ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
ಕೇಸಾಪೂರದಲ್ಲಿನ ಕಿರಾಣಿ ಅಂಗಡಿ, ಪಾನ್‌ಶಾಪ್ ಮತ್ತು ಚಹಾ ಅಂಗಡಿಗಳಲ್ಲಿ ಬಹು ದಿನಗಳಿಂದ ಅಕ್ರಮ ಮದ್ಯ ಮಾರಾಟ ಮಾಡುತ್ತಾ ಬಂದಿದ್ದಾರೆ. ಇದರಿಂದ ನಮ್ಮ ಊರಿನ ಯುವಕರು, ಕಾಲೇಜ ವಿದ್ಯಾರ್ಥಿಗಳು ಸಹ ಮದ್ಯ ವ್ಯಸನಿಗಳಾಗಿದ್ದಾರೆ. ಎಷ್ಟೋ ಕುಟುಂಬಗಳು ಬೀದಿ ಪಾಲಾಗಿವೆ. ಎಷ್ಟೋ ಜನರು, ಯುವಕರು ಸಹ ಕುಡಿತದ ಚಟಕ್ಕೆ ಬಲಿಯಾಗಿ ಜೀವ ಕಳೆದುಕೊಂಡಿದ್ದಾರೆ. ಆದ ಕಾರಣ ನಮ್ಮ ಊರಿನ ಎಲ್ಲಾ ಹಿರಿಯರು ಮಹಿಳಾ ಸಂಘದವರು, ಕಾಲೇಜ ವಿದ್ಯಾರ್ಥಿಗಳು ಕೆಲವು ದಿನಗಳ ಹಿಂದೆ ಊರಲ್ಲಿ ಸಭೆ ಸೇರಿ ನಮ್ಮ ಊರಿನಲ್ಲಿ ಅಕ್ರಮ ಮದ್ಯ ಮಾರಾಟ ನಿಷೇಧಿಸಬೇಕೆಂದು ನಿರ್ಧರಿಸಿದರು. ಅಂದೇ ನಮ್ಮ ಊರಿನಲ್ಲಿ ಅಕ್ರಮ ಮದ್ಯ ಮಾರಾಟ ಮಾಡುವವರ ಅಂಗಡಿಗಳಿಗೆ ಹೋಗಿ ಇನ್ನೂ ಮುಂದೆ ಅಕ್ರಮ ಮದ್ಯ ಮಾರಾಟ ಮಾಡಬಾರದು ಎಂದು ತಿಳಿ ಹೇಳಲಾಯಿತು. ಅಂದೇ ಆಲೂರ ಹಾಗೂ ನೆರಬೆಂಚಿ ಗ್ರಾಮಗಳಿಗೆ ಹೋಗಿ ಅಲ್ಲಿಯೂ ಮದ್ಯ ಅಕ್ರಮ ಮದ್ಯ ಮಾರಾಟ ಮಾಡಬಾರದು ಎಂದು ತಿಳಿ ಹೇಳಲಾಯಿತು. ಆದರೆ, ಇದ್ಯಾವುದಕ್ಕೂ ಮಣಿಯದೇ ಮತ್ತೆ ಅವ್ಯಾಹತವಾಗಿ ಅಕ್ರಮ ಮದ್ಯ ಮಾರಾಟ ನಡೆದಿದೆ. ಹೀಗಾಗಿ ಈ ಊರುಗಳಲ್ಲಿ ಮದ್ಯ ಮಾರಾಟ ಮಾಡುವವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಮನವಿ ಸಲ್ಲಿಸಿ ಆಗ್ರಹಿಸಿದರು.
ಈ ವೇಳೆ ಮುಖಂಡರಾದ ಮಲ್ಲಿಕಾರ್ಜುನ ದೇಶಮುಖ, ವೈ.ಬಿ.ತಳವಾರ, ಶಾಂತಗೌಡ ನಾಡಗೌಡ, ಜಿ.ಜಿ.ಗೌಡರ, ದ್ಯಾಮಣ್ಣ ಹಿರೇಕುರಬರ, ಸಿದ್ದಪ್ಪ ಉಪ್ಪಿನಕಾಯಿ, ಸುರೇಶ ಭೈರವಾಡಗಿ, ಸಂಗನಗೌಡ ಪಾಟೀಲ, ನಾಗರಾಜ ಹಿರೇಕುರಬರ, ಶ್ರೀನಿವಾಸ ಗೌಂಡಿ ಸೇರಿದಂತೆ ಹಲವರು ಇದ್ದರು.