆ ಹೊಂದಿದ್ದಾರೆ ಎಂದರು.ಭಕ್ತಿಗೆ ಪ್ರಾಮುಖ್ಯತೆ ಕೊಟ್ಟವನು ಶ್ರೀ ಆಂಜನೇಯ. ಆ ಸನ್ಮಾರ್ಗದಲ್ಲಿ ಮಾನವರು ಸಾಗಿದರೆ ಸದ್ಬುದ್ಧಿ, ಆತ್ಮಬಲದಿಂದ ಬದುಕು ಯಶಸ್ಸಿನಿಂದ ಕೂಡಿರುತ್ತದೆ. ಹಾಗೆಯೇ ಶರೀರಕ್ಕೆ ಆಭರಣಗಳು ಶೋಭೆ ತರುವುದಿಲ್ಲ. ನಿಜವಾಗಿ ದಾನದ ರೂಪದಲ್ಲಿ ಕೈಗೊಳ್ಳುವ ಧರ್ಮಕಾರ್ಯಗಳೇ ಮನುಷ್ಯನ ಶೋಭೆ ಹೆಚ್ಚಿಸುತ್ತದೆ ಎಂದು ಹೇಳಿದರು.ಇತ್ತೀಚಿನ ದಿನಗಳಲ್ಲಿ ವಯೋ ಸಹಜ ಪಾಲಕರನ್ನು ವೃದ್ದಾಶ್ರಮ ಅಥವಾ ರಸ್ತೆಗೆ ತಳ್ಳುವ ಸಂಸ್ಕೃತಿ ಹೆಚ್ಚಾಗಿದೆ. ಇದರಿಂದ ಮಕ್ಕಳ ಮನಸ್ಸಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ರಸ್ತೆಗಟ್ಟುವ ಮಕ್ಕಳು ತಮಗೂ ವಯಸ್ಸಾಗಲಿದೆ ಎಂಬ ಸತ್ಯ ಅರಿಯಬೇಕು. ಮಾನವರಾಗಿ ಹುಟ್ಟಿದ ಮೇಲೆ ಮೊದಲ ಪೂಜೆ ತಂದೆ-ತಾಯಂದಿರಿಗೆ ಸಲ್ಲಿಸುವ ಸಂಸ್ಕಾರ ಕಲಿಯಬೇಕು ಎಂದರು.ಭಾರತೀಯ ಸಂಸ್ಕೃತಿಯಲ್ಲಿ ಪಂಚಭೂತಗಳನ್ನು ದೈವಸಂಭೂತಕ್ಕೆ ಹೋಲಿಸುತ್ತವೆ. ತಿಳುವಳಿಕೆ ಹೊಂದಿರುವ ಮಾನವ ವಿಚಾರವಂತರಾಗಬೇಕು. ಸರಿ, ತಪ್ಪುಗಳನ್ನು ಅರಿಯುವ ಸಾಮಾನ್ಯ ಜ್ಞಾನ ಹೊಂದಬೇಕು, ಶಕ್ತಿಮೀರಿ ಸದ್ವಿಚಾರಗಳನ್ನು ಮೆಲುಕು ಹಾಕುವ ಸಮಾಜದಲ್ಲಿ ಮಾದರಿ ವ್ಯಕ್ತಿಗಳಾಗಿ ರೂಪುಗೊಂಡರೆ ಇಡೀ ಪ್ರಪಂಚವೇ ದೈವಮಂದಿರವಾಗುತ್ತದೆ ಎಂದರು.ಸಾಹಿತಿ ಚಟ್ನನಹಳ್ಳಿ ಮಹೇಶ್ ಮಾತನಾಡಿ ಬದುಕಿನ ಶಿಸ್ತು ತೋರುವುದು ನಿಜವಾದ ಭಕ್ತಿ. ಧರ್ಮ ಉಳಿಸುವಲ್ಲಿ ದೇವಾಲಯದ ಪಾತ್ರ ಪ್ರಮುಖವಾಗಿದ್ದು, ಅಂತರಂಗ ಶುದ್ಧಿಗೆ ಭಗವಂತನು ಒಲಿಯುತ್ತಾನೆ. ಯಾವುದೇ ಅಕಾಡೆಮಿ ಅಥವಾ ಇನ್ಸಿಟ್ಯೂಟ್‌ಗಳಲ್ಲಿ ದೊರೆಯದ ಶಿಕ್ಷಣ ಧಾರ್ಮಿಕ ಸಭೆಗಳಲ್ಲಿ ಲಭಿಸಲಿದ್ದು ಈ ಕಾರ್ಯಕ್ರಮಕ್ಕೆ ಮಕ್ಕಳನ್ನು ಕರೆತರಬೇಕು ಎಂದು ಸಲಹೆ ಮಾಡಿದರು.