ರಾಮನಗರ:
ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರ ಮೇಲೆ ಶೂ ಎಸೆದು ಅಪಮಾನ ಮಾಡಿದ ವಕೀಲ ರಾಕೇಶ್ ಕಿಶೋರ್ ಗಡಿಪಾರಿಗೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.ನಗರದ ಜಿಲ್ಲಾ ಕಚೇರಿಗಳ ಸಂಕೀರ್ಣದಲ್ಲಿ ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ ಸಮಿತಿ ಜಿಲ್ಲಾ ಸಂಯೋಜಕ ವಿಯ್ ಕುಮಾರ್ ಮತ್ತು ಪದಾಧಿಕಾರಿಗಳು ನ್ಯಾಯಾಂಗ ಮತ್ತು ಸಂವಿಧಾನಕ್ಕೆ ಅಪಚಾರ ಎಸಗಿರುವ ವಕೀಲ ರಾಕೇಶ್ ಕಿಶೋರ್‌ನನ್ನು ಗಡಿಪಾರು ಮಾಡಲೇಬೇಕೆಂದು ಒತ್ತಾಯಿಸಿದರು.
ಡಾ.ಬಿ.ಆರ್. ಅಂಬೇಡ್ಕರ್ ಅವರು ರಚಿಸಿರುವ ಸಂವಿಧಾನದ ಅಡಿಯಲ್ಲಿ ನಾವೆಲ್ಲರು ಪ್ರಜೆಗಳಾಗಿ ಬದುಕುತ್ತಿದ್ದೇವೆ. ಆದರೆ, ಜನ ವಿರೋಧಿ , ಜೀವ ವಿರೋಧಿ ಮೌಲ್ಯಗಳನ್ನು ಒಳಗೊಂಡಿರುವ ಮನು ಧರ್ಮ ಶಾಸ್ತ್ರವನ್ನು ಪ್ರತಿಪಾದಿಸುವ ಹಿಂದೂ ಫ್ಯಾಸಿಸ್ಟ್ ಶಕ್ತಿಗಳು ಇವರೆಗೂ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸಂವಿಧಾನವನ್ನು ವಿರೋಧಿಸುತ್ತಾ ಬಂದಿದ್ದಾರೆ.ದೇಶಧ ಉದ್ದಗಲಕ್ಕೂ ಕೋಮುವಾದಿ ಹಾಗೂ ಜಾತಿವಾದಿ ಶಕ್ತಿಗಳನ್ನು ಹುಟ್ಟು ಹಾಕಿ ಸಹಸ್ರಾರು ಮುಗ್ದ ಜನಸಾಮಾನ್ಯರನ್ನು ಬಲಿ ತೆಗೆದುಕೊಂಡಿದ್ದಾರೆ. ಅಲ್ಲದೆ, ದೇಶದಲ್ಲಿ ಇದುವರೆಗೂ ಸಾವಿರಾರು ಕೋಮು ದಳ್ಳೂರಿ ನಡೆದಿದೆ ಎಂದು ಟೀಕಿಸಿದರು.
ಅಸಮಾನತೆಯ ಗೂಡಾಗಿರುವ ಈ ನೆಲದಲ್ಲಿ ಒಬ್ಬ ಬೂಟಾಟಿಕೆ ಸನ್ಯಾಸಿಯು ಸಿಜೆಐ ಗವಾಯಿರವರ ಜನಪರ ತೀರ್ಪುಗಳನ್ನು ಸಹಿಸಿಕೊಳ್ಳದೆ ಅವರ ಬಗ್ಗೆ ಕೀಳಾಗಿ ಮಾತನಾಡಿ, ತಮ್ಮ ಬುದ್ಧಿಯನ್ನು ತೋರಿಸಿಕೊಂಡಿದ್ದಾನೆ. ಆತ ಮುಖ್ಯ ನ್ಯಾಯಮೂರ್ತಿ ಮೇಲೆ ಶೂ ಎಸೆದಿರುವುದು ದೇಹದ್ರೋಹಿ ಕೃತ್ಯವಾಗಿದ್ದು, ಆತನನ್ನು ಕೂಡಲೇ ದೇಶದಿಂದ ಗಡಿಪಾರು ಮಾಡಬೇಕೆಂದು ಮನವಿಯಲ್ಲಿ ಒತ್ತಾಯ ಮಾಡಿದ್ದಾರೆ.ಈ ಸಂದರ್ಭದಲ್ಲಿ ಸಮಿತಿ ಜಿಲ್ಲಾ ಸಂಘಟನಾ ಸಂಯೋಜಕ ಪ್ರಸಾದ್, ತಾಲೂಕು ಸಂಯೋಜಕರಾದ ಗೋಪಾಲ್, ಪ್ರದೀಪ್, ಪ್ರಕಾಶ್, ಮಂಜುನಾಥ್ , ದೊಡ್ಡ ಚೆಲ್ಲಯ್ಯ ಮತ್ತಿತರರು ಹಾಜರಿದ್ದರು.14ಕೆಆರ್ ಎಂಎನ್ 2.ಜೆಪಿಜಿ
ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.