ನೀರಿನ ಕೊರತೆ ನೀಗಿಸಿಕೊಂಡರೆ ಸಮೃದ್ಧ ಬೆಳೆ ಬೆಳೆಯಲು ಸಾಧ್ಯ

KannadaprabhaNewsNetwork | Published : Nov 2, 2023 1:03 AM

ಸಾರಾಂಶ

ನಮ್ಮ ಹೊಲದಲ್ಲಿ ಬಿದ್ದ ನೀರನ್ನು ಅಲ್ಲಿಯೇ ನಿಲ್ಲಿಸಿ ಇಂಗುವಂತೆ ಮಾಡಿದರೆ ಮಾತ್ರ ನಮ್ಮ ಅಂತರ್ಜಲದ ಪ್ರಮಾಣ ಜಾಸ್ತಿ ಆಗುತ್ತದೆ. ಇತ್ತೀಚಿನ ದಿನಗಳಲ್ಲಿ ಕೃಷಿಯಲ್ಲಿ ಕಾಣುತ್ತಿರುವ ಪ್ರಮುಖ ಸಮಸ್ಯೆ ನೀರಿನ ಕೊರತೆ. ಆ ಕೊರತೆ ನೀಗಿಸಿಕೊಂಡರೆ ಮಾತ್ರ ರೈತರು ಸಮೃದ್ಧ ಬೆಳೆ ಬೆಳೆಯಲು ಸಾಧ್ಯ ಎಂದು ವಾಟರ್‌ಮ್ಯಾನ್ ಆಫ್ ಇಂಡಿಯಾ ಖ್ಯಾತರಾದ ರಾಜಸ್ತಾನದ ರಾಜೇಂದ್ರಸಿಂಗ್ ಹೇಳಿದರು.

ಮುಳಗುಂದ: ನಮ್ಮ ಹೊಲದಲ್ಲಿ ಬಿದ್ದ ನೀರನ್ನು ಅಲ್ಲಿಯೇ ನಿಲ್ಲಿಸಿ ಇಂಗುವಂತೆ ಮಾಡಿದರೆ ಮಾತ್ರ ನಮ್ಮ ಅಂತರ್ಜಲದ ಪ್ರಮಾಣ ಜಾಸ್ತಿ ಆಗುತ್ತದೆ. ಇತ್ತೀಚಿನ ದಿನಗಳಲ್ಲಿ ಕೃಷಿಯಲ್ಲಿ ಕಾಣುತ್ತಿರುವ ಪ್ರಮುಖ ಸಮಸ್ಯೆ ನೀರಿನ ಕೊರತೆ. ಆ ಕೊರತೆ ನೀಗಿಸಿಕೊಂಡರೆ ಮಾತ್ರ ರೈತರು ಸಮೃದ್ಧ ಬೆಳೆ ಬೆಳೆಯಲು ಸಾಧ್ಯ ಎಂದು ವಾಟರ್‌ಮ್ಯಾನ್ ಆಫ್ ಇಂಡಿಯಾ ಖ್ಯಾತರಾದ ರಾಜಸ್ತಾನದ ರಾಜೇಂದ್ರಸಿಂಗ್ ಹೇಳಿದರು.

ಪಟ್ಟಣದ ಶ್ರೀ ಬಾಲಲೀಲಾ ಮಹಾಂತ ಶಿವಯೋಗಿಗಳ ಮಠದ ಸಭಾಭವನದಲ್ಲಿ ರೈತರ ಜತೆ ನಡೆದ ಬರ ನಿರೋಧಕತೆ ಮತ್ತು ನೀರು ಸಂರಕ್ಷಣೆ ಕುರಿತು ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮಳೆ ನೀರು ನೈಸರ್ಗಿಕವಾಗಿ ಸಿಗುವ ಉತ್ತಮ ಸಂಪತ್ತು. ಆದರೆ ಅದು ಪೋಲಾಗುವ ಮೂಲಕ ಎಲ್ಲೆಡೆಯೂ ಕೃಷಿಯಲ್ಲಿ ಅನಿಶ್ಚಿತತೆ ಮನೆ ಮಾಡಿದೆ. ಹಾಗಾಗಿ ರೈತರು ತಮ್ಮ ಹೊಲದಲ್ಲಿ ಬೀಳುವ ಮಳೆ ನೀರನ್ನು ಅಲ್ಲಿಯೇ ಇಂಗಿಸಿದರೆ ಉತ್ತಮ ಬೆಳೆ ಬೆಳೆಯಲು ಸಾಧ್ಯ. ಮಳೆ ನೀರು ನಿಲ್ಲಿಸಲು ವೈಜ್ಞಾನಿಕ ರೀತಿಯಲ್ಲಿ ಬದು, ಚೆಕ್ ಡ್ಯಾಂ, ಕೃಷಿ ಹೊಂಡಗಳ ನಿರ್ಮಾಣ ಅವಶ್ಯಕ ಎಂದರು.

ಸಹಾಯಕ ಕೃಷಿ ನಿರ್ದೇಶಕ ಮಲ್ಲಯ್ಯಕೊರಣ್ಣವರ ಮಾತನಾಡಿ, ನೀರು ಮತ್ತು ಮಣ್ಣು ಸಂರಕ್ಷಣೆಯ ಮೂಲ ಉದ್ದೇಶದೊಂದಿಗೆ ರಿವಾರ್ಡ್ ಯೋಜನೆ ಮುಳಗುಂದ ಭಾಗಕ್ಕೆ ಬಂದಿದೆ. ಹಾಗಾಗಿ ಅರ್ಹ ರೈತರು ಈ ಯೋಜನೆಯ ಸಂಪೂರ್ಣ ಉಪಯೋಗ ಪಡೆಯಬಹುದು ಎಂದರು.

ಈ ವೇಳೆ ರೈತರು ಬರ ನಿರ್ವಹಣೆ ಕುರಿತು ಉತ್ತಮ ಸಂವಾದ ನಡೆಸಿದರು. ಕೃಷಿ ಅಧಿಕಾರಿ ಎಫ್‌.ಸಿ. ಗುರಿಕಾರ, ರೈತ ಸಂಘದ ಅಧ್ಯಕ್ಷ ಬಸವರಾಜ ಕರಿಗಾರ, ಎಂ.ಡಿ. ಬಟ್ಟೂರ, ಮಂಗಳಾ ನೀಲಗುಂದ, ಎ.ಎಂ. ಹುಬ್ಬಳ್ಳಿ, ಮಹಾದೇವಪ್ಪ ಗಡಾದ, ಬಸವರಾಜ ಬಾತಾಖಾನಿ, ಮಹಾಂತಪ್ಪ ನೀಲಗುಂದ, ದೇವರಾಜ ಸಂಗನಪೇಟಿ ಹಾಗೂ ರಿವಾರ್ಡ್ ಯೋಜನೆಯ ಸಿಬ್ಬಂದಿ ಇದ್ದರು. ದಾಕ್ಷಾಯಿಣಿ ಕುರ್ತಕೋಟಿ ಕಾರ್ಯಕ್ರಮ ನಿರೂಪಿಸಿದರು, ಶಬನಮ್ ಬಾನು ಸ್ವಾಗತಿಸಿದರು. ಶೇಖರ್ ನಾಯ್ಕ ವಂದಿಸಿದರು.

Share this article