ಪ್ರತಿಯೊಬ್ಬರಲ್ಲೂ ಸೇವಾಭಾವನೆ ಮುಖ್ಯ: ದಿನ್ನೂರು ವೆಂಕಟೇಶ್

KannadaprabhaNewsNetwork |  
Published : Jul 28, 2025, 12:31 AM IST
 ವಿಜೆಪಿ ೨೫ಜೆಸಿಐ ಅಲ್ಯೂಮಿನಿ ಕ್ಲಬ್, ಜೆಸಿಐ ಅಲ್ಯೂಮಿನಿ ಕ್ಲಬ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಆಕಾಶ್ ಸಮೂಹ ಸಂವಹನ ಸಂಸ್ಥೆಯ ಸಹಕಾರದೊಂದಿಗೆ ಏರ್ಪಡಿಸಲಾಗಿದ್ದ ರಕ್ತದಾನ ಶಿಬಿರ, ಉಚಿತ ನೇತ್ರ ತಪಾಸಣಾ ಶಿಬಿರ, ಉಚಿತ ಆರೋಗ್ಯ ತಪಾಸಣಾ ಶಿಬಿರ, ರಕ್ತದ ಗುಂಪು ತಪಾಸಣೆ, ಮಧುಮೇಹ ಹಾಗೂ ರಕ್ತದೊತ್ತಡ ತಪಾಸಣಾ ಕಾರ್ಯಕ್ರಮದಲ್ಲಿ ವಿಜಯಪುರ  ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ದಿನ್ನೂರ್ ವೆಂಕಟೇಶ್ ಮತ್ತಿತರರು. | Kannada Prabha

ಸಾರಾಂಶ

ದೃಷ್ಟಿ ಆಸ್ಪತ್ರೆಯ ಡಾ.ಸಂಜಯ್, ಡಾ.ಮಧುಸೂದನ್‌ ಹಾಗೂ ಸಿಬ್ಬಂದಿ ನೇತ್ರ ತಪಾಸಣೆ ನಡೆಸಿದರು. ದೇವನಹಳ್ಳಿಯ ಆಕಾಶ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಡಾ.ರಂಗನಾಥ್, ಡಾ.ಮಕ್ಸೂದ್, ಹಾಗೂ ಸಿಬ್ಬಂದಿ ವರ್ಗ ಹೃದ್ರೋಗ ತಪಾಸಣೆ, ಮಧುಮೇಹ, ರಕ್ತದೊತ್ತಡ ತಪಾಸಣೆ ನಡೆಸಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ರಕ್ತದಾನ ದಾನಗಳಲ್ಲಿಯೇ ಶ್ರೇಷ್ಠವಾದದ್ದು, ಒಂದು ಜೀವ ಉಳಿಸುವ ಉದ್ದೇಶದಿಂದ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡುವ ಕಾರ್ಯ ಶ್ಲಾಘನೀಯವಾಗಿದ್ದು, ಅದಕ್ಕೆ ಪ್ರತಿಯೊಬ್ಬರೂ ಸೇವಾ ಮನೋಭಾವನೆ ಬೆಳೆಸಿಕೊಳ್ಳುವುದು ಮುಖ್ಯ ಎಂದು ವಿಜಯಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದಿನ್ನೂರು ಕೆ. ವೆಂಕಟೇಶ್ ಹೇಳಿದರು.

ಚನ್ನರಾಯಪಟ್ಟಣ ಹೋಬಳಿಯ ದಿನ್ನೂರಿನ ಬೀಡಿಗಾನಹಳ್ಳಿ ಕ್ರಾಸ್ ಗೃಹಕಚೇರಿಯಲ್ಲಿ ವಿಜಯಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದಿನ್ನೂರು ವೆಂಕಟೇಶ್ ಹುಟ್ಟುಹಬ್ಬದ ಪ್ರಯುಕ್ತ ಜೆಸಿಐ ಅಲ್ಯೂಮಿನಿ ಕ್ಲಬ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಆಕಾಶ್ ಸಮೂಹ ಸಂವಹನ ಸಂಸ್ಥೆಗಳ ಸಹಕಾರದೊಂದಿಗೆ ಏರ್ಪಡಿಸಿದ್ದ ರಕ್ತದಾನ ಶಿಬಿರ, ಉಚಿತ ನೇತ್ರ ತಪಾಸಣಾ ಶಿಬಿರ, ಉಚಿತ ಆರೋಗ್ಯ ತಪಾಸಣಾ ಶಿಬಿರ, ರಕ್ತದ ಗುಂಪು ತಪಾಸಣೆ, ಮಧುಮೇಹ ಹಾಗೂ ರಕ್ತದೊತ್ತಡ ತಪಾಸಣೆ ಮತ್ತು ಕೆರೆ ಅಂಗಳದಲ್ಲಿ ಸಸಿ ನೆಡುವ ಕಾರ್ಯಕ್ರಮಗಳನ್ನು

ಉದ್ಘಾಟಿಸಿ ಅವರು ಮಾತನಾಡಿದರು.

