ಮೀಸಲು ಸೌಲಭ್ಯ ಪಡೆದವನಿಗೆ ಐಷರಾಮಿ ಬದುಕು ಸಲ್ಲ

KannadaprabhaNewsNetwork | Published : Jun 24, 2024 1:31 AM

ಸಾರಾಂಶ

ಮೀಸಲಾತಿಯಿಂದ ವಿದ್ಯೆ, ಉದ್ಯೋಗ, ಅಂತಸ್ತು, ಪಡೆದವರು ಐಷರಾಮಿ ಬದುಕು ಸಾಗಿಸುವುದು ಸಲ್ಲವೆಂದು ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್ ಅಧ್ಯಕ್ಷ ಬಿ.ಪಿ.ತಿಪ್ಪೇಸ್ವಾಮಿ ಅಭಿಪ್ರಾಯಪಟ್ಟರು. ಚಿತ್ರದುರ್ಗ ನಗರದ ಕೋಟೆ ನಾಡು ಬುದ್ದ ವಿಹಾರ ಕೇಂದ್ರದಲ್ಲಿ ಭಾರತೀಯ ಬೌದ್ಧ ಮಹಾಸಭಾ ಹಾಗೂ ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್ ನೇತೃತ್ವದಲ್ಲಿ ಭಾನುವಾರ ಆಯೋಜಿಸಿದ್ದ ಪೇ ಬ್ಯಾಕ್ ಟು ಸೊಸೈಟಿ - ಶೋಷಿತ ವರ್ಗದ ನೌಕರರ ಜವಾಬ್ದಾರಿ ವಿಷಯ ಕುರಿತ ವಿಚಾರ ಸಂಕಿರಣ ಹಾಗೂ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

