ರಾಣಿಬೆನ್ನೂರು: ಹಿಂದೂ ಸಮ್ಮೇಳನದ ಅಂಗವಾಗಿ ನಗರದಲ್ಲಿ ಭಾನುವಾರ ಬೃಹತ್ ಶೋಭಾಯಾತ್ರೆ ನಡೆಯಿತು.
ನಗರದ ಕೆಇಬಿ ವಿನಾಯಕ ದೇವಸ್ಥಾನದ ಬಳಿಯಿಂದ ಸಂಜೆ 5.30ಕ್ಕೆ ಹೊರಟ ಶೋಭಾಯಾತ್ರೆಯು ಬಸ್‌ಸ್ಟ್ಯಾಂ ಡ್, ಹಲಗೇರಿಕ್ರಾಸ್, ಕುರುಬಗೇರಿ ಕ್ರಾಸ್ ಮಾರ್ಗವಾಗಿ ಸಮ್ಮೇಳನ ಆಯೋಜಿಸಿದ್ದ ಹವಾಲ್ದಾರ ಹೊಂಡದ ಎದುರಿನ ವಾಲಿಯವರ ಜಾಗೆಗೆ ಬಂದು ತಲುಪಿತು.ಮೆರವಣಿಗೆ ಸಾಗುವ ಮಾರ್ಗದುದ್ದಕ್ಕೂ ರಸ್ತೆ ವಿಭಜಕಕ್ಕೆ ಕೇಸರಿ ಬಾವುಟ ಹಾಗೂ ಬಂಟಿಂಗ್ಸಗಳಿಂದ ಅಲಂಕರಿಸಲಾಗಿತ್ತು. ಸಾರ್ವಜನಿಕರು ಶೋಭಾಯಾತ್ರೆಯಲ್ಲಿ ಪಾಲ್ಗೊಂಡವರ ಮೇಲೆ ಹೂಗಳನ್ನು ಹಾಕಿ ಸ್ವಾಗತಿಸಿದರು. ಗೊಂಬೆ ವೇಷಧಾರಿಗಳು, ಮಹಿಳೆಯರ ಡೊಳ್ಳು ವಾದ್ಯ, ಹಲಗೆ ವಾದ್ಯ, ವಿವಿಧ ಮಹನೀಯರುಗಳ ವೇಷ ಧರಿಸಿದ ಶಾಲಾ ಮಕ್ಕಳು, ಅಶ್ವಾರೋಹಿ ಶಿವಾಜಿ ಮೂರ್ತಿ, ಸಮಾಳ ವಾದ್ಯ ತಂಡ, ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರ ಹೊಂದಿದ ಆಟೋಗಳು ಶೋಭಾಯಾತ್ರೆಯ ವಿಶೇಷ ಆಕರ್ಷಣೆಯಾಗಿದ್ದವು. ಸಮ್ಮೇಳನದ ಅಧ್ಯಕ್ಷ ಮಂಜುನಾಥ ಮಣೇಗಾರ, ಉಪಾಧ್ಯಕ್ಷ ರಾಜುರೇವಣಕರ, ಕಾರ್ಯದರ್ಶಿ ಗಿರೀಶ ಬ್ಯಾಡಗಿ, ಸಂದೀಪ ಕುರಡೇಕರ, ಪ್ರದೀಪ ಮಜ್ಜಗಿ, ವಿನಾಯಕ ಜೋಶಿ, ಕೆ. ಶಿವಲಿಂಗಪ್ಪ, ಪ್ರಕಾಶ ಬುರಡಿಕಟ್ಟಿ, ಯುವರಾಜ ಬ್ಯಾಡಗಿ, ಚೋಳಪ್ಪ ಕಸವಾಳ, ರಾಯಣ್ಣ ಮಾಕನೂರ, ಸಂತೋಷ ತೆವರಿ, ಸಂಕಪ್ಪ ಮಾರನಾಳ, ಶಿವಕುಮಾರ ಹರ್ಕನಾಳ, ಮಂಜುಳಾ ಹತ್ತಿ, ರಾಮಣ್ಣ ಕಾಕಿ, ನಿತ್ಯಾನಂದ ಕುಂದಾಪುರ, ಮೈಲಪ್ಪ ಗೋಣಿಬಸಮ್ಮನವರ, ಪ್ರಕಾಶ ಕಾಕಿ, ವೀರೇಶ ಹೆದ್ದೇರಿ, ಕೊಟ್ರೇಶಪ್ಪ ಎಮ್ಮಿ, ಪ್ರಕಾಶ ಪೂಜಾರ, ಗೀತಾ ಜಂಬಗಿ, ಮಮತಾ ಜಾಧವನಾಗರಾಜ ಕೊರವರ, ವಿನಯ ಬಾಳನಗೌಡ್ರ, ಗಂಗಮ್ಮ ಹಾವನೂರ, ಪವಿತ್ರಾ ಹುಲ್ಮನಿ, ಮಂಜುಳಾ ಹತ್ತಿ, ಸರೋಜಾ ಉದಗಟ್ಟಿ ಮತ್ತಿತರರಿದ್ದರು.
Subscribe to get breaking news alertsSubscribe Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.