ಪರಿಶುದ್ಧ ಜೀವನಕ್ಕ ಆಧ್ಯಾತ್ಮ ಅರಿವು ಬೇಕು

KannadaprabhaNewsNetwork |  
Published : May 20, 2024, 01:34 AM IST
19ಐಎನ್‌ಡಿ2,ಇಂಡಿ ತಾಲೂಕಿನ  ಗುಬ್ಬೆವಾಡ ಗ್ರಾಮದಲ್ಲಿ ಗುಪ್ತಾಯಿದೇವಿ ಜಾತ್ರಾ ಮಹೋತ್ಸವ ಮತ್ತು ನೂತನವಾಗಿ ನಿರ್ಮಿಸಿದ ಭವ್ಯಗೋಪುರ ಕಳಸಾರೋಹಣ ಕಾರ್ಯಕ್ರಮದಲ್ಲಿ ಕುಂಭ ಹೊತ್ತ ಮಹಿಳೆಯರು ಪಾಲ್ಗೊಂಡಿದ್ದರು. | Kannada Prabha

ಸಾರಾಂಶ

ಪರಿಶುದ್ಧವಾದ, ಪವಿತ್ರವಾದ ಜೀವನ ರೂಪಿಸಿಕೊಳ್ಳಲು ಆಧ್ಯಾತ್ಮ ಜ್ಞಾನದ ಅರಿವು ಬೇಕು ಎಂದು ಖೇಡಗಿ ವಿರಕ್ತಮಠದ ಶಿವಬಸವ ರಾಜೇಂದ್ರ ಶ್ರೀಗಳು ಹೇಳಿದರು.

ಕನ್ನಡಪ್ರಭ ವಾರ್ತೆ ಇಂಡಿ

ಪರಿಶುದ್ಧವಾದ, ಪವಿತ್ರವಾದ ಜೀವನ ರೂಪಿಸಿಕೊಳ್ಳಲು ಆಧ್ಯಾತ್ಮ ಜ್ಞಾನದ ಅರಿವು ಬೇಕು ಎಂದು ಖೇಡಗಿ ವಿರಕ್ತಮಠದ ಶಿವಬಸವ ರಾಜೇಂದ್ರ ಶ್ರೀಗಳು ಹೇಳಿದರು.

ಅವರು ತಾಲೂಕಿನ ಗುಬ್ಬೆವಾಡ ಗ್ರಾಮದಲ್ಲಿ ಗುಪ್ತಾಯಿದೇವಿ ಜಾತ್ರಾ ಮಹೋತ್ಸವ ಮತ್ತು ನೂತನವಾಗಿ ನಿರ್ಮಿಸಿದ ಗೋಪುರ ಕಳಸಾರೋಹಣ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿ, ಆಧ್ಯಾತ್ಮದ ಜ್ಞಾನ ಬದುಕನ್ನು ವಿಕಾಸಗೊಳಿಸಿ ಸನ್ಮಾರ್ಗದತ್ತ ಕರೆತರಲು ಸಹಕಾರಿಯಾಗುತ್ತದೆ. ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂಬ ಸಂದೇಶ ಪಾಲಿಸಬೇಕಿದೆ. ಇಂದು ಮಾನವ ಧಮಧ ಉಳಿದರೆ ಎಲ್ಲ ಧರ್ಮಗಳು ಉಳಿಯಲು ಸಾಧ್ಯ ಎಂದರು.ದೇವಸ್ಥಾನ ಸಮಿತಿಯ ಸತೀಶ ಚಾಂದಕವಟೆ ಮಾತನಾಡಿ, ಮನಸ್ಸು ಶುದ್ಧವಾಗಿಟ್ಟುಕೊಳ್ಳಬೇಕು. ಭಕ್ತರಲ್ಲಿ ಭಕ್ತಿ ಪ್ರತಿಷ್ಠಾಪನೆಯಾದಾಗ ಮಾತ್ರ ಅದಕ್ಕೆ ನಿಜವಾದ ಅರ್ಥ ಬರುತ್ತದೆ. ದೇಗುಲಗಳು ಮನಸ್ಸಿಗೆ ನೆಮ್ಮದಿ ನೀಡುವ ಸ್ಥಳ ಎಂದರು.

ದೇವಸ್ಥಾನ ಸಮಿತಿಯ ಧರ್ಮಣ್ಣ ಮರಗೂರ, ಕಾಶಿನಾಥ ಲಚ್ಯಾಣ, ಶಿವಲಿಂಗ ಲಚ್ಯಾಣ, ದೀಲಪ್ಪ ಮರಗೂರ, ಬಸವರಾಜ ಹೆಗೊಂಡೆ, ಶಿವರಾಯ ಕೋಳಿ ಮಾತನಾಡಿದರು. ವೇದಿಕೆಯ ಮೇಲೆ ಮಲ್ಲಯ್ಯ ಮಠಪತಿ, ಬಸಲಿಂಗಯ್ಯ ಮಠಪತಿ, ಸಿದ್ದರಾಮ ಚಾಂದಕವಠೆ, ಗ್ರಾಪಂ ಅಧ್ಯಕ್ಷ ಸುರೇಶ ಆಲೂರ, ಉಪಾಧ್ಯಕ್ಷ ಆನಂದರಾವ ಚಾಂದಕವಟೆ, ಸದಸ್ಯರಾದ ಅಮೃತ ಮರಗೂರ, ಸಿದ್ದು ಕೋಲಿ, ಹಸನಸಾಬ ಕಸಾಯಿ, ಚಂದ್ರಕಾಂತ ಮರಗೂರ, ಸಿದ್ದಾರೂಢ ಮರಗೂರ, ಆದೇಶ ಧೂಳೆ, ಪಂಚಪ್ಪ ಮರಗೂರ ಮೊದಲಾದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಗವಂತನ ಶಕ್ತಿ ಪಡೆದವರಿಂದ ಡಿಕೆಶಿ ಸಿಎಂ ಆಗುವ ದಿನಾಂಕ ನಿಗದಿ : ಇಕ್ಬಾಲ್
ಜನ ನಂಗೆ ಇನ್ನೊಂದು ಅವಕಾಶ ಕೊಡಲಿ : ಎಚ್ಡಿಕೆ