ದೇವರ ದಾಸಿಮಯ್ಯ ಜಯಂತಿ । ದೂಡಾ ಅಧ್ಯಕ್ಷ ಅಭಿಮತ । ದಾಸಿಮಯ್ಯರ ಭಾವಿತ್ರಕ್ಕೆ ಪುಷ್ಪ ನಮನ
ಕಾಯಕ ತತ್ವವನ್ನು ತಮ್ಮ ಜೀವನದಲ್ಲಿ ಸಂಪೂರ್ಣವಾಗಿ ಅಳವಡಿಸಿಕೊಂಡವರು ಆದ್ಯ ವಚನಕಾರ ದೇವರ ದಾಸಿಮಯ್ಯನವರು ಎಂದು ದೂಡಾ ಅಧ್ಯಕ್ಷ ದಿನೇಶ್.ಕೆ.ಶೆಟ್ಟಿ ಹೇಳಿದರು.
ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಹಾಗೂ ಜಿಲ್ಲಾ ನೇಕಾರರ ಸಮುದಾಯಗಳ ಒಕ್ಕೂಟ ಜಂಟಿಯಾಗಿ ಆಯೋಜಿಸಲಾಗಿದ್ದ ದೇವರ ದಾಸಿಮಯ್ಯ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಬಳಿಕ ಮಾತಾನಾಡಿದರು.ಶ್ರೀ ದೇವರ ದಾಸಿಮಯ್ಯನವರು ಕರ್ನಾಟಕ ರಾಜ್ಯದ ಪ್ರಸಿದ್ದ ಆದ್ಯ ಕನ್ನಡ ವಚನಾಕರರ ಗುರುಗಳಲ್ಲಿ ಒಬ್ಬರು, ಹನ್ನೆರಡನೆ ಶತಮಾನದಲ್ಲಿ ಶರಣಕ್ರಾಂತಿ ನಡೆದು ಸಮಾಜದಲ್ಲಿ ಬೇರೂರಿದ್ದ ಜಾತಿಯತೆ, ಅಸಮಾನತೆ, ಮೌಢ್ಯತೆ ತೊಲಗಿಸಲು, ಎಲ್ಲರೂ ಸಮಾನರು ಎಂದು ಅನುಭವ ಮಂಟಪದಲ್ಲಿ ಒಟ್ಟಿಗೆ ಸೇರಿ ಚರ್ಚಿಸುತ್ತಿದ್ದರು. ಶರಣರು ಕಾಯಕ ಮತ್ತು ದಾಸೋಹಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದರು, ಕಾಯಕ ಎಂದರೆ ಮನಸ್ಸಿಟ್ಟು ದುಡಿಯುವುದು, ದಾಸೋಹವೆಂದರೆ ದುಡಿದದ್ದನ್ನು ನಾವು ಉಪಯೋಗಿಸಿಕೊಂಡು ಸಮಾಜದ ಇತರರಿಗೂ ಹಂಚುವುದಾಗಿದೆ. ಹಾಗಾಗಿ ಎಲ್ಲರೂ ಕಾಯಕ ಶರಣರ ಆದರ್ಶಗಳನ್ನು ಪಾಲಿಸೋಣ ಎಂದರು. ಜೀವನ ಮತ್ತು ವಚನ ಬೋಧನೆಗಳು ಕರ್ನಾಟಕ ಸಂಸ್ಕೃತಿ ಮತ್ತು ನಂಬಿಕೆಗಳ ಮೇಲೆ ಆಳವಾದ ಪ್ರಭಾವವನ್ನು ಬೀರಿವೆ.ಇಂತಹ ಮಹಾನ್ ಕ್ರಾಂತಿಕಾರಿ ಕನ್ನಡದ ಆದ್ಯ ವಚನಕಾರ ದೇವರ ದಾಸಿಮಯ್ಯ ಎಂದರು.
ಹೊಳೆಸಿರಿಗೆರೆಯ ಡಿ.ಸಿದ್ದೇಶ್ ಉಪನ್ಯಾಸ ನೀಡಿದರು. ನೇಕಾರರ ಸಂಘದ ಅಧ್ಯಕ್ಷ ಕೃಷ್ಣಸ್ವಾಮಿ, ಸತ್ಯನಾರಾಯಣ, ಜೇನುಕಲ್ಲಪ್ಪ, ಬಸವರಾಜ್ ಗುಬ್ಬಿ, ಜಿಪಂ ಯೋಜನಾ ನಿರ್ದೇಶಕರಾದ ಕೌಸರ್ ರೇಷ್ಮಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ ಹಾಗೂ ನೇಕಾರ ಸಮಾಜದವರು ಇತರೆ ಮುಖಂಡರು ಹಾಜರಿದ್ದರು.