- ವಿಚಾರ ಸಂಕಿರಣದಲ್ಲಿ ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್ ಅಧ್ಯಕ್ಷ ಬಿ.ಪಿ.ತಿಪ್ಪೇಸ್ವಾಮಿ ಅಭಿಮತಕನ್ನಡಪ್ರಭವಾರ್ತೆ, ಚಿತ್ರದುರ್ಗಮೀಸಲಾತಿಯಿಂದ ವಿದ್ಯೆ, ಉದ್ಯೋಗ, ಅಂತಸ್ತು, ಪಡೆದವರು ಐಷರಾಮಿ ಬದುಕು ಸಾಗಿಸುವುದು ಸಲ್ಲವೆಂದು ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್ ಅಧ್ಯಕ್ಷ ಬಿ.ಪಿ.ತಿಪ್ಪೇಸ್ವಾಮಿ ಅಭಿಪ್ರಾಯಪಟ್ಟರು. ಚಿತ್ರದುರ್ಗ ನಗರದ ಕೋಟೆ ನಾಡು ಬುದ್ದ ವಿಹಾರ ಕೇಂದ್ರದಲ್ಲಿ ಭಾರತೀಯ ಬೌದ್ಧ ಮಹಾಸಭಾ ಹಾಗೂ ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್ ನೇತೃತ್ವದಲ್ಲಿ ಭಾನುವಾರ ಆಯೋಜಿಸಿದ್ದ ಪೇ ಬ್ಯಾಕ್ ಟು ಸೊಸೈಟಿ - ಶೋಷಿತ ವರ್ಗದ ನೌಕರರ ಜವಾಬ್ದಾರಿ ವಿಷಯ ಕುರಿತ ವಿಚಾರ ಸಂಕಿರಣ ಹಾಗೂ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮೀಸಲು ಪಡೆದವರು, ತಮ್ಮಂತೆ ಹಸಿವು, ಅಸ್ಪೃಶ್ಯತೆ, ಅವಮಾನದಿಂದ ಬದುಕುತ್ತಿರುವ ತಮ್ಮ ಸಮಾಜದ ಬಂಧುಗಳ ಏಳಿಗೆಗೆ ಕೈಜೋಡಿಸಬೇಕು. ಹೆಂಡತಿ ಮಕ್ಕಳಿಗೆ ಆಸ್ತಿ ಮಾಡುವುದು, ಅಂತಸ್ತಿನ ಮನೆ ಕಟ್ಟಿಸಿ, ಕಾರುಗಳಲ್ಲಿ ತಿರುಗಾಡಿಸುವುದೇ ಜೀವನದ ಶ್ರೇಷ್ಠ ಸಾಧನೆ ಎಂದು ಪರಿಗಣಿಸಿರುವುದು ತನ್ನ ಹೆತ್ತ ಸಮಾಜಕ್ಕೆ ಮಾಡುವ ಅವಮಾನವಾಗಿದೆ ಎಂದರು.ಬಾಬಾ ಸಾಹೇಬರು ಹೇಳಿರುವಂತೆ ಸಂಪಾದನೆಯ ಕನಿಷ್ಠ ಐದನೇ ಒಂದು ಭಾಗದಷ್ಟು ಹಣವನ್ನಾದರೂ ತಮ್ಮಸಮಾಜದ ಬಡಮಕ್ಕಳ ವಿದ್ಯಾಭ್ಯಾಸ, ಸಾಂಸ್ಕೃತಿಕ, ಧಾರ್ಮಿಕ ಚಟುವಟಿಕೆಗಳಿಗೆ ಹಾಗೂ ಸ್ವಾಭಿಮಾನಿ ಪರ ಹೋರಾಟದ ಸಂಘ ಸಂಸ್ಥೆಗಳಿಗೆ ಮೀಸಲಿಡುವುದು ನಮ್ಮ ಕರ್ತವ್ಯ. ತಿಂಗಳಲ್ಲಿ ಒಂದು ದಿನವಾದರೂ ತನ್ನ ಹುಟ್ಟಿದ ಊರಿನ ಮಕ್ಕಳ ಶೈಕ್ಷಣಿಕ ಸ್ಥಿತಿಗತಿ ಬಗ್ಗೆ ಅರಿತುಕೊಳ್ಳಬೇಕು. ಮುಂದಿನ ಮಾರ್ಗ ಕುರಿತು ಅವರಲ್ಲಿ ಅರಿವು ಮೂಡಿಸಿ ನಮ್ಮಂತೆ ಸಮಾಜದಲ್ಲಿ ಉತ್ತಮ ಸ್ಥಿತಿ ತಲುಪಿಸಲು ಪ್ರಯತ್ನಿಸಬೇಕು ಎಂದರು.ಕಾರ್ಯಕ್ರಮದಲ್ಲಿ ನಿವೃತ್ತ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಎನ್.ಪಾತಪ್ಪ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ನಿವೃತ್ತ ಕಚೇರಿ ಅಧೀಕ್ಷಕ ಡಿ.ದಯಾನಂದ ಅವರನ್ನು ಸನ್ಮಾನಿಸಲಾಯಿತು. ಪ್ರಾಂಶುಪಾಲೆ ಜೆ.ಸಿದ್ದಲಿಂಗಮ್ಮ, ಉಪನ್ಯಾಸಕರಾದ ಡಾ.ಮೋಹನ್, ಈ.ನಾಗೇಂದ್ರಪ್ಪ, ಇಂದೂಧರ್ ಗೌತಮ್, ಬಾಲೇನಹಳ್ಳಿ ರಾಮಣ್ಣ, ಮುಖ್ಯ ಶಿಕ್ಷಕ ಹನುಮಂತಪ್ಪ, ಬನ್ನಿಕೋಡ್ ಹನುಮಂತಪ್ಪ, ತಾಲೂಕು ಮಾದಿಗ ನೌಕರ ಸಂಘದ ಅಧ್ಯಕ್ಷ ತಿಪ್ಪೇಸ್ವಾಮಿ, ಬೆಸ್ಕಾಂ ತಿಪ್ಪೇಸ್ವಾಮಿ, ತಣಿಗೆಹಳ್ಳಿ ರುದ್ರಪ್ಪ, ಮುದ್ದಾಪುರ ದುರುಗೇಶ್, ಶಿಕ್ಷಕಿ ಗಿರಿಜಾ, ಅಮೂಲ್ಯ, ಅಮೃತ, ಯರದಕಟ್ಟೆ ಉಷಾ ಇದ್ದರು.23 ಸಿಟಿಡಿ6

----ನಗರದ ಬುದ್ದ ವಿಹಾರ ಕೇಂದ್ರದಲ್ಲಿ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ನಿವೃತ್ತ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಎನ್.ಪಾತಪ್ಪ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ನಿವೃತ್ತ ಕಚೇರಿ ಅಧೀಕ್ಷಕ ಡಿ.ದಯಾನಂದ ಅವರನ್ನು ಸನ್ಮಾನಿಸಲಾಯಿತು.

Share this article