ಸಮಾಜಕ್ಕೆ ಕೊಡುಗೆ ನೀಡಿದ ವ್ಯಕ್ತಿತ್ವ ಜೀವಂತ: ಡಾ.ಉದಪುಡಿ

KannadaprabhaNewsNetwork |  
Published : Jan 12, 2025, 01:19 AM IST
ಲೋಕಾಪುರ ಸಮೀಪ ಕಿಲ್ಲಾ ಹೊಸಕೊಟಿ ಗ್ರಾಮದಲ್ಲಿ ಲಿಂ.ಕಾಶಿಬಾಯಿ ಲಿ. ದುಂಡಪ್ಪ ನೀಲಗುಂದ ಶರಣ ದಂಪತಿಗಳ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು | Kannada Prabha

ಸಾರಾಂಶ

ಇಂದಿನ ವಿದ್ಯಾರ್ಥಿಗಳಿಗೆ ಇಂತಹ ಕಾರ್ಯಕ್ರಮಗಳು ಅತ್ಯವಶ್ಯಕ. ಹಲವಾರು ಹಿರಿಯರ ಸಮ್ಮುಖದಲ್ಲಿ ಕಾರ್ಯಕ್ರಮ ಆಯೋಜಿಸಿ ಅವರ ಆದರ್ಶ, ತತ್ವ ಸಿದ್ಧಾಂತಗಳು ಚಿರಸ್ಥಾಯಿಯಾಗಿ ಉಳಿಯುತ್ತವೆ

ಕನ್ನಡಪ್ರಭ ವಾರ್ತೆ ಲೋಕಾಪುರ

ಸಮಾಜಕ್ಕೆ ನೀಡಿದ ಕೊಡುಗೆಗಳಿಂದ ವ್ಯಕ್ತಿಯ ವ್ಯಕ್ತಿತ್ವ ಜೀವಂತವಾಗಿರುತ್ತದೆ ಎಂದು ರನ್ನ ಪ್ರತಿಷ್ಠಾನ ಸದಸ್ಯ ಡಾ.ಕೆ.ಎಲ್.ಉದಪುಡಿ ಹೇಳಿದರು.

ಸಮೀಪದ ಕಿಲ್ಲಾ ಹೊಸಕೊಟಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಜರುಗಿದ ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು, ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ, ಬಾಗಲಕೋಟೆ, ಕನ್ನಡ ಸಾಹಿತ್ತಯ ಪರಿಷತ್ತು ತಾಲೂಕು ಘಟಕ ಮುಧೋಳ ಲಿಂ. ಕಾಶಿಬಾಯಿ ನೀಲಗುಂದ ದಿ. ದುಂಡಪ್ಪ ನೀಲಗುಂದ ಶರಣ ದಂಪತಿ ದತ್ತಿ ಉಪನ್ಯಾಸ ಹಾಗೂ ತಿಂಗಳು ಬೆಳಕು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ವಿದ್ಯಾರ್ಥಿಗಳಿಗೆ ಇಂತಹ ಕಾರ್ಯಕ್ರಮಗಳು ಅತ್ಯವಶ್ಯಕ. ಹಲವಾರು ಹಿರಿಯರ ಸಮ್ಮುಖದಲ್ಲಿ ಕಾರ್ಯಕ್ರಮ ಆಯೋಜಿಸಿ ಅವರ ಆದರ್ಶ, ತತ್ವ ಸಿದ್ಧಾಂತಗಳು ಚಿರಸ್ಥಾಯಿಯಾಗಿ ಉಳಿಯುತ್ತವೆ ಎಂದರು.

ಮುಗು ರಾಜಶೇಖರ ಮುತ್ತಿನಮಠ ಉಪನ್ಯಾಸ ನೀಡಿ, ಕಾಶಿಬಾಯಿ ನೀಲಗುಂದ ಹಾಗೂ ದುಂಡಪ್ಪ ನೀಲಗುಂದ ಅವರು ಹಲವರಿಗೆ ಮೌಲ್ಯಯುತ ಜೀವನ ನೀಡಿ ಮಾರ್ಗದರ್ಶಕರಾಗಿದ್ದರು. ಬಹಳ ಸರಳವಾಗಿ ಆದರ್ಶ, ತತ್ವ ಸಿದ್ಧಾಂತಗಳ ಮುಖಾಂತರ ಬದುಕನ್ನು ಸವಿಸಿದವರು. ಇಂಥ ಮಹನೀಯರ ಹೆಸರಿನಲ್ಲಿ ಕಾರ್ಯಕ್ರಮ ಆಯೋಜಿಸಿರುವುದು ಸಂತಸ. ಅವರ ಜೀವನಮೌಲ್ಯ ನಮಗೆ ದಾರಿದೀಪವಾಗಿದೆ ಎಂದರು.

