ಹಂಚಿ ತಿನ್ನುವ ವ್ಯಕ್ತಿ ದೇಶದ ಉತ್ತಮ ಪ್ರಜೆ: ಸಂಗಮೇಶ ನಿರಾಣಿ

KannadaprabhaNewsNetwork |  
Published : Feb 15, 2026, 04:15 AM IST
ಉತ್ತಮ ವಿಚಾರ, ಹಂಚಿ ತಿನ್ನುವ ವ್ಯಕ್ತಿ ದೇಶದ ಉತ್ತಮ ಪ್ರಜೆ: ನಿರಾಣಿ. | Kannada Prabha

ಸಾರಾಂಶ

ಮನಸ್ಸಿನಲ್ಲಿ ಸದಾ ಉತ್ತಮ ವಿಚಾರವುಳ್ಳ ವ್ಯಕ್ತಿ ಮತ್ತು ಇದ್ದದರಲ್ಲಿ ಹಂಚಿ ತಿನ್ನುವ ಗುಣ ಯಾರಲ್ಲಿ ಇರುತ್ತದೆಯೋ ಅವರು ದೇಶದ ಉತ್ತಮ ಪ್ರಜೆಗಳಾಗುತ್ತಾರೆ ಎಂದು ನಿರಾಣಿ ಸಂಸ್ಥೆಯ ಕಾರ್ಯನಿರ್ವಾಹಕ ವ್ಯವಸ್ಥಾಪಕ ಸಂಗಮೇಶ ನಿರಾಣಿ ಹೇಳಿದರು.

ಕನ್ನಡಪ್ರಭ ವಾರ್ತೆ ಮಹಾಲಿಂಗಪುರ

ಮನಸ್ಸಿನಲ್ಲಿ ಸದಾ ಉತ್ತಮ ವಿಚಾರವುಳ್ಳ ವ್ಯಕ್ತಿ ಮತ್ತು ಇದ್ದದರಲ್ಲಿ ಹಂಚಿ ತಿನ್ನುವ ಗುಣ ಯಾರಲ್ಲಿ ಇರುತ್ತದೆಯೋ ಅವರು ದೇಶದ ಉತ್ತಮ ಪ್ರಜೆಗಳಾಗುತ್ತಾರೆ ಎಂದು ನಿರಾಣಿ ಸಂಸ್ಥೆಯ ಕಾರ್ಯನಿರ್ವಾಹಕ ವ್ಯವಸ್ಥಾಪಕ ಸಂಗಮೇಶ ನಿರಾಣಿ ಹೇಳಿದರು.

ಕಡಪಟ್ಟಿ ಸಮೂಹ ಸಂಸ್ಥೆಯ ಗುಡ್ ವಿಲ್ ಸಂಸ್ಥೆಗೆ ದೀಪ ಬೆಳಗಿ ಚಾಲನೆ ನೀಡಿ ಮಾತನಾಡಿ, ಪರೋಪರೋಪಕಾರಂ ವಿಧಂ ಶರೀರಂ ಎಂಬ ಗಾದೆ ಮಾತಿನಂತೆ ಕಡಪಟ್ಟಿ ಪರಿವಾರದವರು ಬಡ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಅವರು ಹೆಚ್ಚಿನ ವಿದ್ಯಾಭ್ಯಾಸ ಮುಂದುವರಿಸಲು ದುಡಿಮೆಯ ಹಣದ ಮೊತ್ತದಲ್ಲಿಯ ಅಂಶ ನೀಡುವ ಉದ್ದೇಶ ಹೊಂದಿರುವುದು ಮೆಚ್ಚುವಂತಹ ಪರೋಪಕಾರ ಕೆಲಸವಾಗಿದೆ ಎಂದು ಹೇಳಿದರು.

