ಹೆಣ್ಣನ್ನು ಪೂಜಿಸಲ್ಪಡುವ ಸ್ಥಳ ದೇವತೆಗಳ ನೆಲೆ

KannadaprabhaNewsNetwork | Published : Mar 9, 2025 1:45 AM

ಸಾರಾಂಶ

ಸಮಾಜದಲ್ಲಿ ಯಾವುದೇ ಬೇಧ, ಬಾವವಿಲ್ಲದೇ ಹೆಣ್ಣಿಗೂ ಸಾಮಾಜಿಕ, ಧಾರ್ಮಿಕ, ರಾಜಕೀಯ, ಅರ್ಥಿಕ ಕ್ಷೇತ್ರಗಳಲ್ಲೂ ಅವಕಾಶ ಕಲ್ಪಿಸಿ ಕೊಡಬೇಕು ಹಾಗೂ ಸಮಾಜದಲ್ಲಿ ಗೌರವ ಸಿಗಬೇಕು ಎಂದು ಟೌನ್ ಬ್ಯಾಂಕ್ ನಿರ್ದೇಶಕ ಬಾಲಚಂಧ್ರ ಹೇಳಿದರು.

ಕನ್ನಡಪ್ರಭ ವಾರ್ತೆ ಹೊಸಕೋಟೆಸಮಾಜದಲ್ಲಿ ಯಾವುದೇ ಬೇಧ, ಬಾವವಿಲ್ಲದೇ ಹೆಣ್ಣಿಗೂ ಸಾಮಾಜಿಕ, ಧಾರ್ಮಿಕ, ರಾಜಕೀಯ, ಅರ್ಥಿಕ ಕ್ಷೇತ್ರಗಳಲ್ಲೂ ಅವಕಾಶ ಕಲ್ಪಿಸಿ ಕೊಡಬೇಕು ಹಾಗೂ ಸಮಾಜದಲ್ಲಿ ಗೌರವ ಸಿಗಬೇಕು ಎಂದು ಟೌನ್ ಬ್ಯಾಂಕ್ ನಿರ್ದೇಶಕ ಬಾಲಚಂಧ್ರ ಹೇಳಿದರು.ನಗರದ ವರದಾಪುರದಲ್ಲಿರುವ ಸರ್ಕಾರಿ ಶಾಲೆ ಆವರಣದಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಹೆಣ್ಣನ್ನು ಎಲ್ಲಿ ಪೂಜಿಸಲ್ಪಡುವಳೋ ಗೌರವಿಸಲ್ಪಡವಳೋ ಅಲ್ಲಿ ದೇವತೆಗಳು ನೆಲೆಯಾಗುತ್ತವೆ ಎಂಬ ಪ್ರತೀತಿ ಇದೆ. ತಾಯಿ, ಅಕ್ಕ, ತಂಗಿ, ಹೆಂಡತಿ ಎಲ್ಲರಿಗೂ ಗೌರವ ಮನ್ನಣೆ ಸಿಗಬೇಕು. ಪ್ರಮುಖವಾಗಿ ಎಲ್ಲಾ ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಸೂಕ್ತ ಸ್ಥಾನಮಾನದ ಜೊತೆಗೆ ಭದ್ರತೆ ಕೊಡಬೇಕು ಎಂದರು.ಜಾತ್ರೆ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಹಂಚರಹಳ್ಳಿ ಆನಂದ್ ಮಾತನಾಡಿ, ಮಹಿಳೆಯರು ಅನಾದಿಕಾಲದಿಂದಲೂ ಸಾಧನೆ ಮಾಡಿದವರಾಗಿದ್ದು ಸಂಚಿಹೊನ್ನಮ್ಮ, ಅಕ್ಕಮಹಾದೇವಿಯರಂತಹ ಮಹಿಳೆಯರು ಶತಮಾನಗಳ ಹಿಂದೆಯೇ ಸಾಧನೆಯ ಹೆಜ್ಜೆ ಗುರುತು ಬಿಟ್ಟು ಹೋಗಿದ್ದಾರೆ. ಸಮಾಜದ ಎಲ್ಲಾ ಕ್ಷೇತ್ರಗಳಲ್ಲಿಯೂ ಮಹಿಳೆಯರ ಸಾಧನೆ ಕಾಣುತ್ತಿದ್ದು ಪ್ರಸ್ತುತ ಮಿಸಲಾತಿ ಶೇ 33ರಷ್ಟಿದ್ದು ಮುಂದಿನ ದಿನಗಳಲ್ಲಿ ಸಮಾನತೆ ದೊರೆಯಲಿ ಎಂದರು.ಶಿಕ್ಷಕಿ ಲೀಲಾವತಿ ಮಾತನಾಡಿ, ಹಲವಾರು ಸಮಸ್ಯೆಗಳ ನಡುವೆ ಮಹಿಳೆಯರು ಸಮಾಜದ ಎಲ್ಲಾ ರಂಗಗಳಲ್ಲಿ ಉನ್ನತ ಸಾಧನೆ ಮಾಡಿದ್ದು ಅಂತಹ ಮಹಿಳಾ ಸಾಧಕರನ್ನು ಸಂಘ ಸಂಸ್ಥೆಗಳು, ಸರ್ಕಾರಗಳು ಗುರುತಿಸಿ ಗೌರವಿಸಬೇಕು ಎಂದರು.ಜನಪದ ಗಾಯಕ ಹಾಗೂ ಜಾನಪದ ವಿಶ್ವವಿದ್ಯಾಲಯ ಸಿಂಡಿಕೇಟ್ ಸದಸ್ಯ ಮೋಹನ್ ಕುಮಾರ್, ಸಮಾಜ ಸೇವಕ ಸಿಹಿ ಮಂಜುನಾಥ್, ರಾಜಣ್ಣ, ಹರಳೂರು ಶಾಲೆ ಮುಖ್ಯ ಶಿಕ್ಷಕ ಗುರುಮೂರ್ತಿ, ಕೆಪಿಎಸ್ ವರ್ತೂರು ಶಾಲೆ ಶಿಕ್ಷಕ ಡಾ.ಆರ್.ಶಿವಕುಮಾರ್, ಟೌನ್ ಬ್ಯಾಂಕ್ ನಿರ್ದೇಶಕ ಬಾಲಚಂದ್ರ, , ಜಾತ್ರೆ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಹಂಚರಹಳ್ಳಿ ಆನಂದ್ ಕನ್ನಡ ಕಸ್ತೂರಿ ಸಂಘದ ಅಧ್ಯಕ್ಷ ವರದಾಪುರ ಶಿವಣ್ಣ, ಮಾನವ ಹಕ್ಕುಗಳ ಜಾಗೃತಿ ಸಮಿತಿ ಅಧ್ಯಕ್ಷ ಕೆ.ನಾಗರಾಜ್, ಜನಜಾಗೃತಿ ಸೇವಾ ಟ್ರಸ್ಟ್ ಅಧ್ಯಕ್ಷ ಜೆ.ಎಂ.ಹಸೇನ್, ಯುವ ಮುಖಂಡ ಶಿವಾನಂದ ಬಾಬು ವರದಾಪುರ, ಮುಖ್ಯ ಶಿಕ್ಷಕಿ ಲೀಲಾವತಿ ಹಾಜರಿದ್ದರು.

Share this article