ವಿಶ್ರಾಂತ ಶಿಕ್ಷಕ ಹಾಗೂ ರನ್ನ ಪ್ರತಿಷ್ಠಾನದ ಸದಸ್ಯ ಎಸ್.ಕೆ.ಹೊಸಕೊಟಿ ಮಾತನಾಡಿ, ಹಿರಿಯರ ಹೆಸರಿನಲ್ಲಿ ಅವರ ಕುಟುಂಬ ದತ್ತಿ, ಪ್ರಶಸ್ತಿ ನೀಡಿ ಮುಂದಿನ ಪೀಳಿಗೆಗೆ ಅವರನ್ನು ಪರಿಚಯಿಸುವ ಕೆಲಸ ಮಾಡುತ್ತಿರುವುದು ಒಳ್ಳೆಯ ಬೆಳವಣೆಗೆ ಎಂದರು. ಇದೇ ವೇಳೆ ಸನ್ಮಾನ ಕಾರ್ಯಕ್ರಮ ನಡೆಯಿತು. ವಿದ್ಯಾರ್ಥಿಗಳಿಗೆ ಶಾಲಾ ಸಾಮಗ್ರಿ ಕಿಟ್ ವಿತರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಧೋಳ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಆನಂದ ಪೂಜಾರಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕ್ಷೇತ್ರ ಸಮನ್ವಯಾಧಿಕಾರಿ ಎ.ಆರ್.ಛಬ್ಬಿ, ಎಸ್.ಕೆ.ಹೊಸಕೊಟಿ, ಎಸ್‌ಡಿಎಂಸಿ ಅಧ್ಯಕ್ಷ ಲಕ್ಷ್ಮಣ ದಳವಾಯಿ, ಮುಗು ವಾಯ್.ವಾಯ್ ಯಡಹಳ್ಳಿ, ದತ್ತಿ ದಾನಿಗಳಾದ ಶಿವಪ್ಪ ನೀಲಗುಂಡ, ಕಸಾಪ ನಿಕಟಪೂರ್ವ ಅಧ್ಯಕ್ಷ ಸಂಗಮೇಶ ನೀಲಗುಂದ, ಗೌರವ ಉಪಸ್ಥಿತಿ ಲೋಕಾಪುರ ವಲಯ ಕಸಾಪ ಅಧ್ಯಕ್ಷ ಎಸ್.ಎಂ.ರಾಮದುರ್ಗ, ಎಸ್.ಕೆ.ಕುರಣಿ, ಸರಕಾರಿ ನೌಕರ ಸಂಘದ ಮಾಜಿ ಅಧ್ಯಕ್ಷ ಆರ್.ಎಚ್.ನಿಡೋಣಿ, ಪ್ರವೀಣ ಗಂಗಣ್ಣವರ, ಸುರೇಶ ಪುರವಾರ, ಸಿದ್ದು ಹೂಗಾರ, ಪ್ರಕಾಶ ಬೆಳಗಲಿ, ಸಂಗಮೇಶ ಶಿರಗುಂಪಿ, ಮುತ್ತು ತುಂಗಳ, ಗಂಗಾಧರ ಗಾಣಗೇರ, ಮಲ್ಲಪ್ಪ ಕೋಲ್ಹಾರ, ಅಲ್ಲಾಭಕ್ಷ ಬಾಗವಾನ, ಚಂದ್ರಕಾಂತ ರಂಗಣ್ಣವರ, ಬಿ.ಎ.ಹುಣಶಿಕಟ್ಟಿ, ಪ್ರಕಾಶ ಸಬರದ, ಶಾಲಾ ಸಿಬ್ಬಂದಿ ವರ್ಗ ಹಾಗೂ ಲೋಕಾಪುರ ಕನ್ನಡ ಸಾಹಿತ್ಯ ಪರಿಷತ್ತ ವಲಯ ಪದಾಧಿಕಾರಿಗಳು, ಶಾಲಾ ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಇದ್ದರು. ಸಂಚಾಲಕರಾಗಿ ಆರ್.ಆರ್.ಕೋಲ್ಹಾರ, ಸಿದ್ದು ವಿರಕ್ತಮಠ, ಪಿ.ಬಿ.ಹಿರೇಮಠ ಇದ್ದರು. ಎಂ.ಎನ್.ದಿವಾಣ ಸ್ವಾಗತಿಸಿ, ಬಿ.ಆರ್.ಬಳ್ಳಾರಿ ವಂದಿಸಿದರು.

PREV

Recommended Stories

ಗ್ರಾಮೀಣ ಭಜನಾ ಮಂಡಳಿಗಳಲ್ಲಿ ತತ್ವಪದಗಳು ಜೀವಂತ
ರಾಮದುರ್ಗ ಧನಲಕ್ಷ್ಮೀ ಶುಗರ್ ಚುನಾವಣೆ: ಸತತ 4ನೇ ಬಾರಿಗೆ ಯಾದವಾಡರ ನೇತೃತ್ವಕ್ಕೆ ಜಯ