ಈ ಸಂದರ್ಭದಲ್ಲಿ ದೃಷ್ಟಿ ಆಸ್ಪತ್ರೆಯ ಡಾ.ಸಂಜಯ್, ಡಾ.ಮಧುಸೂದನ್‌ ಹಾಗೂ ಸಿಬ್ಬಂದಿ ನೇತ್ರ ತಪಾಸಣೆ ನಡೆಸಿದರು. ದೇವನಹಳ್ಳಿಯ ಆಕಾಶ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಡಾ.ರಂಗನಾಥ್, ಡಾ.ಮಕ್ಸೂದ್, ಹಾಗೂ ಸಿಬ್ಬಂದಿ ವರ್ಗ ಹೃದ್ರೋಗ ತಪಾಸಣೆ, ಮಧುಮೇಹ, ರಕ್ತದೊತ್ತಡ ತಪಾಸಣೆ ನಡೆಸಿದರು. ಯಲಹಂಕದ ಲಯನ್ಸ್ ಕ್ಲಬ್ ಡಾ.ರೇಖಾ ಮತ್ತು ಸಿಬ್ಬಂದಿ ವರ್ಗದವರು ರಕ್ತಸಂಗ್ರಹಣ ಕೇಂದ್ರದಿಂದ 60 ಯೂನಿಟ್ ರಕ್ತ ಸಂಗ್ರಹಿಸಲಾಯಿತು.

ಈ ಸಂದರ್ಭದಲ್ಲಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನಾ ಪ್ರಾಧಿಕಾರದ ಅಧ್ಯಕ್ಷ ವಿ. ಶಾಂತಕುಮಾರ್, ನಿರ್ದೇಶಕ ಪ್ರಸನ್ನ ಕುಮಾರ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಕೆ.ಆರ್.ನಾಗೇಶ್, ದೇವನಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಸಿ.ಮಂಜುನಾಥ್, ಯುವ ಕಾಂಗ್ರೆಸ್‌ ಭಾನುಚಂದ್ರ, ಇಮ್ದಾದ್ ಸುಲ್ತಾನ್, ಚನ್ನರಾಯಪಟ್ಟಣ ಗ್ರಾಪಂ ಸದಸ್ಯರಾದ ಬಾಬಣ್ಣ, ಮಾಜಿ ಸದಸ್ಯ ನಾರಾಯಣಸ್ವಾಮಿ, ಐಬಸಾಪುರ ಗ್ರಾಪಂ ಸದಸ್ಯರಾದ ತಮ್ಮೇಗೌಡ, ಭರತ್, ಐಬಿ ಆಂಜಿನಪ್ಪ, ಬೂದಿಗೆರೆ ಶ್ರೀನಿವಾಸಗೌಡ, ಶ್ರೀ ಕ್ಷೇತ್ರ ಧರ್ಮಸ್ಥಳ ಯೋಜನಾ ಅಭಿವೃದ್ಧಿ ಸಂಘದ ರವಿನಾಯಕ್, ಸೀನಿಯರ್ ಚೇಂಬರ್ ಸಂಸ್ಥೆ ಅಧ್ಯಕ್ಷ ಅನೀಸ್ ಉರ್ ರೆಹಮಾನ್, ಜೇಸಿಸ್ ಸಂಸ್ಥೆ ಮಾಜಿ ಅಧ್ಯಕ್ಷ ಎಸ್.ರಮೇಶ್, ಜನಾರ್ದನ್, ಜೆಸಿರೇಟ ಅಧ್ಯಕ್ಷ ಮಾಧವಿ ರಮೇಶ್‌ ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೆ.ಎಸ್.ಪುಟ್ಟಣ್ಣಯ್ಯ ಆದರ್ಶ ಎಲ್ಲಾ ಕಾಲಕ್ಕೂ ಮಾದರಿ, ಅನುಸರಣೀಯ: ನಾಗತಿಹಳ್ಳಿ ಚಂದ್ರಶೇಖರ್
ಮೇಲುಕೋಟೆ: ಶ್ರೀದೇವಿ ಭೂದೇವಿಯರಿಗೆ ನೂರ್ ತಡಾ ಉತ್ಸವ