ಭಗವಂತನಿಗೆ ಅರ್ಪಿಸುವ ಪೂಜಾ ಸಾಮಾಗ್ರಿಗಳು, ಹೊರಬಂದಾಕ್ಷಣ ಪ್ರಸಾದ, ಪವಿತ್ರ ತೀರ್ಥವಾಗಲಿದೆ. ಹಾಗೆಯೇ ಮಾನವರು ದೇವಾಲಯದಿಂದ ಹೊರಬಂದು ಮಹಾದೇವನಾಗಬೇಕು. ಎಳೆವಯಸ್ಸಿನಿಂದ ಮಕ್ಕಳಿಗೆ ಸಂಸ್ಕೃತಿ, ಸಂಸ್ಕಾರದ ನಿಯಮ ಅಡಕವಾಗಿಸಬೇಕು. ಅಜ್ಜ-ಅಜ್ಜಿಯರ ಜೊತೆ ಬೆರೆಸುವುದು ಮತ್ತು ಬಾಂಧವ್ಯದ ಪಾಠ ಕಲಿಸಬೇಕು ಎಂದು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಗ್ರಾಪಂ ಮಾಜಿ ಅಧ್ಯಕ್ಷ ಟಿ.ಕೆ.ನಾರಾಯಣಗೌಡ ಗ್ರಾಮಸ್ಥರು, ಸ್ನೇಹಿತರು ಹಾಗೂ ದಾನಿಗಳ ಸಂಪೂರ್ಣ ಸಹಕಾರದಿಂದ ಇಂದು ಜೀರ್ಣೋದ್ದಾರ ಕಾರ್‍ಯ ಸಂಪನ್ನಗೊಂಡಿದೆ. ಈ ಹಿಂದೆ ದೇವಾಲಯ ನಿರ್ಮಿಸುವುದು ದೊಡ್ಡ ಸವಾಲಾಗಿತ್ತು. ಆರ್ಥಿಕ ಶಕ್ತಿ ಹೆಚ್ಚು ಬೇಕಿತ್ತು. ಆದರೆ ಕಾಲಕ್ರಮೇಣ ಭಗವಂತನ ದಯೆಯಿಂದ ಎಲ್ಲವೂ ಸುಲಲಿತವಾಗಿ ಪೂರ್ಣಗೊಂಡು ಪ್ರತಿಷ್ಟಾಪನೆ ನೆರವೇರಿಸಲಾಗಿದೆ ಎಂದರು.ಇದೇ ವೇಳೆ ದೇವಾಲಯದ ನಿರ್ಮಾಣಕ್ಕೆ ಸಹಕರಿಸಿದ ದಾನಿಗಳಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ಕಾರ್ಯ ಕ್ರಮಕ್ಕೂ ಮುನ್ನ ಮುಂಜಾನೆಯಿಂದಲೇ ಅರ್ಚಕ ರಂಗನಾಥ್ ಸಾರಥ್ಯದಲ್ಲಿ ವಿವಿಧ ಪೂಜಾ ವಿಧಿವಿಧಾನಗಳು, ಹೋಮ ಹವನಾದಿಗಳು ನೆರವೇರಿತು. ಈ ಸಂದರ್ಭದಲ್ಲಿ ವಸ್ತಾರೆ ಗ್ರಾಪಂ ಸದಸ್ಯ ಟಿ.ಟಿ.ದೀಪಕ್, ಗ್ರಾಮದ ಹಿರಿಯ ತಮ್ಮಣ್ಣಗೌಡ, ಗ್ರಾಮಸ್ಥರಾದ ನಾಗರಾಜ್, ವೀರೇಗೌಡ, ರಮೇ ಶ್, ರಾಜು, ಮೋಹನ್, ನಿಂಗೇಗೌಡ, ನಿರಂಜನ್ ಮತ್ತಿತರರು ಉಪಸ್ಥಿತರಿದ್ದರು.

Share this article