ಸಂಸ್ಥೆ ಕಾರ್ಯದರ್ಶಿ ಗಗನ್ ಕಡಪಟ್ಟಿ ಮಾತನಾಡಿ, ಮುಂದಿನ ಪೀಳಿಗೆಗೆ ಸಾಂಸ್ಕೃತಿಕ ಮತ್ತು ಸಾಮಾಜಿಕ ಚಿಂತನೆ ಮೂಡಿಸುವ ಕಾರ‍್ಯಗಳನ್ನು ಕೈಗೊಳ್ಳುತ್ತ, ಜಿಲ್ಲೆಯ ಮೂರು ತಾಲೂಕುಗಳ ೨೦೦ ಸರ್ಕಾರಿ ಶಾಲೆಗಳಿಗೆ ಉಚಿತವಾಗಿ ಶುದ್ಧ ಕುಡಿಯುವ ನೀರಿನ ಘಟಕ, ಗುರಿ ಮುಟ್ಟುವ ವಿಧ್ಯಾರ್ಥಿಗಳಿಗೆ ಉಡಾಸ್ ಯೋಜನೆ ಪ್ರಯೋಜನ ಮತ್ತು ಕಡಿಮೆ ಅಂಕಗಳಿಸುವ ವಿದ್ಯಾರ್ಥಿಗಳಿಗೂ ಅವರ ಅಧ್ಯಯನ ಸುಧಾರಣೆಗೆ ಆದ್ಯತೆ ನೀಡಲಾಗುವುದು. ಈ ಎಲ್ಲ ಕಾರ್ಯಗಳಿಗೆ ನನ್ನ ತಂದೆ, ತಾಯಿ ನಮ್ಮ ಎಲ್ಲ ಸಕಾರಾತ್ಮಕ ಕಾರ್ಯಗಳಿಗೆ ಬೆಂಬಲವಾಗಿದ್ದಾರೆಂದು ಹೇಳಿದರು.ರಚನಾ ಕಡಪಟ್ಟಿ, ಮಹಾಂತೇಶ ಹಿಟ್ಟಿನಮಠ, ಬಾಲಕೃಷ್ಣ ಮಾಳವದೆ, ಜಯರಾಮ ಶೆಟ್ಟಿ ವೇದಿಕೆ ಮಲಿದ್ದರು.

ಜಟ್ಟೆಪ್ಪ ಜಕ್ಕನ್ನವರ, ಶಂಭುಲಿಂಗ ನಕಾತಿ, ಗನಸೈದ್‌ ನದಾಫ್, ಮಹಾಂತೇಶ ಬಿರಾದಾರ, ಬಸವರಾಜ ಲಕ್ಕೋಜಿ, ಮಲಿಕಜಾನ ನದಾಫ್, ಕಿರಣ ಗಾಡಿವಡ್ಡರ, ಗುರುರಾಜ್ ಚಿಂದಿ, ಗುರುರಾಜ ಕಚ್ಚಾಪೂರ, ವಿಕಾಸ ಕೆರೂರ, ಧರೆಪ್ಪ ಬಿರಾದಾರ, ಅಭಿಷೇಕ ಮುರುಗುಂಡಿ, ಶಿವಾನಂದ ತೇಲಿ, ಚೇತನ್ ಹಿರೇಮಠ, ಹನುಮಂತ ಪೂಜಾರಿ, ವಿನಾಯಕ ಗೊಂದಿ, ಮೋಹನ ಹಣಗಂಡಿ, ರಾಜೇಶ ಹೊಸಪೇಟಿ, ಭುವನ ಮುರಗೋಡ, ಅಮೃತ ಬಾನಕಾರ, ಶಶಿಧರ ನಕಾತಿ, ಸಿದ್ದುನಕಾತಿ, ಶಶಿಧರ ಪತ್ತಾರ ಉಪಸ್ಥಿತರಿದ್ದು, ಗೌತಮ ಕಡಪಟ್ಟಿ ಪರಿಚಯಿಸಿದರು. ಚೇತನ ಹಿರೇಮಠ ನಿರೂಪಿಸಿ, ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕುಟುಂಬ ಹಾಳು ಮಾಡುತ್ತಿರುವ ಪ್ರೇಮಿಗಳ ದಿನ
ರಾಜಕೀಯ ಬದುಕಿಗೆ ಜನ್ಮ ನೀಡಿದ್ದು ಗ್ರಾಮೀಣ ಕ್ಷೇತ್ರ