ಕನ್ನಡಪ್ರಭ ವಾರ್ತೆ ಸರಗೂರು
ಬಳಿಕ ವ್ಯಕ್ತಿಯೊಬ್ಬರಿಗೆ ಹಾಕಲಾಗಿದೆ ಎನ್ನಲಾಗುವ ‘ಬಹಿಷ್ಕಾರ’ ಎಂಬ ಆರೋಪ ಸತ್ಯಕ್ಕೆ ದೂರುವಾದುದು ಎಂಬ ಅಂಶ ಬೆಳಕಿಗೆ ಬಂದಿತು.
ಗ್ರಾಮದಲ್ಲಿ ದೊಡ್ಡತಾಯಮ್ಮ, ಎಸ್.ಎಂ. ನಂಜೇಗೌಡ ಎಂಬವರು ವಾಸಿಸುತ್ತಿದ್ದು, ಸರ್ವೇ ನಂ. 436ರ ಸರ್ಕಾರಿ ಖರಾಬು ಜಮೀನಿನಲ್ಲಿ ಅನಧಿಕೃತವಾಗಿ ವಾಸದ ಮನೆ ನಿರ್ಮಿಸಿಕೊಂಡಿರುವುದು ಸರ್ವೇ ಇಲಾಖೆ ನಡೆಸಲಾದ ಆಳತೆಯಲ್ಲಿ ಕಂಡು ಬಂದಿರುತ್ತದೆ. ಗ್ರಾಮದಲ್ಲಿ ಅಂಗನವಾಡಿ ಕಟ್ಟಡ ನಿರ್ಮಿಸಲು ಜಾಗ ಬೇಕಾಗಿರುವುದರಿಂದ ಎಸ್.ಎಂ. ನಂಜೇಗೌಡ, ದೊಡ್ಡತಾಯಮ್ಮ ಅವರ ಗಮನಕ್ಕೆ ತಂದಾಗ ಮೂರು ತಿಂಗಳ ಕಾಲಾವಧಿ ನೀಡಿ ನಂತರ ಬಿಟ್ಟುಕೊಡುವುದಾಗಿ ಹೇಳಿದರು. ಮೂರು ತಿಂಗಳ ಬಳಿಕ ಮನೆ ಬಿಟ್ಟುಕೊಡಲು ಹಿಂದೇಟು ಹಾಕುತ್ತಿದ್ದು, ಅಕ್ರಮವಾಗಿ ನಿರ್ಮಿಸಿಕೊಂಡಿರುವ ಮನೆಯ ರಕ್ಷಣೆಗಾಗಿ ‘ಬಹಿಷ್ಕಾರ’ ಎಂಬ ಪದ ಬಳಕೆ ಮಾಡಿಕೊಂಡಿದ್ದಾರೆ ಎಂದು ತಹಸೀಲ್ದಾರ್ ಮೋಹನಕುಮಾರಿ ಅವರಿಗೆ ಗ್ರಾಮಸ್ಥರು ದೂರಿದರು.ಸಭೆಯಲ್ಲಿ ವಾದಿ, ಪ್ರತಿವಾದಿಗಳ ದೂರು ಸ್ವೀಕರಿಸಿದ ತಹಸೀಲ್ದಾರ್ ಮೋಹನಕುಮಾರಿ ಅವರು, ನಂಜೇಗೌಡರ ಕುಟುಂಬಕ್ಕೆ ‘ಸಾಮಾಜಿಕ ಬಹಿಷ್ಕಾರ’ ಹಾಕಲಾಗಿದೆಯೇ ಎಂಬುದರ ಬಗ್ಗೆ ಗ್ರಾಮಸ್ಥರಲ್ಲಿ ಮಾಹಿತಿ ಕಲೆಹಾಕಿದರು. ನಂಜೇಗೌಡ ಕುಟುಂಬದ ಪರ ಸಕಾರಾತ್ಮಕ ಅಭಿಪ್ರಾಯ ಬಾರದ ಹಿನ್ನೆಲೆಯಲ್ಲಿ ಸಾಮಾಜಿಕ ಬಹಿಷ್ಕಾರ ಎಂಬ ಆರೋಪ ಸುಳ್ಳು. ಸರ್ಕಾರಿ ಖರಾಬು ಜಮೀನಿನಲ್ಲಿ ಮನೆ ನಿರ್ಮಿಸಿಕೊಂಡಿರುವುದು ಅಪರಾಧ. ಅಕ್ರಮವಾಗಿ ನಿರ್ಮಿಸಿಕೊಂಡಿರುವ ಮನೆ ರಕ್ಷಣೆಗಾಗಿ ಬಹಿಷ್ಕಾರ ಎಂಬ ಪದ ಬಳಕೆ ಮಾಡಿಕೊಳ್ಳುವುದೂ ಅಪರಾಧವೇ. ಜಮೀನು ವಿಚಾರ ಸಂಬಂಧ ಈಗಾಗಲೇ ಸರ್ವೇ ಸ್ಕೇಚ್ ಮಾಡಿಸಲಾಗಿದೆ. ಅಲ್ಲದೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಈ ಕುರಿತು ಇದರ ಕಡತ ನೀಡಲಾಗಿದ್ದು, ಸಮಗ್ರ ವರದಿ ತರಿಸಿಕೊಳ್ಳಲಾಗುವುದು. ಮನೆ ನಿರ್ಮಾಣದ ಸಂಬಂಧ ಮುಂದಿನ ದಿನಗಳಲ್ಲಿ ಕಾನೂನಾತ್ಮಕವಾಗಿ ಕ್ರಮವಹಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
ಕರ್ನಾಟಕ ರಾಜ್ಯ ರೈತ ಪರ್ವ ಸಂಘದ ರಾಜ್ಯ ಕಾರ್ಯಾಧ್ಯಕ್ಷ ವೈ.ಎಲ್. ನವೀನ್ ಗೌಡ, ಆರ್ಐಗಳಾದ ಲಕ್ಷ್ಮಣಶೆಟ್ಟಿ, ಮುಜೀಬ್, ಗ್ರಾಮಸ್ಥರು ಇದ್ದರು.