ಪಾಂಡವಪುರ ತಾಲೂಕಿನ ಜಯಂತಿನಗರ ಸಮೀಪದ ಶ್ರೀಶಂಭುಲಿಂಗೇಶ್ವರ ಎಜುಕೇಶನ್ ಟ್ರಸ್ಟ್‌ನಿಂದ ಕ್ಯಾನ್ಸರ್ ಜಾಗೃತಿಗಾಗಿ ಫೆ.8ರಂದು ಮ್ಯಾರಥಾನ್ ಆಯೋಜಿಸಲಾಗಿದೆ.

ಪಾಂಡವಪುರ:

ತಾಲೂಕಿನ ಜಯಂತಿನಗರ ಸಮೀಪದ ಶ್ರೀಶಂಭುಲಿಂಗೇಶ್ವರ ಎಜುಕೇಶನ್ ಟ್ರಸ್ಟ್‌ನಿಂದ ಕ್ಯಾನ್ಸರ್ ಜಾಗೃತಿಗಾಗಿ ಫೆ.8ರಂದು ಮ್ಯಾರಥಾನ್ ಆಯೋಜಿಸಲಾಗಿದೆ ಎಂದು ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ಪಟ್ಟಣದ ಐದು ದೀಪದ ವೃತ್ತದಲ್ಲಿ ಫೆ.8ರಂದು ಬೆಳಗ್ಗೆ 6ಕ್ಕೆ ಆರಂಭವಾಗಲಿರುವ ಮ್ಯಾರಥಾನ್ ದಲ್ಲಿ ಸ್ವತಃ ತಾವು ಕೂಡ ಪಾಲ್ಗೊಳ್ಳುವುದಾಗಿ ತಿಳಿಸಿದರು.

ಟ್ರಸ್ಟ್ ಕಾರ್ಯದರ್ಶಿ ಎಂ.ಪಂಚಲಿಂಗೇಗೌಡ ಮಾತನಾಡಿ, 14 ವರ್ಷದೊಳಗಿನ ಬಾಲಕ, ಬಾಲಕಿಯರಿಗೆ 2 ಕಿ.ಮೀವರೆಗೆ, 18 ವರ್ಷದೊಳಗಿನ ಬಾಲಕ, ಬಾಲಕಿಯರಿಗೆ 6 ಮತ್ತು 3 ಕಿ.ಮೀವರೆಗೆ, 30 ವರ್ಷದೊಳಗಿನ ಪುರುಷ, ಮಹಿಳೆಯರಿಗೆ 10 ಮತ್ತು 6 ಕಿ.ಮೀರವರೆಗೆ ಹಾಗೂ 30 ವರ್ಷ ಮೇಲ್ಪಟ್ಟ ಪುರುಷ, ಮಹಿಳೆಯರಿಗೆ 6 ಕಿ.ಮೀವರೆಗೆ ಮ್ಯಾರಥಾನ್ ಓಟ ಏರ್ಪಡಿಸಲಾಗಿದೆ. ಒಟ್ಟು 80 ಸಾವಿರವರೆಗೆ ನಗದು ಬಹುಮಾನ ನೀಡಲಾಗುವುದು ಎಂದರು.

ಇದೇ ವೇಳೆ ಎಸ್‌ಎಸ್‌ಇಟಿ ಕ್ಯಾಂಪಸ್ ಆವರಣದಲ್ಲಿ ಬೆಳಗ್ಗೆ 8ಕ್ಕೆ ಉಚಿತ ಕ್ಯಾನ್ಸರ್ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ. ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಎಸ್‌ಎಸ್‌ಇಟಿ ಆಡಳಿತಾಧಿಕಾರಿ ಪಿ.ಅಕ್ಷಯ್ ಹಾಗೂ ಟ್ರಸ್ಟಿಗಳು ಹಾಜರಿದ್ದರು.ರಾಮಚಂದ್ರ ಅವರ ಹುಟ್ಟುಹಬ್ಬ ಆಚರಣೆ

ಮಂಡ್ಯ: ತಾಲೂಕಿನ ಕೆರಗೋಡು ಗ್ರಾಮದಲ್ಲಿ ಬಿ.ಆರ್.ರಾಮಚಂದ್ರ ಹುಟ್ಟುಹಬ್ಬವನ್ನು ಜೆಡಿಎಸ್, ಬಿಜೆಪಿ ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಆಚರಿಸಿದರು.

ಬಿ.ಆರ್.ರಾಮಚಂದ್ರ ಅವರಿಗೆ ಮುಂದಿನ ದಿನಗಳಲ್ಲಿ ರಾಜಕೀಯದಲ್ಲಿ ಉತ್ತಮ ಭವಿಷ್ಯ ಸಿಗುವಂತಾಗಲಿ. 27 ಗ್ರಾಮಗಳಲ್ಲಿ ಹುಟ್ಟುಹಬ್ಬವನ್ನು ಕಾರ್ಯಕರ್ತರೊಂದಿಗೆ ಆಚರಿಸುತ್ತಿದೆ. ಕೆರಗೋಡಿನಲ್ಲಿ ವಿಜೃಂಭಣೆಯಿಂದ ಆಚರಿಸುತ್ತಿದ್ದೇವೆ. ಬಡವರಿಗೆ ಸೇವೆ ಮಾಡುತ್ತಾ ಬಂದಿರುವ ಬಿ.ಆರ್.ರಾಮಚಂದ್ರರಿಗೆ ರಾಜಕೀಯದಲ್ಲಿ ಯಶಸ್ಸು ಸಿಗಲೆಂದು ದೇವರಲ್ಲಿ ಪ್ರಾರ್ಥಿಸಿದರು.

ಈ ವೇಳೆ ಮನ್ಮುಲ್‌ ನಿರ್ದೇಶಕ ರಘುನಂದನ್, ನಗರಸಭೆ ಮಾಜಿ ಅಧ್ಯಕ್ಷ ನಾಗೇಶ್‌, ಮುಖಂಡರಾದ ಕಿರಣ್ ರಾಮೇಗೌಡ, ಬಿಡದಿ ಬಸವರಾಜು, ಹೇಮಂತ್, ರಾಮಲಿಂಗಯ್ಯ ಸೇರಿದಂತೆ ಹಲವರು ಇದ್ದರು.